ಸಿಲ್ವೆಸ್ಟರ್ ಡಕುನ್ಹಾ ಇನ್ನು ನೆನಪು ಮಾತ್ರ
ಅನಾರೋಗ್ಯದಿಂದ ಮುಂಬೈನಲ್ಲಿ ನಿಧನ
ಸಿಲ್ವೆಸ್ಟರ್ ಡಕುನ್ಹಾ ನಿಧನಕ್ಕೆ ಗಣ್ಯರ ಕಂಬನಿ
ಕ್ರಿಯೇಟರ್ ಆಫ್ ದ ಐಕಾನಿಕ್ ‘ಅಮುಲ್ ಗರ್ಲ್’, ಜಾಹೀರಾತು ಲೋಕದ ದಂತಕತೆ ಸಿಲ್ವೆಸ್ಟರ್ ಡಕುನ್ಹಾ (Sylvester daCunha) ನಿಧನರಾಗಿದ್ದಾರೆ. 1960ರಲ್ಲಿ ಅವರು ಕ್ಯಾರಿಕೇಚರ್ ಮೂಲಕ ರಚಿಸಿದ್ದ Amul Girl ಭಾರೀ ಜನಪ್ರಿಯತೆ ಪಡೆದುಕೊಂಡಿತ್ತು.
ಮಾತ್ರವಲ್ಲ, ಗುಜರಾತ್ ಮೂಲದ ಅಮುಲ್ ಸಂಸ್ಥೆ ದೇಶಾದ್ಯಂತ ಜನಪ್ರಿಯತೆ ಪಡೆದುಕೊಳ್ಳವಲ್ಲಿ, ಇವರ ‘ಅಮುಲ್ ಗರ್ಲ್’ ಬಹುಮುಖ್ಯ ಪಾತ್ರವಹಿಸಿದೆ. ಈಗಲೂ ಕೂಡ ಅಮುಲ್ ಎನ್ನುತ್ತಿದ್ದಂತೆಯೇ, ಕಣ್ಮುಂದೆ ಬರೋದು ‘Amul Girl’ ಚಿತ್ರವಾಗಿದೆ.
ಈ ವಿಚಾರ ಹೇಳಲು ನಮಗೆ ತುಂಬಾ ಬೇಸರ ಆಗುತ್ತಿದೆ. daCunha Communicationsನ ಅಧ್ಯಕ್ಷರು ನಿನ್ನೆ ರಾತ್ರಿ ಮುಂಬೈನಲ್ಲಿ ನಿಧನರಾಗಿದ್ದಾರೆ ಎಂದು ಗುಜರಾತ್ ಕೊ-ಆಪರೇಟೀವ್ ಮಿಲ್ಕ್ ಮಾರ್ಕೆಟಿಂಗ್ ಫೆಡರೇಷನ್ನ ನಿರ್ದೇಶಕ ಜಯೆನ್ ಮೆಹ್ತಾ ತಿಳಿಸಿದ್ದಾರೆ.
ಸಿಲ್ವೆಸ್ಟರ್ ಡಕುನ್ಹಾ 1966ರಲ್ಲಿ GCMMF ಒಡೆತನದ ಅಮುಲ್ ಬ್ರಾಂಡ್‌ಗಾಗಿ ‘ಅಟ್ಟರ್ಲಿ ಬಟರ್ಲಿ’ ಎಂಬ ಅಭಿಯಾನ ರೂಪಿಸಿದರು. ಈ ಮೂಲಕ ‘ಅಮುಲ್ ಗರ್ಲ್’ ಜಗತ್ತಿಗೆ ಪರಿಚಯ ಆಗಿತ್ತು. ಇಂದು ಸಿಲ್ವೆಸ್ಟರ್ ಡಕುನ್ಹಾ ಪುತ್ರ ರಾಹುಲ್ ಅವರು ಅಪ್ಪನ ಜಾಹೀರಾತು ಏಜೆನ್ಸಿಯ ಅಧಿಕಾರ ವಹಿಸಿಕೊಂಡಿದ್ದಾರೆ. ಅವರ ಅಗಲಿಕೆ ಸುದ್ದಿ ತಿಳಿಯುತ್ತಿದ್ದಂತೆಯೇ, ಅಮುಲ್ ಬೇಬಿ ಕಣ್ಣೀರು ಇಡುತ್ತಿರುವ ಕ್ಯಾರಿಕೇಚರ್ನ ‘ಅಮುಲ್ ಗರ್ಲ್’ ಫೋಟೋ ವೈರಲ್ ಆಗ್ತಿದೆ.
ಶ್ವೇತಕ್ರಾಂತಿಯ ಹರಿಕಾರ ವರ್ಗೀಸ್ ಕುರಿಯನ್ ಜೊತೆ ಕೆಲಸ ಮಾಡಿದ ಅನುಭವ ಇವರದ್ದಾಗಿತ್ತು. ವರ್ಗಿಸ್ ಕುರಿಯನ್, ಜೊತೆ ಕೆಲಸ ಮಾಡಿ ಮೆಚ್ಚುಗೆ ಗಳಿಸಿದ್ದರು. ಇನ್ನು, ಇವರ ಅಗಲಿಕೆಗೆ ಗಣ್ಯರು ಕಂಬನಿ ಮಿಡಿದಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕ ಜೈರಾಂ ರಮೇಶ್ ಸೇರಿ ಹಲವರು ಟ್ವೀಟ್ ಮಾಡಿ ಸಂತಾಪ ಸೂಚಿಸಿದ್ದಾರೆ.
— R S Sodhi (@Rssamul) June 21, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