newsfirstkannada.com

World Cup: ಲಂಕಾನ್ನರ ವಿರುದ್ಧ ಆಂಗ್ಲರಿಗೆ ಮುಖಭಂಗ.. ಹಾಲಿ ಚಾಂಪಿಯನ್ನರ ವಿಶ್ವಕಪ್ ಪ್ರಯಾಣ ಬಹುತೇಕ ಕೊನೆ!

Share :

27-10-2023

    ಯಾವೊಬ್ಬ ಬ್ಯಾಟ್ಸ್​​ಮನ್​ ಕೂಡ ದಿಟ್ಟ ಹೋರಾಟ ನಡೆಸಲಿಲ್ಲ

    ಶ್ರೀಲಂಕಾದ ವಿರುದ್ಧ ಎಷ್ಟು ವರ್ಷದಿಂದ ಇಂಗ್ಲೆಂಡ್​ ಪಂದ್ಯ ಗೆದ್ದಿಲ್ಲ?

    ಲಂಕಾನ್ನರ ವಿರುದ್ಧ ಹಾಲಿ ಚಾಂಪಿಯನ್​ ಇಂಗ್ಲೆಂಡ್​ಗೆ​ ಮುಖಭಂಗ

ಒನ್ಡೇ ವಿಶ್ವಕಪ್​​​​ನಲ್ಲಿ ಡಿಫೆಂಡಿಂಗ್ ಚಾಂಪಿಯನ್​ ಇಂಗ್ಲೆಂಡ್​​​​ ಪ್ಲಾಫ್​ ಶೋ ಕಂಟಿನ್ಯೂ ಆಗಿದೆ. ನಿರ್ಣಾಯಕ ಮ್ಯಾಚ್​​ನಲ್ಲಿ ಶ್ರೀಲಂಕಾ ವಿರುದ್ಧ ಹೀನಾಯ ಸೋಲು ಕಂಡಿದೆ. ಸಿಂಹಳೀಯರ ಕರಾರುವಕ್​​​​​ ದಾಳಿಗೆ ಬಟ್ಲರ್ ಪಡೆ ಕಂಗಾಲಾಯಿತು.

ಕ್ರಿಕೆಟ್​​ನಲ್ಲಿ ಏನು ಬೇಕಾದ್ರು ಆಗಬಹುದು ಅನ್ನೋದಕ್ಕೆ ಬಲಾಢ್ಯ ಇಂಗ್ಲೆಂಡ್​​ ತಂಡವೇ ಬೆಸ್ಟ್​ ಎಕ್ಸಾಂಪಲ್​​​. ವರ್ಲ್ಡ್ ಕ್ಲಾಸ್​ ಬ್ಯಾಟರ್ಸ್​. ಸಾಲಿಡ್​ ಬೌಲಿಂಗ್​​ ಲೈನ್​​ಅಪ್​​​. ಎಲ್ಲಕ್ಕಿಂತ ಹೆಚ್ಚಾಗಿ ಡಿಫೆಂಡಿಂಗ್ ಚಾಂಪಿಯನ್​​ ಅನ್ನೋ ಟ್ಯಾಗ್​​​ಲೈನ್​ ಬೇರೆ. ಈ ಬಾರಿ ಇಂಗ್ಲೆಂಡ್​​​ ಒನ್ಡೇ ಕ್ರಿಕೆಟ್​​ನ ಡಾನ್ ಆಗಿಯೇ ತೀರಲು ಪಣತೊಟ್ಟಿತ್ತು. ಆದ್ರೆ ಆ ಕನಸು ವಿಶ್ವಕಪ್​​​ನ ಫಸ್ಟ್​​ಹಾಫ್​​​ನಲ್ಲೇ ಭಗ್ನಗೊಂಡಿದೆ.

​​
ಹಾಲಿ ಚಾಂಪಿಯನ್​​​ ಇಂಗ್ಲೆಂಡ್​ ಸೆಮೀಸ್​​ ಕನಸು ಭಗ್ನ..?

