newsfirstkannada.com

ದರ್ಶನ್‌ ಹಲ್ಲೆ ನಡೆಸಿದ ಬಗ್ಗೆ ನಿರ್ದಿಷ್ಟ ಉಲ್ಲೇಖ ಇಲ್ಲ.. ಕುಖ್ಯಾತ ನಟ ಪಾರಾಗಲು ಸಾಧ್ಯವೇ?

Share :

Published June 20, 2024 at 7:40am

  ರೇಣುಕಾಸ್ವಾಮಿ ಹತ್ಯೆ ಕೇಸಿನಲ್ಲಿ 17 ಮಂದಿ ಆರೋಪಿಗಳು

  ನೇರವಾಗಿ ಭಾಗಿಯಾಗದ ಇಬ್ಬರು ಸೇರಿ 10 ಮಂದಿಯ ಸಾಕ್ಷ್ಯ

  ಶವ ವಿಲೇವಾರಿಗೆ ದರ್ಶನ್‌ 30 ಲಕ್ಷ ಕೊಟ್ಟಿದ್ದಾಗಿ ಹೇಳಿಕೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಈಗಾಗಲೇ ನಟ ದರ್ಶನ್‌ ಕಂಬಿ ಎಣಿಸತೊಡಗಿದ್ದಾರೆ. ಪವಿತ್ರಾ ಗೌಡ ಸೇರಿದಂತೆ ಈ ಪ್ರಕರಣದಲ್ಲಿ ಸಾಥ್‌ ಕೊಟ್ಟ 17 ಆರೋಪಿಗಳು ಈಗಾಗಲೇ ಅಂದರ್‌ ಆಗಿದ್ದಾರೆ. ಪೊಲೀಸರು ಬಹುತೇಕ ತನಿಖೆ ಪೂರ್ಣಗೊಳಿಸಿದ್ದು, ಚಾರ್ಜ್‌ ಶೀಟ್‌ ಸಲ್ಲಿಕೆಗೆ ಸಿದ್ಧತೆ ನಡೀತಿದೆ.

ರೇಣುಕಾಸ್ವಾಮಿಯ ಕಿಡ್ನಾಪ್‌ ಮತ್ತು ಹತ್ಯೆ ಪ್ರಕರಣದಲ್ಲಿ ಅರೆಸ್ಟಾಗಿರೋ ಆರೋಪಿಗಳು 17 ಮಂದಿ. ಸುಮಾರು 10 ಜನರನ್ನ ಸಾಕ್ಷಿಗಳಾಗಿ ಪರಿಗಣಿಸಲಾಗಿದೆ. ಎಲ್ಲರ ಸ್ವ ಇಚ್ಛಾ ಹೇಳಿಕೆಗಳನ್ನ ದಾಖಲಿಸಲಾಗಿದೆ. ಈ ಪೈಕಿ ದರ್ಶನ್‌ಗೆ ಮುಳುವಾಗುವ ಅಂಶಗಳಾವುವು ಅನ್ನೋದು ಮಹತ್ವ ಪಡೆದುಕೊಳ್ಳುತ್ತೆ.

ಇದನ್ನೂ ಓದಿ:ಕೃಪೆ ತೋರದ ಮಳೆರಾಯ.. ದೆಹಲಿಯಲ್ಲಿ 48 ಗಂಟೆಯಲ್ಲಿ 50 ಮಂದಿ ಸಾವು.. ಏನಾಯ್ತು..

ದರ್ಶನ್‌ಗೆ ಮುಳುವಾಗುವ ಅಂಶಗಳೇನು?

