newsfirstkannada.com

ಟಾಸ್ ಗೆದ್ದ ಇಂಗ್ಲೆಂಡ್.. ಭಾರತ ಫಸ್ಟ್ ಬ್ಯಾಟಿಂಗ್.. ಪ್ಲೇಯಿಂಗ್-11ನಲ್ಲಿ ಬದಲಾವಣೆ ಆಗಿದ್ಯಾ..?

Share :

29-10-2023

    ವಿಶ್ವಕಪ್​​ನ 29ನೇ ಪಂದ್ಯ ಲಖನೌನಲ್ಲಿ ಆರಂಭ

    ಇಂಗ್ಲೆಂಡ್ ಮತ್ತು ಭಾರತ ನಡುವೆ ಸೆಣಸಾಟ

    ಸತತ ಮತ್ತೊಂದು ಗೆಲುವಿನ ನಿರೀಕ್ಷೆಯಲ್ಲಿ ಭಾರತ

ಲಖನೌನಲ್ಲಿ ವಿಶ್ವಕಪ್​​ನ 29ನೇ ಪಂದ್ಯ ಆರಂಭವಾಗಿದ್ದು, ಟಾಸ್ ಗೆದ್ದಿರುವ ಇಂಗ್ಲೆಂಡ್, ಟೀಂ ಇಂಡಿಯಾವನ್ನು ಬ್ಯಾಟಿಂಗ್​​ಗೆ ಆಹ್ವಾನಿಸಿದೆ.

ವಿಶ್ವಕಪ್​​ನಲ್ಲಿ ಭಾರತ ಇವತ್ತು 6ನೇ ಪಂದ್ಯವನ್ನು ಆಡುತ್ತಿದೆ. ಸತತವಾಗಿ ಐದು ಪಂದ್ಯಗಳನ್ನು ಗೆದ್ದುಕೊಂಡಿರುವ ಭಾರತ ಮತ್ತೊಂದು ದೊಡ್ಡ ಗೆಲುವಿನ ನಿರೀಕ್ಷೆಯಲ್ಲಿದೆ. ಹಾಲಿ ಚಾಂಪಿಯನ್ ಇಂಗ್ಲೆಂಡ್ ತಂಡವು ಐದು ಪಂದ್ಯಗಳಲ್ಲಿ ಒಂದರಲ್ಲಿ ಗೆದ್ದು ವಿಶ್ವಕಪ್​​ನಲ್ಲಿ ನಿರಾಸೆ ಪ್ರದರ್ಶನ ನೀಡಿದೆ. ಭಾರತದ ವಿರುದ್ಧ ಪುಟಿದೇಳುವ ಮೂಲಕ ಬಲಿಷ್ಠ ಹೋರಾಟ ಕೊಟ್ಟರೂ ಅಚ್ಚರಿ ಇಲ್ಲ.

ಇನ್ನು ಭಾರತ ತಂಡವು ಪ್ಲೇಯಿಂಗ್-11ನಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. ನ್ಯೂಜಿಲೆಂಡ್ ವಿರುದ್ಧ ಆಡಿದ ಆಟಗಾರರನ್ನೇ ರೋಹಿತ್ ಶರ್ಮಾ ಉಳಿಸಿಕೊಂಡಿದ್ದಾರೆ. ಹಾರ್ದಿಕ್ ಪಾಂಡ್ಯ ಅಲಭ್ಯ ಹಿನ್ನೆಲೆಯಲ್ಲಿ ಅಶ್ವಿನ್​ ಅವರು ತಂಡಕ್ಕೆ ಎಂಟ್ರಿ ಸಾಧ್ಯತೆ ಇದೆ ಎಂದು ಹೇಳಲಾಗಿತ್ತು. ಆದರೆ ಅದು ಸುಳ್ಳಾಗಿದೆ.

ಟೀಂ ಇಂಡಿಯಾ: ರೋಹಿತ್ ಶರ್ಮಾ (ಕ್ಯಾಪ್ಟನ್), ಕೆ.ಎಲ್.ರಾಹುಲ್ (ವಿಕೆಟ್ ಕೀಪರ್), ಶುಬ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ರವೀಂದ್ರ ಜಡೇಜಾ, ಮೊಹಮ್ಮದ್ ಶಮಿ, ಕುಲ್ದೀಪ್ ಯಾದವ್, ಜಸ್​ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಟಾಸ್ ಗೆದ್ದ ಇಂಗ್ಲೆಂಡ್.. ಭಾರತ ಫಸ್ಟ್ ಬ್ಯಾಟಿಂಗ್.. ಪ್ಲೇಯಿಂಗ್-11ನಲ್ಲಿ ಬದಲಾವಣೆ ಆಗಿದ್ಯಾ..?

https://newsfirstlive.com/wp-content/uploads/2023/10/Team-India-1-1.jpg

Load More