ಕಾಂಗ್ರೆಸ್ ಮಹಾಘಟಬಂಧನ್ ಮೇಲೆ ಗರಂ ಆದ ಕುಮಾರಸ್ವಾಮಿ
ನಾಳೆ ದೆಹಲಿಯಲ್ಲಿ ಬಿಜೆಪಿ ನೇತೃತ್ವದಲ್ಲಿ NDA ಮಿತ್ರ ಪಕ್ಷಗಳ ಸಭೆ
ಲೋಕಸಭಾ ಸಮರದಲ್ಲಿ ದಳಪತಿಗಳ ನಡೆ ಯಾವ ಮೈತ್ರಿಯ ಕಡೆ
ಬೆಂಗಳೂರು: ಮುಂದಿನ ಲೋಕಸಭಾ ಚುನಾವಣೆ ಎದುರಿಸಲು ಇವತ್ತು ವಿರೋಧ ಪಕ್ಷಗಳೆಲ್ಲಾ ರಾಜ್ಯದಲ್ಲಿ ಒಗ್ಗೂಡುತ್ತಿವೆ. ಬಿಜೆಪಿಯನ್ನ ಸೋಲಿಸಲು 20ಕ್ಕೂ ಪಕ್ಷದ ಘಟಾನುಘಟಿ ನಾಯಕರು ಮಹಾಘಟಬಂಧನ್ ರಚಿಸಲು ಮುಂದಾಗಿದ್ದಾರೆ. ಕಾಂಗ್ರೆಸ್ ನೇತೃತ್ವದ ವಿರೋಧ ಪಕ್ಷಗಳ ಒಕ್ಕೂಟದ ಈ ಸಭೆಯಲ್ಲಿ ಭಾಗವಹಿಸಲು ಜೆಡಿಎಸ್ ಪಕ್ಷಕ್ಕೆ ಆಹ್ವಾನ ಕೊಟ್ಟಿಲ್ಲ. ಈ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ, ಮಹಾಘಟಬಂಧನ್ ಆಯೋಜಕರ ಮೇಲೆ ಕಿಡಿಕಾರಿದ್ದಾರೆ. ಪ್ರತಿಯಾಗಿ ಬಿಜೆಪಿ ಹೈಕಮಾಂಡ್ ನಾಯಕರು ಆಹ್ವಾನ ಕೊಟ್ಟರೆ ಮಾತಾಡುವೆ ಅನ್ನೋ ಮೂಲಕ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ.
ಮಹಾಘಟಬಂಧನ್ ವ್ಯವಸ್ಥಾಪಕರು ನಮ್ಮ ಪಕ್ಷನ ಅವ್ರು ಲೆಕ್ಕಕ್ಕೇ ಇಟ್ಕೊಂಡಿಲ್ಲ.. ನನ್ನ ಜೆಡಿಎಸ್ ಪಕ್ಷ ಮುಳುಗಿ ಹೋಗಿದೆ ಅನ್ನೋ ಭ್ರಮೆಯಲ್ಲಿದ್ದಾರೆ. ಅವರ ಆಹ್ವಾನದ ಬಗ್ಗೆ ನಾನು ತಲೆಕೆಡಿಸಿಕೊಂಡಿಲ್ಲ ಎಂದು ಕಿಡಿಕಾರಿದ್ದಾರೆ. ಇದೇ ವೇಳೆ ನಮಗೆ ಎನ್‌ಡಿಎ ಸಭೆಗೂ ಆಹ್ವಾನವಿಲ್ಲ, ಯುಪಿಎ ಸಭೆಗೂ ಇಲ್ಲ. ಬಿಜೆಪಿ ಹೈಕಮಾಂಡ್ ನಾಯಕರು ಮಾತುಕತೆಗೆ ಆಹ್ವಾನ ಕೊಟ್ರೆ ಭಾಗಿಯಾಗಿ ಚರ್ಚಿಸುತ್ತೇನೆ. ಜೆಡಿಎಸ್ ಪಕ್ಷ ಹೋರಾಟ ಮಾಡ್ಕೊಂಡು ಬಂದಿರುವ ಪಕ್ಷ. ಜೆಡಿಎಸ್- ಬಿಜೆಪಿ ಮೈತ್ರಿ ಬಗ್ಗೆ ಪಕ್ಷದ ಕಾರ್ಯಕರ್ತರು ನಿರ್ಧರಿಸುತ್ತಾರೆ. ಲೋಕಸಭಾ ಚುನಾವಣೆಗೆ ಇನ್ನೂ ಏಳೆಂಟು ತಿಂಗಳಿದೆ ಕಾದು ನೋಡೋಣ ಎಂದು ಕುಮಾರಸ್ವಾಮಿ ಹೇಳಿದ್ದಾರೆ.