 • ಸಹ ಆರೋಪಿಗಳ ಹೇಳಿಕೆಗಳಲ್ಲಿ ದರ್ಶನ್‌ ಪಾತ್ರ
 • ಶೆಡ್‌ನ ಸೆಕ್ಯೂರಿಟಿ ಗಾರ್ಡ್‌ ನೀಡಿರೋ 164 ಹೇಳಿಕೆ
 • ದರ್ಶನ್‌ ಹಲ್ಲೆ ನಡೆಸಿದ್ದನ್ನ ಸೆಕ್ಯೂರಿಟಿ ಗಾರ್ಡ್‌ ಐವಿಟ್ನೆಸ್‌
 • ಶವ ಸಾಗಿಸಲು ಕಾರು ಕೊಟ್ಟ ಪುನೀತ್‌ ಕೂಡಾ ಸಾಕ್ಷಿ
 • ದರ್ಶನ್‌ ಮತ್ತು ಇತರೆ ಆರೋಪಿಗಳ ಮೊಬೈಲ್‌ ಸಂಭಾಷಣೆ
 • ಶೆಡ್‌ನ ಸಿಸಿಟಿವಿ ಫೂಜೇಟ್‌ಗಳು ಕೂಡಾ ಈ ಪ್ರಮುಖ ಸಾಕ್ಷ್ಯ

ಕಾನೂನಿನಲ್ಲಿ ಆರೋಪಿ ಸ್ಥಾನದಲ್ಲಿ ನಿಂತ ವ್ಯಕ್ತಿ, ಅಪರಾಧಿ ಅನ್ನೋದು ಸಾಬೀತಾಗದೇ ಶಿಕ್ಷೆ ವಿಧಿಸುವುದಿಲ್ಲ. ಹಾಗೇನೇ ಆರೋಪಿ ಸ್ಥಾನದಲ್ಲಿ ನಿಲ್ಲೋ ದರ್ಶನ್‌ನ ಪಾರು ಮಾಡಲು ಆತನ ಪರ ವಕೀಲರು ಸಕಲ ರೀತಿಯಲ್ಲೂ ಪ್ರಯತ್ನಿಸಲಿದ್ದಾರೆ. ಹಾಗೇನೇ ದರ್ಶನ್‌ಗೆ ಕೇಸಿನಲ್ಲಿ ಪಾರಾಗಲು ಕೂಡಾ ಕೆಲ ಅಂಶಗಳು ಸಹಕಾರಿಯಾಗೋ ಸಾಧ್ಯತೆಯಿದೆ.

ಇದನ್ನೂ ಓದಿ:36 ಗಂಟೆಯಲ್ಲಿ ಗುಟ್ಟು ರಟ್ಟು.. ಆ ದಿನ ಕುಂತ್ರೂ, ನಿಂತ್ರೂ ಚಡಪಡಿಕೆ.. ದರ್ಶನ್ ತೊಳಲಾಟ, ನಾಟಕ..!

ಹತ್ಯೆಯಲ್ಲಿ ಆರೋಪಿಗಳೆಲ್ಲರೂ ಭಾಗಿ ಎಂದು ಉಲ್ಲೇಖ
ಪೊಲೀಸರು ಸಲ್ಲಿಸಿರೋ ರಿಮಾಂಡ್ ಅರ್ಜಿಯನ್ನ ಕೂಲಂಕುಷವಾಗಿ ಗಮನಿಸಿದ್ರೆ ರೇಣುಕಾಸ್ವಾಮಿಯ ಹತ್ಯೆಯಲ್ಲಿ ಆರೋಪಿಗಳೆಲ್ಲರೂ ಭಾಗಿಯಾಗಿದ್ದಾರೆ ಎಂದು ಉಲ್ಲೇಖಿಸಲಾಗಿದೆಯೇ ಹೊರತು ದರ್ಶನ್‌ ಹೆಸರನ್ನ ನಿರ್ದಿಷ್ಟವಾಗಿ ಪ್ರಸ್ತಾಪಿಸಿಲ್ಲ. ದರ್ಶನ್‌ ಹಲ್ಲೆಯಿಂದಲೇ ರೇಣುಕಾಸ್ವಾಮಿ ಸಾವಾಗಿದೆ ಅಂತಾನೂ ಉಲ್ಲೇಖವಾಗಿಲ್ಲ. ಅಥವಾ ದರ್ಶನ್‌ ರೇಣುಕಾಸ್ವಾಮಿಯ ಮೇಲೆ ಹಲ್ಲೆ ನಡೆಸಿದ್ದಾನೆ ಅನ್ನೋದನ್ನೂ ನಿರ್ದಿಷ್ಟವಾಗಿ ತಿಳಿಸಿಲ್ಲ. ಯಾವುದೇ ಪ್ರಕರಣ ನ್ಯಾಯಾಲಯದಲ್ಲಿ ಸಾಬೀತಾಗಬೇಕಾದ್ರೆ ನಿರ್ದಿಷ್ಟ ಉಲ್ಲೇಖ ತೀರಾ ಅಗತ್ಯ.

