newsfirstkannada.com

ಪರಿಚಯ, ಪ್ರೇಮ, ಮದುವೆ ಬಳಿಕ ಎಸ್ಕೇಪ್​.. ಮಹಿಳೆಯಿಂದ ಮೋಸ ಹೋಗಿ ಠಾಣೆ ಮೆಟ್ಟಿಲೇರಿದ ಗಂಡ

Share :

17-09-2023

    ಫೇಸ್​ಬುಕ್​ನಲ್ಲಿ ಪರಿಚಯ ಆಮೇಲೆ ನಡೆದಿದ್ದೇ ಬೇರೆ

    ಮಹಿಳೆಗೆ ಸಾಥ್​ ಕೊಟ್ಟ ಅಕ್ಕ, ಭಾವ.. ಎಫ್​ಐಆರ್​ ದಾಖಲು

    ಮದುವೆಗೂ ಮುನ್ನ ಹಣ, ಚಿನ್ನ, ಐಫೋನ್​ಗೆ ಡಿಮ್ಯಾಂಡ್​​

ಬೆಂಗಳೂರು: ಮಹಿಳೆಯೊಬ್ಬಳು ಪರಿಚಯ, ಪ್ರೇಮ, ಮದುವೆ ಎಂದು ಗಂಡನನ್ನು ಬಿಟ್ಟು ಎಸ್ಕೇಪ್ ಆದ ಘಟನೆ ಚಂದ್ರಲೇಔಟ್​​ನಲ್ಲಿ ನಡೆದಿದೆ. ಇದೀಗ ಮಹಿಳೆಯ ಮೋಸ ಮಾಡಿದ್ದಾಳೆಂದು ಗಂಡ ಆರೋಪಿಸಿದ್ದು, ಪೊಲೀಸ್​ ಠಾಣೆ ಮೆಟ್ಟಿಲೇರಿ ದೂರು ನೀಡಿದ್ದಾನೆ.

ಸಂತೋಷ್ ಎಂಬಾತನಿಗೆ ಫೇಸ್ ಬುಕ್ ನಲ್ಲಿ ಮಹಿಳೆ ಪರಿಚಯವಾಗಿದ್ದಳು. ಪರಿಚಯವಾದ ಮಹಿಳೆಗೆ 2018 ರಲ್ಲಿ ತಾನು ಕೆಲಸ ಮಾಡುವ ಕಂಪನಿಯಲ್ಲಿ ಸಂತೋಷ್​ ಕೆಲಸ ಕೊಡಿಸಿದ್ದ. ಇದೇ ಪರಿಚಯದ ಮೇಲೆ ಸಂತೋಷ್ ಮತ್ತು ಮಹಿಳೆ ನಡುವೆ ಪ್ರೇಮಾಂಕುರವಾಯಿತು. ಬಳಿಕ ಮದುವೆಯಾಗಲು ಇಬ್ಬರು ನಿರ್ಧರಿಸಿದ್ದರು.

ಮೊದಲೇ ಮದುವೆಯಾಗಿತ್ತು

ಅದರೆ ಈ ಮೊದಲೇ ಮಹಿಳೆಗೆ ಮದುವೆಯಾಗಿತ್ತು. ಮದುವೆ ವಿಚಾರ ಮುಚ್ಚಿಟ್ಟು ಸಂತೋಷ್ ಜೊತೆ ಮತ್ತೊಂದು ಮದುವೆ ಆಗಲು ಪ್ರಯತ್ನಿಸಿದ್ದಾಳೆ. ಮಹಿಳೆ ಅಕ್ಕ ಮತ್ತು ಭಾವ ಅರುಣ್​ನಿಂದ ಕೂಡ ಆಕೆಗೆ ಮದುವೆ ಮಾಡಿಸಲು ಪ್ರಯತ್ನಿಸಿದ್ದಾರೆ.