ಡು ಆರ್​ ಡೈ ಬ್ಯಾಟಲ್​​ನಲ್ಲಿ ಬಟ್ಲರ್​​ ಪಡೆ ಮತ್ತೆ ಮುಗ್ಗರಿಸಿದೆ. ನಿನ್ನೆ ನಡೆದ ಭರ್ಜರಿ ಗೆಲುವು ಸಾಧಿಸಿದ ಶ್ರೀಲಂಕಾ ತಂಡ ಇಂಗ್ಲೆಂಡ್​​ಗೆ ಮತ್ತೊಂದು ಸೋಲಿನ ಬರೆ ಎಳೆದಿದೆ. ಇದರೊಂದಿಗೆ ಬಟ್ಲರ್​ ಪಡೆ ವಿಶ್ವಕಪ್​​​​ ಲೀಗ್​ ಸ್ಟೇಜ್​​ನಲ್ಲೆ ಹೊರ ಬಿದ್ದಂತಾಗಿದ್ದು, ಸೆಮಿಫೈನಲ್​​​ ಕನಸು ಬಹುತೇಕ ನುಚ್ಚುನೂರಾಗಿದೆ.

ಸೆಮೀಸ್​​​ ತಲುಪಬೇಕಾದ್ರೆ 9 ಪಂದ್ಯಗಳ ಪೈಕಿ ಕನಿಷ್ಠ 6ರಲ್ಲಿ ಗೆಲ್ಲಬೇಕು. ಆದ್ರೆ ಇಂಗ್ಲೆಂಡ್ ಟೀಮ್​​​ ಆಡಿದ 5 ಪಂದ್ಯಗಳಲ್ಲಿ ಜಸ್ಟ್​​ 1 ಗೆದ್ದು 4 ರಲ್ಲಿ ಮುಗ್ಗರಿಸಿದೆ. ಉಳಿದ 4 ಪಂದ್ಯಗಳಲ್ಲಿ ಗೆದ್ದರೂ ಪ್ರಯೋಜನವಿಲ್ಲ. ಯಾಕಂದ್ರೆ ಗೆಲುವಿನ ಸಂಖ್ಯೆ ಐದಕ್ಕೇರಲಿದೆ. ಸದ್ಯಕ್ಕೆ ಆಂಗ್ಲರ ಸ್ಟ್ರಗಲ್​ ನೋಡ್ತಿದ್ರೆ 4ಕ್ಕೆ ನಾಲ್ಕು ಪಂದ್ಯಗಳನ್ನ ಗೆಲ್ಲುವುದೂ ಕಷ್ಟವೇ. ಸೋ, ಕ್ರಿಕೆಟ್​ ಜನಕರ 2023ರ ಏಕದಿನ ವಿಶ್ವಕಪ್ ಪ್ರಯಾಣ ಬಹುತೇಕ ಕೊನೆಗೊಂಡಿದೆ.
​​
ಆಂಗ್ಲರ ವಿರುದ್ಧ ಲಂಕಾಗೆ ಸತತ 5ನೇ ಗೆಲುವು

ಕ್ರಿಕೆಟ್​​ ಆಟವನ್ನ ಹುಟ್ಟುಹಾಕಿದ ಇಂಗ್ಲೆಂಡ್​​ ತಂಡ ವಿಶ್ವಕಪ್​​ನಲ್ಲಿ ಶ್ರೀಲಂಕಾ ವಿರುದ್ಧ ಕಳೆದ 16 ವರ್ಷಗಳಿಂದ ಗೆದ್ದೇ ಇಲ್ಲ. ಪ್ರಸಕ್ತ ವಿಶ್ವಕಪ್ ಸೇರಿ ಒಟ್ಟು 5 ವಿಶ್ವಕಪ್​​​​​ ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿದೆ.

ಇಂಗ್ಲೆಂಡ್​​​​​ ವಿರುದ್ಧ ಲಂಕಾ 5-0 ಸಾಧನೆ

2007 ರ ಏಕದಿನ ವಿಶ್ವಕಪ್​​ನಲ್ಲಿ ಶ್ರೀಲಂಕಾ ತಂಡ ಇಂಗ್ಲೆಂಡ್​ ವಿರುದ್ಧ 2 ರನ್​ಗಳಿಂದ ಗೆದ್ದಿತ್ತು. 2011 ರಲ್ಲಿ 10 ವಿಕೆಟ್​ಗಳ ಪ್ರಚಂಡ ಗೆಲುವು ಸಾಧಿಸಿದ್ರೆ 2015 ರಲ್ಲಿ 9 ವಿಕೆಟ್​​​ಗಳಿಂದ ಜಯಭೇರಿ ಬಾರಿಸಿತ್ತು. 2019 ರಲ್ಲಿ 20 ರನ್​​ನಿಂದ ಗೆದ್ದರೆ ನಿನ್ನೆ ಲಂಕಾ 8 ವಿಕೆಟ್​ಗಳಿಂದ ಗೆದ್ದು ಬೀಗಿದೆ.

