ಯಾರಿಗೆಲ್ಲಾ ಜಾಕಪಾಟ್.. ಯಾರಿಗೆ ಶಾಕ್..?
ರೋಹಿತ್ ನಾಯಕತ್ವದಲ್ಲಿ ಯಾರಿಗೆಲ್ಲಾ ಚಾನ್ಸ್..?
ಶ್ರೇಯಸ್ ಮತ್ತು K L ರಾಹುಲ್ ಕಥೆ ಏನು?
ಏಷ್ಯಾಕಪ್ ಸೆಲೆಕ್ಷನ್ ಹೈಡ್ರಾಮಾಕ್ಕೆ ಇಂದು ಸೆಲೆಕ್ಷನ್ ಕಮಿಟಿ ತೆರೆ ಎಳೆಯಲು ಮುಂದಾಗಿದೆ. ಹಲವು ದಿನಗಳಿಂದ ಅಳೆದು ತೂಗಿ, ಲೆಕ್ಕಚಾರ ಹಾಕಿರೋ ಸೆಲೆಕ್ಷನ್ ಕಮಿಟಿ, ಕೆಲ ಅಚ್ಚರಿ ಆಯ್ಕೆಗಳ ಜೊತೆ ಜೊತೆಗೆ ಕೆಲವರಿಗೆ ಶಾಕ್ ನೀಡೋಕೆ ಮುಂದಾಗಿದೆ. ಹಾಗಾದ್ರೆ, ಇಂದು ಪ್ರಕಟವಾಗೋ ಏಕದಿನ ಏಷ್ಯಾಕಪ್ ಕೂಟಕ್ಕೆ ಯಾರಿಗೆಲ್ಲಾ ಟಿಕೆಟ್ ಸಿಗೋ ಚಾನ್ಸ್ ಇದೆ.
ಇಂದೇ ಏಷ್ಯಾಕಪ್ಗೆ ಟೀಮ್ ಇಂಡಿಯಾ ಪ್ರಕಟ..
ಏಷ್ಯಾನ್ ರಾಷ್ಟ್ರಗಳ ವಿಶ್ವ ಕೂಟಕ್ಕೆ ಜಸ್ಟ್ 9 ದಿನಗಳಷ್ಟೇ ಬಾಕಿಯಿದ್ದು, ಈ ಪ್ರತಿಷ್ಠತ್ಮಾಕ ಏಷ್ಯಾಕಪ್ ಟೂರ್ನಿಗೆ ಟೀಮ್ ಇಂಡಿಯಾ ಸಜ್ಜಾಗ್ತಿದೆ. ಈಗಾಗಲೇ ಕಾದುನೋಡುವ ತಂತ್ರವನ್ನ ಅನುಸರಿಸಿರುವ ಅಜಿತ್ ಅಗರ್ಕರ್ ನೇತೃತ್ವದ ಸೆಲೆಕ್ಷನ್ ಕಮಿಟಿ, ಇಂದು ಮಧ್ಯಾಹ್ನ ಬಲಿಷ್ಠ ತಂಡವನ್ನ ಪ್ರಕಟಿಸೋದು ಬಹುತೇಕ ಖಾಯಂ ಆಗಿದೆ.
ಹೌದು. ಇಂದು ಕೋಚ್ ರಾಹುಲ್ ದ್ರಾವಿಡ್ ಆ್ಯಂಡ್ ಕ್ಯಾಪ್ಟನ್ ರೋಹಿತ್ ಜೊತೆ ಮೀಟಿಂಗ್ ನಡೆಸಲಿರುವ ಅಜಿತ್ ಅಗರ್ಕರ್, ಮಧ್ಯಾಹ್ನ 1.30ರ ಬಳಿಕ ಫೈನಲ್ ಸ್ಕ್ವಾಡ್ ಪ್ರಕಟಿಸಲಿದ್ದಾರೆ. ಈ ವೇಳೆ ಅಜಿತ್ ಅಗರ್ಕರ್ ಜೊತೆಗಿನ ಪ್ರೆಸ್ ಕಾನ್ಫೆರೆನ್ಸ್ನಲ್ಲಿ ನಾಯಕ ರೋಹಿತ್, ಕೋಚ್ ದ್ರಾವಿಡ್ ಉಪಸ್ಥಿತರಿರಲಿದ್ದಾರೆ. ಆದರೆ, ಈ ಏಷ್ಯಾ ಮಹಾ ಕೂಟದಲ್ಲಿ ಯಾರಿಗೆಲ್ಲಾ ಚಾನ್ಸ್ ಸಿಗಲಿದೆ ಎಂಬ ಕುತೂಹಲ ಕ್ರಿಕೆಟ್ ವಲಯದಲ್ಲಿ ಗರಿಗೆದವರಿವೆ.