ಇದನ್ನೂ ಓದಿ:ಚಂದನ್ ಶೆಟ್ಟಿ-ನಿವೇದಿತಾ ಗೌಡ ಕುರಿತ ಮತ್ತೊಂದು ಅಪ್​ಡೇಟ್ಸ್.. ಮತ್ತೆ ಪ್ರೂವ್ ಮಾಡಿದ ಜೋಡಿ..!

ದರ್ಶನ್‌ ಪಾರಾಗಲು ಸಾಧ್ಯವೇ?
ದರ್ಶನ್‌ ಸೂಚನೆ ಮೇರೆಗೆ ರೇಣುಕಾಸ್ವಾಮಿಯನ್ನ ಕಿಡ್ನಾಪ್‌ ಮಾಡಲಾಗಿದೆ ಎಂದು ರಿಮಾಂಡ್‌ ಅರ್ಜಿಯಲ್ಲಿ ಉಲ್ಲೇಖಿಸಲಾಗಿದೆ. ಆದ್ರೆ ದರ್ಶನ್‌ ತಾನೇ ಸೂಚನೆ ನೀಡಿ ಕಿಡ್ನಾಪ್‌ ಮಾಡಿಸಿದ್ದನ್ನ ಸಾಬೀತು ಪಡಿಸಲು ಪೂರಕ ಸಾಕ್ಷಿಗಳ ಅಗತ್ಯ ಬೀಳುತ್ತೆ. ಶವ ವಿಲೇವಾರಿಗೆ ದರ್ಶನ್‌ 30 ಲಕ್ಷ ಹಣವನ್ನ ಕೊಟ್ಟಿದ್ದಾಗಿ ತಿಳಿಸಲಾಗಿದೆ. ಈ ಹಣವನ್ನ ಪ್ರದೋಶ್‌ಗೆ ಕೊಟ್ಟಿರೋದಾಗಿ ತಿಳಿಸಲಾಗಿದೆ. ಆದ್ರೆ ಬ್ಯಾಂಕ್‌ ಟ್ರಾನ್ಸಾಕ್ಷನ್‌ ನಡೆದಿಲ್ಲ ಅಂದ್ರೆ ಹಣ ಕೊಟ್ಟಿರೋದು ಸಾಬೀತು ಪಡಿಸೋದು ಸುಲಭವಿಲ್ಲ. ಶೆಡ್‌ನಲ್ಲಿನ ಸಿಸಿಟಿವಿ ಫೂಟೇಜ್‌ಗಳಲ್ಲಿ ದರ್ಶನ್‌ ಬಂದಿರೋದು ಸಾಬೀತಾಗುತ್ತೆ. ಆದ್ರೆ ಹಲ್ಲೆ ನಡೆಸಿರೋದು ಸೆರೆಯಾಗಿಲ್ಲ ಅಂದ್ರೆ ಮಹತ್ವ ಪಡೆದುಕೊಳ್ಳುತ್ತೆ. ಮೃತ ದೇಹವನ್ನ ಸೆಕ್ಯೂರಿಟಿ ರೂಮ್‌ನಲ್ಲಿ ತಂದು ಇರಿಸಲಾಗಿತ್ತು ಅಂತಾ ಆರೋಪಿಗಳೇ ಹೇಳಿದ್ದಾರೆ. ಅಲ್ಲಿ ಸಿಸಿಟಿವಿ ಕ್ಯಾಮರಾ ಇದೆಯಾದ್ರೂ ಆ ಕೋಣೆಗೆ ದರ್ಶನ್‌ ಹೋಗಿಲ್ಲ. ಎಲ್ಲಕ್ಕಿಂತ ಮುಖ್ಯವಾಗಿ ಮೃತದೇಹದ ವಿಲೇವಾರಿಗೆ ದರ್ಶನ್‌ ಹೋಗಿಲ್ಲ ಅನ್ನೋದು ಈಗಾಗಲೇ ಸ್ಪಷ್ಟವಾಗಿದೆ. ವಿನಯ್‌ ಮತ್ತು ಇತರೆ ಆರೋಪಿಗಳು ಮೃತದೇಹದ ವಿಲೇವಾರಿಗೆ ತೆರಳಿದ್ದರು.