ಲಂಕಾ ಡೆಡ್ಲಿ ದಾಳಿಗೆ ಇಂಗ್ಲೆಂಡ್ ಧೂಳೀಪಟ..!

ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಟಾಸ್​ ಗೆದ್ದು ಬ್ಯಾಟಿಂಗಿಳಿದ ಇಂಗ್ಲೆಂಡ್​​ ಲೆಕ್ಕಾಚಾರ ತಲೆಕೆಳಗಾಯ್ತು. ಲಂಕಾದ ಘಾತಕ ದಾಳಿಗೆ ಆಂಗ್ಲ ಬ್ಯಾಟ್ಸ್​​ಮನ್​​ಗಳು ತರಗೆಲೆಯಂತೆ ಉದುರಿದ್ರು. ಯಾವೊಬ್ಬ ಬ್ಯಾಟ್ಸ್​​ಮನ್​ ಕೂಡ ದಿಟ್ಟ ಹೋರಾಟ ನಡೆಸಲಿಲ್ಲ. ರನ್ ಸ್ನೇಹಿ ಪಿಚ್​​ನಲ್ಲಿ ಕೇವಲ 156 ರನ್​ ಗಳಿಗೆ ಆಲೌಟಾಯ್ತು. ಇದು ಚಿನ್ನಸ್ವಾಮಿ ಮೈದಾನದಲ್ಲಿ ದಾಖಲಾದ ಅತಿ ಕಡಿಮೆ ಸ್ಕೋರ್​.

ಲಂಕಾಗೆ ಸುಲಭ ತುತ್ತಾದ ಬಟ್ಲರ್​​​ ಪಡೆ

ಇನ್ನು ಸಾಧಾರಣ ಗುರಿ ಬೆನ್ನಟ್ಟಿದ ಶ್ರೀಲಂಕಾ ತಂಡ ಕುಸಲ್​ ಪೆರೆರಾ ಹಾಗೂ ಕುಸಲ್​ ಮೆಂಡಿಸ್ ವಿಕೆಟ್​​​​​ ಅನ್ನ ಬೇಗನೆ ಕಳೆದುಕೊಳ್ತು. ಆದರೆ 3ನೇ ವಿಕೆಟ್​​​ಗೆ ಪಾತುಮ್​ ನಿಸ್ಸಂಕ ಹಾಗೂ ಸದೀರ ಸಮರವಿಕ್ರಮ ತಲಾ ಅರ್ಧಶತಕ ಬಾರಿಸಿ ಶೈನ್ ಆದ್ರು.

ಫೈನಲಿ ಲಂಕಾ ತಂಡ 25.4 ಓವರ್​​ಗಳಲ್ಲೆ ಟಾರ್ಗೆಟ್​​ ಚೇಸ್ತ್​​​ ಮಾಡ್ತು. 8 ವಿಕೆಟ್​ಗಳ ಗೆಲುವು ಕಂಡ ಸಿಂಹಳೀಯರು ಸೆಮಿಫೈನಲ್ ಆಸೆಯನ್ನ ಜೀವಂತವಾಗಿರಿಸಿ, ಹಾಲಿ ಚಾಂಪಿಯನ್​ ಇಂಗ್ಲೆಂಡ್​ ಮುಖಭಂಗ ಅನುಭವಿಸ್ತು.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

World Cup: ಲಂಕಾನ್ನರ ವಿರುದ್ಧ ಆಂಗ್ಲರಿಗೆ ಮುಖಭಂಗ.. ಹಾಲಿ ಚಾಂಪಿಯನ್ನರ ವಿಶ್ವಕಪ್ ಪ್ರಯಾಣ ಬಹುತೇಕ ಕೊನೆ!

https://newsfirstlive.com/wp-content/uploads/2023/10/ENG_SL_MATCH_1.jpg

Load More