ಮೊದಲ ಬಾರಿಗೆ ಸಿಗ್ತಿದೆ ಫುಲ್ ಸ್ಟ್ರೆಂಥ್ ಟೀಮ್..!
ವಿರಾಟ್ ಕೊಹ್ಲಿ ನಿರ್ಗಮನದ ಬಳಿಕ ಹಿಟ್ಮ್ಯಾನ್ ರೋಹಿತ್ ನಾಯಕತ್ವದ ಟೀಮ್ ಇಂಡಿಯಾ, ಮಹತ್ವದ ಟೂರ್ನಿಗಳಲ್ಲಿ ಫುಲ್ ಸ್ಟ್ರೆಂಥ್ ಟೀಮ್ ಆಡಿದ್ದೆ ಇಲ್ಲ. ಇದಕ್ಕೆ ಬೆಸ್ಟ್ ಎಕ್ಸಾಂಪಲ್, 2022ರ ಏಷ್ಯಾಕಪ್, 2022 ಟಿ20 ವಿಶ್ವಕಪ್ನಲ್ಲಿ ಜಸ್ಪ್ರೀತ್ ಬೂಮ್ರಾ ಆ್ಯಂಡ್ ಜಡೇಜಾ ಅನುಪಸ್ಥಿತಿ. ಆದ್ರೀಗ ಮೊದಲ ಬಾರಿಗೆ ಹಿಟ್ಮ್ಯಾನ್ ರೋಹಿತ್ಗೆ ಕೋರ್ ಟೀಮ್ ಸಿಗೋ ಎಲ್ಲಾ ಸಾಧ್ಯತೆಗಳಿವೆ.
ಆರಂಭಿಕರು ಫಿಕ್ಸ್.. ಉಪ ನಾಯಕನಿಗೆ ಶಾಕ್..!
ಏಷ್ಯಾಕಪ್ಗೆ ಪ್ರಕಟಿಸುವ ತಂಡದಲ್ಲಿ ಆರಂಭಿಕರಾಗಿ ಹಿಟ್ಮ್ಯಾನ್ ರೋಹಿತ್ ಜೊತೆ ಶುಭಮನ್ಗೆ ಚಾನ್ಸ್ ಸಿಗಲಿದ್ದು, ಇಶಾನ್ ಕಿಶನ್ ಬ್ಯಾಕ್ ಆಪ್ ಓಪನರ್ ಆ್ಯಂಡ್ ವಿಕೆಟ್ ಕೀಪರ್ ಆಗೋದು ಬಹುತೇಕ ಕನ್ಫರ್ಮ್. ಇನ್ನು 3ನೇ ಕ್ರಮಾಂಕದಲ್ಲಿ ಕಿಂಗ್ ಕೊಹ್ಲಿಗೆ ಸಹಜವಾಗೇ ಸ್ಥಾನ ಸಿಗಲಿದ್ದು, ಉಪ ನಾಯಕ ಹಾರ್ದಿಕ್ ಪಟ್ಟಕ್ಕೆ ಕುತ್ತು ಎದುರಾಗುವ ಸಾಧ್ಯತೆ ಇದೆ.
ಸಂಜುಗೆ ಕೊಕ್.. ತಿಲಕ್ಗೆ ಬಹುಪರಾಕ್..?