ಕೇಂದ್ರದ ಬಿಜೆಪಿ ನಾಯಕರು ಆಹ್ವಾನ ಕೊಟ್ರೆ ಮಾತಾಡುವೆ ಎಂದಿರುವ ಹೆಚ್.ಡಿ ಕುಮಾರಸ್ವಾಮಿ ಅವರು ಬಿಜೆಪಿ, ಜೆಡಿಎಸ್ ಮೈತ್ರಿಯ ಬಗ್ಗೆಯೂ ಸ್ಪಷ್ಟನೆ ನೀಡಿದ್ದಾರೆ. ವಿಪಕ್ಷ ನಾಯಕ ಮಾಡಿ ಅಂತಾ ನಾನು ಬೇಡಿಕೆ ಇಟ್ಟಿಲ್ಲ. ಕೇಂದ್ರದಲ್ಲಿ ಮಂತ್ರಿ ಸ್ಥಾನ ಕೊಡಿ ಅಂತಲೂ ನಾನು ಕೇಳಿಲ್ಲ. ನನ್ನ ಹೆಸರು ಯಾಕೆ ಚರ್ಚೆ ಆಗ್ತಿದೆ ಅನ್ನೋದೇ ಗೊತ್ತಿಲ್ಲ. ಬಿಜೆಪಿಯಲ್ಲಿ ಸಮರ್ಥರನ್ನೇ ವಿಪಕ್ಷ ನಾಯಕರನ್ನ ಆರಿಸಲಿ ಎಂದು ಹೆಚ್ಡಿಕೆ ಸಲಹೆ ನೀಡಿದ್ದಾರೆ.
ದಳಪತಿ ನಡೆ ಯಾವ ಮೈತ್ರಿಯ ಕಡೆ?
2024ರ ಲೋಕಸಭಾ ಚುನಾವಣೆಯಲ್ಲಿ ದಳಪತಿಗಳ ನಡೆ ಯಾವ ಮೈತ್ರಿಯ ಕಡೆ ಅನ್ನೋದು ಇನ್ನೂ ನಿಗೂಢವಾಗಿದೆ. ಯಾಕಂದ್ರೆ ಇವತ್ತು, ನಾಳೆ ಬೆಂಗಳೂರಿನಲ್ಲಿ ವಿಪಕ್ಷಗಳ ಒಕ್ಕೂಟದ ಸಭೆ ನಡೆಯುತ್ತಿದೆ. ನಾಳೆ ದೆಹಲಿಯಲ್ಲಿ ಎನ್‌ಡಿಎ ಮಿತ್ರ ಪಕ್ಷಗಳ ಸಭೆ ಕೂಡ ನಿಗದಿಯಾಗಿದೆ. ಈ ಎರಡೂ ಸಭೆಗಳಲ್ಲೂ ಜೆಡಿಎಸ್ ನಾಯಕ ಹೆಚ್.ಡಿ ಕುಮಾರಸ್ವಾಮಿ ಭಾಗಿಯಾಗೋದು ಅನುಮಾನವಾಗಿದೆ.
ಇದನ್ನೂ ಓದಿ: ‘JD(S) ಕೇವಲ ಸೋಗಲಾಡಿತನ, ಕುಮಾರಸ್ವಾಮಿಯದ್ದು ನಕಲಿ ಶ್ಯಾಮನ ಅವತಾರ’- ದಿನೇಶ್ ಗುಂಡೂರಾವ್
ತೆನೆ ಬಳಗದ ಏಕಾಂಗಿ ಹೋರಾಟ?