5 ಲಕ್ಷ ಪೀಕಿದ ಭಾವ

ಸಂತೋಷ್​ ಅಮಾಯಕ ಯುವಕ ಅಂತ ಮದುವೆ ತಯಾರಿ ನಡೆಸಲಾಗಿದೆ. ಅತ್ತ ಭಾವ ತನ್ನ ನಾದಿನಿ ಜೊತೆ ಮದುವೆ ಮಾಡಿಸಲು ಆತನಿಂದ ಐದು ಲಕ್ಷ ಪೀಕಿದ್ದಾನೆ. ನಂತರ ಮಹಿಳೆಯ ಅಕ್ಕನಿಂದ 15 ಲಕ್ಷ ಮೌಲ್ಯದ ಆಭರಣಗಳಿಗೆ ಸ್ಕೇಚ್ ಹಾಕಿದ್ದಾರೆ. ಮಹಿಳೆಯ ಅಕ್ಕ ಆಕೆಗೆ ಮದುವೆ ಮಾಡಿಸಲು ಆತನ ಬಳಿ ಚಿನ್ನಾಭರಣ ಮಾಡಿಸಲು ಹೇಳಿದ್ದರು. ಭಾವ, ಅಕ್ಕನ ಸರದಿಯಾಗ್ತಿದ್ದಂತೆ ಮಹಿಳೆಯ ದರ್ಬಾರ್ ನಡೆಸಲು ಮುಂದಾಗುತ್ತಾಳೆ.

ಐಫೋನ್​ ಕೊಡಿಸು

ಇನ್ನು ಮದುವೆಗೆ ಮುಂಚೆ ಐಫೋನ್ ಡಿಮ್ಯಾಂಡ್ ಮಾಡಿದ್ದಾಳೆ. ಮನ ಮೆಚ್ಚಿದ ಹುಡುಗಿ ಕೇಳಿದ್ದಳು ಅಂತ ಸಂತೋಷ್​ ಐಫೋನ್‌ ಕೊಡಿಸಿದ್ದ. ಹಣ, ಆಭರಣ, ಮೊಬೈಲ್ ಫೋನ್ ಬಳಿಕ ಮದುವೆ ಆಗಲು ಮುಂದಾಗಿದ್ದಾರೆ.

ಮೂರು ತಿಂಗಳ ಸಂಸಾರ

2022 ರಂದು ನವೆಂಬರ್ ನಲ್ಲಿ ಮದ್ದೂರಮ್ಮ ದೇವಾಲಯದಲ್ಲಿ ಈ ಜೋಡಿ ಮದುವೆಯಾಗುತ್ತಾರೆ. ಅದ್ದೂರಿ ಖರ್ಚಿನಲ್ಲಿ ವಿವಾಹ ನಡೆಯುತ್ತದೆ. ಆದರೆ ಮದುವೆಯಾಗಿ ಕೇವಲ ಮೂರು ತಿಂಗಳು ಕಾಲ ಸಂಸಾರ ನಡೆಸಿದ್ದಾರೆ.

ಇನ್ನು ಸಂತೋಷ್​ ಮದುವೆಯಾದ್ರು ದೈಹಿಕ ಸಂಪರ್ಕ ಮಾಡಿಲ್ಲವೆಂದು ದೂರು ನೀಡಿದ್ದಾನೆ. ಮೋಸ ಮಾಡುವ ಉದ್ದೇಶದಿಂದಲೇ ಮದುವೆಯಾಗಿದ್ದಾಳೆ ಎಂದು ದೂರಿನಲ್ಲಿ ಹೇಳಿದ್ದಾಳೆ. ಅಲ್ಲದೇ ಮಹಿಳೆ ಎಸ್ಕೇಪ್ ಆದ ನಂತರ ಭಾವ ಅರುಣ್​ ಹಣ ಪೀಕಿದ್ದಾನೆ. ಹೀಗಾಗಿ ಮಹಿಳೆ ಮತ್ತು ಅಕ್ಕ ಭಾವನ ಮೇಲೋ ಸಂತೋಷ್​ ದೂರು ನೀಡಿದ್ದಾನೆ.

ಚಂದ್ರಲೇಔಟ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮಹಿಳೆ, ಆಕೆಯ ಅಕ್ಕ ಮತ್ತು ಭಾವ ಅರುಣ್ ವಿರುದ್ಧ ಎಫ್ಐಆರ್ ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪರಿಚಯ, ಪ್ರೇಮ, ಮದುವೆ ಬಳಿಕ ಎಸ್ಕೇಪ್​.. ಮಹಿಳೆಯಿಂದ ಮೋಸ ಹೋಗಿ ಠಾಣೆ ಮೆಟ್ಟಿಲೇರಿದ ಗಂಡ

https://newsfirstlive.com/wp-content/uploads/2023/09/Escape.jpg

Load More