ವೆಸ್ಟ್ ಇಂಡೀಸ್ ಟೂರ್ನಲ್ಲಿ ಕಂಪ್ಲೀಟ್ ಫೇಲ್ ಆಗಿದ್ದ ಸಂಜು ಸ್ಯಾಮ್ಸನ್ಗೆ, ಏಷ್ಯಾಕಪ್ನಿಂದ ಹೊರಗುಳಿಯೋದು ಬಹುತೇಕ ಕನ್ಫರ್ಮ್. ಆದರೆ, ಇದೇ ಟೂರ್ನಲ್ಲಿ ಎಲ್ಲರ ಮನ ಗೆದ್ದ ತಿಲಕ ವರ್ಮ, ಎಷ್ಯಾಕಪ್ ಮೂಲವೇ ಏಕದಿನ ತಂಡಕ್ಕೆ ಎಂಟ್ರಿಯಾಗುವ ಎಲ್ಲಾ ಲೆಕ್ಕಚಾರ ಇದೆ. ಇವರಷ್ಟೇ ಅಲ್ಲ.! ಸೂರ್ಯಕುಮಾರ್ ಯಾದವ್ಗೂ ತಂಡದಲ್ಲಿ ಸ್ಥಾನ ಫಿಕ್ಸ್.
ಶ್ರೇಯಸ್ & ರಾಹುಲ್ ಕಥೆ ಏನು..?
ಸದ್ಯ ಟೀಮ್ ಇಂಡಿಯಾದ ಚಿಂತೆಗೆ ಕಾರಣವಾಗಿದ್ದೇ ಈ ಇಬ್ಬರು. ಇವರಿಂದಲೇ ಕಾದುನೋಡುವ ತಂತ್ರ ಅನುಸರಿಸಿದ್ದ ಸೆಲೆಕ್ಷನ್ ಕಮಿಟಿ, ಕೆ.ಎಲ್.ರಾಹುಲ್ಗೆ ವಿಕೆಟ್ ಕೀಪರ್ ಆ್ಯಂಡ್ ಬ್ಯಾಟ್ಸ್ಮನ್ ಜವಾಬ್ದಾರಿ ಹೊರಿಸಲಿದೆ. ಅಷ್ಟೇ ಅಲ್ಲ. ಎನ್ಸಿಎನಲ್ಲಿ 50 ಓವರ್ ಫೀಲ್ಡಿಂಗ್ ನಡೆಸಿರುವ ಶ್ರೇಯಸ್, 38 ಓವರ್ಗಳ ಕಾಲ ಬ್ಯಾಟಿಂಗ್ ನಡೆಸಿದ್ದಾರೆ. ಹೀಗಾಗಿ ಏಷ್ಯಾಕಪ್ಗೆ ಎಂಟ್ರಿ ನೀಡುವ ಲೆಕ್ಕಚಾರದಲ್ಲಿದ್ದಾರೆ. ಆದರೆ, ಇವರ ಫಿಟ್ನೆಸ್ ಕ್ಲಿಯರೆನ್ಸ್ ಎಷ್ಟರ ಮಟ್ಟಿಗಿದೆ ಎಂಬ ಅನುಮಾನ ಸಹಜವಾಗೇ ಫ್ಯಾನ್ಸ್ಗೆ ಕಾಡ್ತಿದೆ.
ನಾಲ್ವರು ಆಲ್ರೌಂಡರ್ಗಳಿಗೆ ಸ್ಥಾನ ಗ್ಯಾರಂಟಿ
ಆಲ್ರೌಂಡರ್ ಕೋಟಾದಲ್ಲಿ ಹಾರ್ದಿಕ್ ಪಾಂಡ್ಯ, ರವೀಂದ್ರ ಜಡೇಜಾ ಫಸ್ಟ್ ಚಾಯ್ಸ್ ಪ್ಲೇಯರ್ಗಳಾಗಿದ್ದು, ಇವರ ಜೊತೆಗೆ ಜೊತೆಗೆ ಸ್ಪಿನ್ ಆಲ್ರೌಂಡರ್ ಆಗಿ ಅಕ್ಷರ್ ಪಟೇಲ್, ವೇಗದ ಬೌಲಿಂಗ್ ಆಲ್ರೌಂಡರ್ ಆಗಿ ಶಾರ್ದೂಲ್ ಠಾಕೂರ್ ಸ್ಥಾನ ಪಡೆಯೋ ಸಾಧ್ಯತೆಯನ್ನ ತಳ್ಳಿಹಾಕುವಂತಿಲ್ಲ.
