ಆರ್ಗಾನಿಕ್ ಚೀಲದ ಹೆಸರಲ್ಲಿ ಕೋಟಿಗಟ್ಟಲೆ ವಂಚಿಸಿದ್ರಾ?
ಎನ್ವಿ ಗ್ರೀನ್ ಬಯೋಟೆಕ್ ಮಾಲೀಕನ ವಿರುದ್ಧ ಎಫ್ಐಆರ್
ಎನ್ವಿ ಗ್ರೀನ್ ಬಯೋಟೆಕ್ ಮಾಲೀಕ ಅಶ್ವತ್ಥ್ ಹೆಗ್ಡೆ ವಿರುದ್ಧ ದೂರು
ಬೆಂಗಳೂರು: ಲೈಫ್ಸ್ಟೈಲ್ ಬದಲಾಗ್ತಿದ್ದಂತೆ ಜನ ಆರ್ಗಾನಿಕ್ ಮೊರೆ ಹೋಗ್ತಿದ್ದಾರೆ. ಗೋ ಗ್ರೀನ್ ಅಂತ ಪ್ಲಾಸ್ಟಿಕ್ ಬಳಕೆಗೆ ಕಡಿವಾಣ ಹಾಕೋಕೆ ಮುಂದಾಗಿದ್ದಾರೆ. ಆದ್ರೆ ಇದೇ ರೀತಿ ಆರ್ಗಾನಿಕ್ ಕಾನ್ಸೆಪ್ಟ್ನಲ್ಲಿ ಜನರಿಗೆ ಪ್ಲಾಸ್ಟಿಕ್ ಮುಕ್ತ ಕೈ ಚೀಲ ಪರಿಚಯಿಸಿದ್ದ ಫೇಮಸ್ ಉದ್ಯಮಿ ವಿರುದ್ಧ ಕೋಟಿ ವಂಚನೆಯ ಆರೋಪ ಕೇಳಿ ಬಂದಿದೆ.
ಬಿಸಿ ನೀರಿನಲ್ಲಿ ಕರಗುವ ಪ್ರಕೃತಿ ಸ್ನೇಹಿ ಹ್ಯಾಂಡ್ ಕವರ್.. ಕೇಳಿದ್ರೆ ವ್ಹಾವ್ ಎಷ್ಟು ಒಳ್ಳೆ ಕಾನ್ಸೆಪ್ಟ್ ಅನ್ಸುತ್ತೆ.. ಇದ್ರಿಂದ ಪ್ಲಾಸ್ಟಿಕ್ನಿಂದ ಉಂಟಾಗ್ತಿದ್ದ ತ್ಯಾಜ್ಯಕ್ಕೂ ಮುಕ್ತಿ ಸಿಗುತ್ತೆ. ಇಂಥದೊಂದು ಪರಿಸರ ಸ್ನೇಹಿ ಐಡಿಯಾ ಕೇಳಿದ್ರೆನೇ ಎಂಥವರಿಗೂ ಕೈ ಜೋಡಿಸೋಣ ಅನ್ನಿಸದೆ ಇರದು. ಇದೇ ರೀತಿ ಪ್ಲಾಸ್ಟಿಕ್ ಬದಲು ಆರ್ಗಾನಿಕ್ ಬ್ಯಾಗ್ ಕಂಡು ಹಿಡಿದಿರುವುದಾಗಿ ಹೇಳಿಕೊಂಡಿದ್ದ ಅಶ್ವತ್ಥ್ ಹೆಗ್ಡೆ ಈ ಬಗ್ಗೆ ಸಾಕಷ್ಟು ಪ್ರಚಾರವನ್ನು ಪಡೆದುಕೊಂಡಿದ್ರು, ಆದ್ರೆ ಅಶ್ವತ್ಥ್ ಹೆಗ್ಡೆ ಉದ್ಯಮಿಯೊಬ್ಬರಿಗೆ ಯಂತ್ರ ಕೊಡುವುದಾಗಿ ಹೇಳಿ ವಂಚಿಸಿರೋ ಆರೋಪದ ಮೇಲೆ FIR ದಾಖಲಾಗಿದೆ.
