newsfirstkannada.com

ಬಿಗ್​ಬಾಸ್​ ಸೀಸನ್​ 10ರ ಬಗ್ಗೆ ಬೇಸರ ಹೊರ ಹಾಕಿದ ದೀಪಿಕಾ ದಾಸ್​​; ಶೇಮ್ ಎಂದಿದ್ದೇಕೆ..?

Share :

09-11-2023

  ಬಿಗ್‌ಬಾಸ್‌ ಸ್ಪರ್ಧಿಗಳಿಗೆ ಶೇಮ್ ಎಂದು ಪೋಸ್ಟ್‌ ಮಾಡಿದ ಮಾಜಿ ಸ್ಪರ್ಧಿ

  ಬಿಗ್ ಬಾಸ್ ಸ್ಪರ್ಧಿಗಳ ಅಸಹಿಷ್ಣು ವರ್ತನೆ ಬಗ್ಗೆ ದೀಪಿಕಾ ದಾಸ್ ಬೇಸರ

  ಒಂದಲ್ಲಾ ಒಂದು ವಿಚಾರಕ್ಕೆ ಸದ್ದು ಮಾಡುತ್ತಿದ್ದಾರೆ ಬಿಗ್​ಬಾಸ್​ ಸ್ಪರ್ಧಿಗಳು

ಕನ್ನಡದ ಬಿಗ್​​ ರಿಯಾಲಿಟಿ ಶೋ ಬಿಗ್​ಬಾಸ್​ ಸೀಸನ್​​​ 10ರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸಾಲು ಸಾಲು ಆರೋಪಗಳು ಕೇಳಿ ಬರುತ್ತಿವೆ. ಮೊನ್ನೆಯಷ್ಟೇ ಬಿಗ್​ಬಾಸ್​ 10ರ ಸ್ಪರ್ಧಿಗಳ ಬಗ್ಗೆ ನಟಿ ಕಾವ್ಯಾ ಶಾಸ್ತ್ರಿ ತೀವ್ರ ಬೇಸರ ಹೊರಹಾಕಿದ್ದರು. ಇದೀಗ ಬಿಗ್​ಬಾಸ್​ ಮಾಜಿ ಸ್ಪರ್ಧಿ ದೀಪಿಕಾ ದಾಸ್​ ಕೆಲ ಸ್ಪರ್ಧಿಗಳ ಬಗ್ಗೆ ನೇರವಾಗಿ ತಮ್ಮ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹೌದು, ಬಿಗ್​ಬಾಸ್​​ ಸೀಸನ್​ 10 ಶುರುವಾದಾಗಿನಿಂದ ಎಲ್ಲ ಸ್ಪರ್ಧಿಗಳು ಒಂದಲ್ಲಾ ಒಂದು ವಿಚಾರಕ್ಕೆ ಗಲಾಟೆ ಮಾಡಿಕೊಳ್ಳುತ್ತಾ ಇರುತ್ತಾರೆ. ಒಬ್ಬರಿಗಿಂತ ಮತ್ತೊಬ್ಬರು ಟಾಸ್ಕ್‌ಗಳನ್ನ ಸೀರಿಯಸ್‌ ಆಗಿ ತೆಗೆದುಕೊಂಡು ಜಗಳಕ್ಕೆ ಇಳಿಯುತ್ತಾರೆ. ಸೀಸನ್ 10ರ ಸ್ಪರ್ಧಿಗಳಲ್ಲಿ ಕೆಲವರಂತೂ ಏಕವಚನದಲ್ಲೇ ಹಿಗ್ಗಾಮುಗ್ಗ ಕಿತ್ತಾಡುತ್ತಿದ್ದಾರೆ. ಇದೇ ವಿಚಾರಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಈ ಬಾರಿ ಬಿಗ್‌ಬಾಸ್ ಸ್ಪರ್ಧಿಗಳ ನಡೆಗೆ ತೀವ್ರ ಆಕ್ರೋಶ ಹೊರಹಾಕುತ್ತಿದ್ದಾರೆ.

ಇನ್ನೂ ದೀಪಿಕಾ ದಾಸ್​ ತಮ್ಮ ಇನ್​ಸ್ಟಾಗ್ರಾಮ್‌ನಲ್ಲಿ ಈ ರೀತಿ ಬರೆದುಕೊಂಡಿದ್ದಾರೆ. ಬಿಗ್​ಬಾಸ್ ಕನ್ನಡ 10 ಸ್ಪರ್ಧಿಗಳ ಸೂಕ್ಷ್ಮವಲ್ಲದ, ಅಸಹಿಷ್ಣು ವರ್ತನೆ ತೋರಿಸುತ್ತಿದ್ದಾರೆ. ನಾನು ಓರ್ವ ಮಾಜಿ ಸ್ಪರ್ಧಿಯಾಗಿ ಯಾರನ್ನ ದೂರುವುದು ಎಂದು ಗೊತ್ತಾಗುತ್ತಿಲ್ಲ. ವೈಯಕ್ತಿಕವಾಗಿ ಒಬ್ಬರನ್ನೇ ಟಾರ್ಗೆಟ್ ಮಾಡುವುದು ಕ್ರೀಡಾ ಮನೋಭಾವ ಅಲ್ಲವೇ ಅಲ್ಲ. ನನ್ನ ಪ್ರಕಾರ ಆಟವನ್ನ ಆಟದ ತರಹವೇ ಆಡಬೇಕು ಶೇಮ್‌ ಎಂದು ಬರೆದುಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಿಗ್​ಬಾಸ್​ ಸೀಸನ್​ 10ರ ಬಗ್ಗೆ ಬೇಸರ ಹೊರ ಹಾಕಿದ ದೀಪಿಕಾ ದಾಸ್​​; ಶೇಮ್ ಎಂದಿದ್ದೇಕೆ..?

https://newsfirstlive.com/wp-content/uploads/2023/11/bigg-boss-2023-11-09T133106.700.jpg

Load More