ಸುಮಲತಾ ಅವರನ್ನ ನೋಡಿ ಒಂದು ಕ್ಷಣ ವಿಚಲಿತರಾದ HDK
ಕುಮಾರಸ್ವಾಮಿ ಅವರನ್ನ ನೋಡಿ ಕೈ ಮುಗಿದ ಸಂಸದೆ ಸುಮಲತಾ
ಮಂಡ್ಯ ಲೋಕಸಭಾ ಚುನಾವಣೆ ಜಿದ್ದಾಜಿದ್ದಿನ ಬಳಿಕ ಮುಖಾಮುಖಿ
ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಹಾಗೂ ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಅವರು ಅಚಾನಕ್ ಆಗಿ ಮುಖಾಮುಖಿಯಾದ ಘಟನೆ ವಿಧಾನಸೌಧದಲ್ಲಿ ನಡೆದಿದೆ. ಕಾವೇರಿ ಹೋರಾಟದ ಹಿನ್ನೆಲೆ ರಾಜ್ಯ ಸರ್ಕಾರ ಇಂದು ಸರ್ವಪಕ್ಷ ನಾಯಕರ ಸಭೆ ಕರೆದಿತ್ತು. ಈ ಸಭೆಯಲ್ಲಿ ಭಾಗಿಯಾಗಲು ಲಿಫ್ಟ್‌ನಲ್ಲಿ ಸಂಸದೆ ಸುಮಲತಾ ಅವರು ಮೂರನೇ ಮಹಡಿಗೆ ತೆರಳುತ್ತಿದ್ದರು. ಇದೇ ವೇಳೆ ಒಂದನೇ ಮಹಡಿ ಲಿಫ್ಟ್ ಬಳಿ ಕುಮಾರಸ್ವಾಮಿ ಅವರು ಕಾಯುತ್ತಿದ್ದರು. ಲಿಫ್ಟ್‌ನಲ್ಲಿ ಮೂರನೇ ಮಹಡಿಗೆ ಹೋಗಲು ಮುಂದಾದಾಗ ಕುಮಾರಸ್ವಾಮಿ ಅವರಿಗೆ ಸುಮಲತಾ ಅಂಬರೀಶ್ ಎದುರಾಗಿದ್ದಾರೆ.
ಅಚಾನಕ್ ಆಗಿ ಸಂಸದೆ ಸುಮಲತಾ ಅಂಬರೀಶ್ ಅವರ ಮುಖಾಮುಖಿಯಾದ ಹೆಚ್.ಡಿ ಕುಮಾರಸ್ವಾಮಿ ಅವರು ಒಂದು ಕ್ಷಣ ವಿಚಲಿತರಾಗಿದ್ದಾರೆ. ಕುಮಾರಸ್ವಾಮಿ ಅವರನ್ನು ನೋಡಿದ ಸುಮಲತಾ ಅಂಬರೀಶ್ ತಕ್ಷಣವೇ ಕೈ ಮುಗಿದಿದ್ದಾರೆ. ಇದಕ್ಕೆ ಪ್ರತಿಯಾಗಿ ಕುಮಾರಸ್ವಾಮಿ ಅವರು ಕೂಡ ಕೈ ಮುಗಿದಿದ್ದಾರೆ. ಲಿಫ್ಟ್‌ನಲ್ಲಿ ಒಂದನೇ ಮಹಡಿಯಿಂದ ಮೂರನೇ ಮಹಡಿಗೆ ತಲುಪಿದ ನಂತರ ಸುಮಲತಾ ಅಂಬರೀಶ್ ಹಾಗೂ ಹೆಚ್.ಡಿ ಕುಮಾರಸ್ವಾಮಿ ಅವರು ಪ್ರತ್ಯೇಕವಾಗಿ ತೆರಳಿದ್ದಾರೆ.
ನಿಖಿಲ್ ಮಂಡ್ಯದಲ್ಲಿ ಸೋತ ಬಳಿಕ ಜಿದ್ದಾಜಿದ್ದು
2019ರ ಲೋಕಸಭಾ ಚುನಾವಣೆಯ ಸಂದರ್ಭದಲ್ಲಿ ಹೆಚ್.ಡಿ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ಅವರ ಮಧ್ಯೆ ಜಿದ್ದಾಜಿದ್ದಿನ ರಾಜಕೀಯ ಹೋರಾಟ ನಡೆದಿತ್ತು. ಸಿಎಂ ಆಗಿದ್ದ ಹೆಚ್‌ಡಿಕೆ ಪುತ್ರ ನಿಖಿಲ್ ವಿರುದ್ಧವೇ ಸುಮಲತಾ ಅಂಬರೀಶ್ ಸಮರ ಸಾರಿದ್ರು. ಲೋಕಸಭಾ ಚುನಾವಣೆಯಲ್ಲಿ ಸ್ವತಂತ್ರವಾಗಿ ಸ್ಪರ್ಧಿಸಿದ್ದ ಸುಮಲತಾ ಅಂಬರೀಶ್, ನಿಖಿಲ್ ಕುಮಾರಸ್ವಾಮಿ ಅವರನ್ನು ಸೋಲಿಸಿ ಸಂಸತ್ ಸದಸ್ಯರಾಗಿದ್ದರು. ಮಂಡ್ಯ ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಸುಮಲತಾ ಅಂಬರೀಶ್ ವಿರುದ್ಧ ಜೆಡಿಎಸ್ ನಾಯಕರು ಹಿಗ್ಗಾಮುಗ್ಗ ವಾಕ್ಸಮರ ನಡೆಸಿದ್ದರು. ಈ ರೋಚಕ ಚುನಾವಣೆಯ ಫಲಿತಾಂಶದ ಬಳಿಕ ಸುಮಲತಾ ಅಂಬರೀಶ್, ಕುಮಾರಸ್ವಾಮಿ ಅವರ ಮಧ್ಯೆ ರಾಜಕೀಯ ಜಿದ್ದು ಮುಂದುವರಿದಿತ್ತು. ಈ ಎಲ್ಲಾ ಬೆಳವಣಿಗೆಗಳು ನಡೆದ ಬಳಿಕ ಬಹಳ ವರ್ಷಗಳ ಬಳಿಕ ಕುಮಾರಸ್ವಾಮಿ ಹಾಗೂ ಸುಮಲತಾ ಅಂಬರೀಶ್ ಮಧ್ಯೆ ಇವತ್ತು ಮುಖಾಮುಖಿಯಾಗಿದ್ದು ವಿಶೇಷವಾಗಿತ್ತು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