ಅಶ್ವಿನ್ಗೆ ಸಿಗಲಿದೆಯಾ ಕಮ್ಬ್ಯಾಕ್ ಭಾಗ್ಯ..?
ಸ್ಪಿನ್ ಕೋಟಾದಲ್ಲಿ ಕುಲ್ದೀಪ್ ಆಯ್ಕೆ ಸುಲಭವಾಗಿದ್ದು, ಲೆಗ್ ಸ್ಪಿನ್ನರ್ ಯಜುವೇಂದ್ರ ಚಹಲ್ಗೆ ನಿರಾಸೆ ಎದುರಾಗುವ ಸಾಧ್ಯತೆ ಇದೆ. ಯಾಕಂದ್ರೆ, ಸದ್ಯ ಟೀಮ್ ಇಂಡಿಯಾದಲ್ಲಿ ಆಫ್ ಸ್ಪಿನ್ನರ್ಗಳ ಕೊರತೆ ಕಾಡ್ತಿದೆ. ಹೀಗಾಗಿ 6 ತಿಂಗಳ ಬಳಿಕ ಮತ್ತೆ, ಅಶ್ವಿನ್ ಏಕದಿನ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ರೂ ಅಚ್ಚರಿ ಇಲ್ಲ.
ಬಹು ದಿನಗಳ ನಂತರ ಸಿಗಲಿದೆಯಾ ತ್ರಿವಳಿಗಳ ಬಲ..!
ಏಷ್ಯಾಕಪ್ನಲ್ಲಿ ಟೀಮ್ ಇಂಡಿಯಾದ ಬೌಲಿಂಗ್ ಅಟ್ಯಾಕ್ ನಿಜಕ್ಕೂ ನೆಕ್ಸ್ಟ್ ಲೆವೆಲ್ನಲ್ಲಿ ಇರೋದು ಗ್ಯಾರಂಟಿ. ಯಾಕಂದ್ರೆ, ಯಾರ್ಕರ್ ಕಿಂಗ್ ಜಸ್ಪ್ರೀತ್ ಬೂಮ್ರಾ ಜೊತೆಗೆ ಮೊಹಮ್ಮದ್ ಸಿರಾಜ್, ಅನುಭವಿ ಮೊಹಮ್ಮದ್ ಶಮಿ ಸ್ಥಾನ ಪಡೆಯಲಿದ್ದು, ಈ ತ್ರಿವಳಿ ಪೇಸರ್ಗಳ ಉಪಸ್ಥಿತಿ ಟೀಮ್ ಇಂಡಿಯಾ ಬೌಲಿಂಗ್ ಬಲವನ್ನು ಮತ್ತಷ್ಟು ಹೆಚ್ಚಾಗಲಿದೆ. ಒಟ್ನಲ್ಲಿ! ಬಹುದಿನಗಳಿಂದ ಏಷ್ಯಾಕಪ್ ಟೂರ್ನಿಗೆ ಬಲಿಷ್ಠ ತಂಡ ಪ್ರಕಟಿಸಲು ಕಸರತ್ತು ನಡೆಸಿದ್ದ ಸೆಲೆಕ್ಷನ್ ಕಮಿಟಿ, ಅಂತಿಮವಾಗಿ ಇಂದು ತಂಡವನ್ನ ರಿವೀಲ್ ಮಾಡ್ತಿದ್ದು. ಏನೆಲ್ಲಾ ಸಪ್ರೈಸ್ ನೀಡುತ್ತೆ ಜಸ್ಟ್ ವೇಯ್ಟ್ ಆ್ಯಂಡ್ ಸೀ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