ಅಶ್ವತ್ಥ್ ಹೆಗ್ಡೆ ವಿರುದ್ಧ ಉದ್ಯಮಿ ನೀಲಿಮಾ ಅನ್ನೋರು ಕೋಟಿ ಕೋಟಿ ಹಣ ಪಡೆದು, ವಂಚನೆ ಎಸಗಿರೋದಾಗಿ ದೂರು ನೀಡಿದ್ದಾರೆ.
ದೂರುದಾರೆ ಆರೋಪವೇನು?
ಎನ್ವಿ ಗ್ರೀನ್ ಬಯೋಟೆಕ್ನ ಸಂಸ್ಥಾಪಕರಾಗಿರೋ ಅಶ್ವತ್ಥ್ ಹೆಗ್ಡೆ, 1.26 ಕೋಟಿ ಮೌಲ್ಯದ ಯಂತ್ರ ಹಾಗೂ ಕಾರ್ಮಿಕರನ್ನ ಕೊಡೋದಾಗಿ ಹೇಳಿದ್ರು, ಇದಕ್ಕಾಗಿ 74 ಲಕ್ಷ ಹಣವನ್ನ ಅಶ್ವತ್ಥ್ ಹೆಗ್ಡೆಗೆ ಕೊಟ್ಟಿದ್ದೆ. 5 ಲಕ್ಷ ಬೆಲೆ ಬಾಳುವ ಯಂತ್ರವನ್ನ ಕೊಟ್ಟು ಮೋಸ ಮಾಡಿದ್ದಾರೆ. ಜೊತೆಗೆ ತಯಾರಿಕಾ ಜ್ಞಾನ ಇಲ್ಲದ ಕಾರ್ಮಿಕರನ್ನ ಅವ್ರು ಕೊಟ್ಟಿದ್ರು, ಚೀಲ ತಯಾರಿಕೆಗೆ ಬೇಕಾದ ಕಚ್ಚಾ ವಸ್ತುಗಳನ್ನ ಸಹ ಅವ್ರು ಕೊಟ್ಟಿಲ್ಲ. ಪ್ರಶ್ನೆ ಮಾಡಿದಾಗ ಹೊಸ ಯಂತ್ರವನ್ನ ಕೊಡಿಸೋದಾಗಿ ನಂಬಿಸಿದ್ರು, ತಮ್ಮದೇ ಮತ್ತೊಂದು ಕಂಪನಿ ಹೆಸರಲ್ಲಿ ಇದ್ದ ಯಂತ್ರ ವಾಪಸ್ ಪಡೆದ್ರು, ಆದ್ರೆ ಹೊಸ ಯಂತ್ರವನ್ನೂ ಕೊಟ್ಟಿಲ್ಲ, ಹಣವನ್ನೂ ವಾಪಸ್ ಕೊಟ್ಟಿಲ್ಲ-ನೀಲಿಮಾ, ದೂರುದಾರೆ
ಅಶ್ವತ್ಥ್ ಹೆಗ್ಡೆ ತಮ್ಮ ಮೇಲಿನ ಆರೋಪಗಳೆಲ್ಲಾ ಸುಳ್ಳು, ಹೆಚ್ಚಿನ ಹಣಕ್ಕಾಗಿ ನಿರಂತರವಾಗಿ ಬ್ಲಾಕ್ಮೇಲ್ ಮಾಡ್ತಿದ್ದಾರೆ ಅಂತ ಹೇಳಿದ್ರೆ, ಅತ್ತ ಅಶ್ವತ್ಥ್ ಹೆಗ್ಡೆ ವಿರುದ್ಧ ಉದ್ಯಮಿ ನೀಲಿಮಾ ನೀಡಿರೋ ದೂರಿನ ಮೇಲೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಾಗಿದೆ. 406 ಹಾಗೂ 420 ಸೆಕ್ಷನ್ಗಳಡಿಯಲ್ಲಿ ಎಫ್ಐಆರ್ ಆಗಿದೆ. ತನಿಖೆ ಮುಂದುವರೆದಿದ್ದು, ಸತ್ಯಾಸತ್ಯತೆ ಹೊರ ಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