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್, ಬಿಜೆಪಿ ಜೊತೆ ದೋಸ್ತಿ ಮಾಡಿಕೊಳ್ಳುತ್ತಾ? ಈ ಬಗ್ಗೆ ರಾಜ್ಯ ರಾಜಕೀಯದಲ್ಲಿ ಚರ್ಚೆ ಜೋರಾಗಿದ್ರೂ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಅವರು ಯಾವುದೇ ಗುಟ್ಟು ಬಿಟ್ಟು ಕೊಟ್ಟಿಲ್ಲ. ಇವತ್ತು ಬೆಂಗಳೂರಿನಲ್ಲಿ ಕಾಂಗ್ರೆಸ್ ಹಾಗೂ ಇತರೆ ವಿಪಕ್ಷಗಳ ಸಭೆ ನಡೆಯುತ್ತಿದೆ. ಈ ಸಭೆಯಲ್ಲಿ 24 ವಿಪಕ್ಷಗಳಿಗೆ ಆಹ್ವಾನವಿದ್ರೂ, ಜೆಡಿಎಸ್ಗೆ ಮಾತ್ರ ಆಹ್ವಾನ ಕೊಟ್ಟಿಲ್ಲ. ಹೀಗಾಗಿ ಕುಮಾರಸ್ವಾಮಿ ಅವರು ಕಾಂಗ್ರೆಸ್ ಜೊತೆ ಹೋಗೋದು ಡೌಟ್ ಎನ್ನಲಾಗಿದೆ.
ಇನ್ನು, ನಾಳೆ ದೆಹಲಿಯಲ್ಲಿ ನಡೆಯುವ ಬಿಜೆಪಿ ಮಿತ್ರಪಕ್ಷಗಳ ಸಭೆಗೂ ಜೆಡಿಎಸ್ ಪಕ್ಷಕ್ಕೆ ಆಹ್ವಾನವಿಲ್ಲ. ಎನ್‌ಡಿಎ ಸಭೆಗೂ ನಮಗೆ ಆಹ್ವಾನ ಬಂದಿಲ್ಲ ಎಂದೇ ಜೆಡಿಎಸ್ ನಾಯಕರೇ ಹೇಳುತ್ತಿದ್ದಾರೆ. ಹೀಗಾಗಿ ಎರಡೂ ಮೈತ್ರಿಕೂಟಗಳ ಜೊತೆಯೂ ಜೆಡಿಎಸ್ ಇರಲ್ವಾ ಅನ್ನೋ ಪ್ರಶ್ನೆ ಮೂಡಿದೆ. ಯಾರ ಜೊತೆಯೂ ಮೈತ್ರಿ ಮಾಡಿಕೊಳ್ಳದೆ ಏಕಾಂಗಿ ಹೋರಾಟಕ್ಕೆ ಜೆಡಿಎಸ್ ಪ್ಲಾನ್ ಮಾಡಿದೆ ಎನ್ನಲಾಗಿದೆ. ರಾಜಕೀಯದಲ್ಲಿ ಏನ್ ಬೇಕಾದ್ರೂ ಆಗಬಹುದು ಅನ್ನೋ ಮಾತಿನಂತೆ ಸದ್ಯ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿಯವರ ನಡೆ ಇನ್ನೂ ನಿಗೂಢವಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ
ನಮ್ಮ ಪಕ್ಷನ ಪಾಪ ಅವ್ರು ಲೆಕ್ಕಕ್ಕೇ ಇಟ್ಕೊಂಡಿಲ್ಲ.. ಜೆಡಿಎಸ್ ಮುಗಿದು ಹೋಗಿದೆ ಅನ್ನೋ ಭ್ರಮೆಯಲ್ಲಿದ್ದಾರೆ ಎಂದು ಕಾಂಗ್ರೆಸ್ ನೇತೃತ್ವದ ಮಹಾಘಟಬಂಧನ್ ಸಭೆಗೆ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಟಾಂಗ್ ಕೊಟ್ಟಿದ್ದಾರೆ. #NewsFirstKannada #Newsfirstlive #KannadaNews #Siddaramaiah #KarnatakaCM @Siddaramaiah… pic.twitter.com/UaZk1RabTI
— NewsFirst Kannada (@NewsFirstKan) July 17, 2023