ಇದನ್ನೂ ಓದಿ:ನಟ ದರ್ಶನ್​ಗೆ ಕಾದಿದೆ ಮತ್ತೊಂದು ಬಿಗ್ ಶಾಕ್.. ಜೈಲು ಸೇರ್ತಿದ್ದಂತೆ ಪೊಲೀಸರಿಂದ ಪಕ್ಕಾ ಪ್ಲಾನ್..!

ದರ್ಶನ್‌ನ ಪಟ್ಟಣಗೆರೆ ಶೆಡ್‌ಗೆ ಕರೆದೊಯ್ದು ಪೊಲೀಸರು ಮಹಜರು ನಡೆಸಿದ್ದಾರೆ. ಅಲ್ಲಿ ಮೂರು ಕಡೆ ಮಹಜರು ನಡೆದಿದೆ. ಆದ್ರೆ ದರ್ಶನ್‌ನ ನಿಲ್ಲಿಸಿಕೊಂಡು ಮಹಜರು ನಡೆಸಿರೋದು ಹಲ್ಲೆ ನಡೆದಿದೆ ಎನ್ನಲಾದ ಒಂದು ಜಾಗದಲ್ಲಿ ಮಾತ್ರ. ಅಂದ್ರೆ ಮಿಕ್ಕ ಎರಡು ಜಾಗದಲ್ಲಿ ದರ್ಶನ್‌ ಇರಲಿಲ್ಲ ಅನ್ನೋದು ಸ್ಪಷ್ಟವಾದಂತೆಯೇ ಆಗುತ್ತೆ. ಇಂಥಾ ಸೂಕ್ಷ್ಮ ವಿಚಾರಗಳನ್ನೇ ದರ್ಶನ್‌ ಪರ ವಕೀಲರು ಪಾಯಿಂಟ್‌ ಔಟ್‌ ಮಾಡುವ ಸಾಧ್ಯತೆಯಿದೆ.

ಇದನ್ನೂ ಓದಿ:ಶವ ಬಿಸಾಕಿದ್ದಾಗಿಂದ ಒಂದೇ ಬಟ್ಟೆಯಲ್ಲೇ ಮೂರು ದಿನ ಓಡಾಟ.. ಎಣ್ಣೆ ಪಾರ್ಟಿ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ದರ್ಶನ್‌ ಹಲ್ಲೆ ನಡೆಸಿದ ಬಗ್ಗೆ ನಿರ್ದಿಷ್ಟ ಉಲ್ಲೇಖ ಇಲ್ಲ.. ಕುಖ್ಯಾತ ನಟ ಪಾರಾಗಲು ಸಾಧ್ಯವೇ?

https://newsfirstlive.com/wp-content/uploads/2024/06/DARSHAN-32-1.jpg

Load More