newsfirstkannada.com

‘ಅರ್ಜೆಂಟ್ ಏನಿದೆ ಬ್ರದರ್​..?’ -‘ಪೆನ್​ಡ್ರೈವ್ ಪ್ರಹಸನ’ದ ಕೌತುಕಕ್ಕೆ ಕುಮಾರಸ್ವಾಮಿ ಮತ್ತೊಂದು ಸ್ಟೇಟ್​ಮೆಂಟ್..!

Share :

10-07-2023

  ಸಿದ್ದು ಸರ್ಕಾರದ ಮೇಲೆ ಕುಮಾರಸ್ವಾಮಿ ಗಂಭೀರ ಆರೋಪ

  ಪೆನ್​ಡ್ರೈವ್ ಕತೆ ಹೇಳಿ ಜನರ ನಿರೀಕ್ಷೆ ಹೆಚ್ಚಿಸಿದ ಕುಮಾರಸ್ವಾಮಿ

  ಮಾಧ್ಯಮಗಳು ಕೇಳಿದ ಪ್ರಶ್ನೆಗೆ HDK ಬೇರೆಯದ್ದೇ ಉತ್ತರ -ವಿಡಿಯೋ

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್​ ಸರ್ಕಾರದ ವಿರುದ್ಧ ‘ಪೆನ್​​ ಡ್ರೈವ್’ ಅಸ್ತ್ರ ಪ್ರಯೋಗಿಸಿರುವ ಮಾಜಿ ಮುಖ್ಯಮಂತ್ರಿ, ರಾಜ್ಯದ ಜನರಲ್ಲಿ ಹೊಸ ಕುತೂಹಲವನ್ನು ಹುಟ್ಟುಹಾಕಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವು ಕಾಂಗ್ರೆಸ್​ ನಾಯಕರು ಕುಮಾರಸ್ವಾಮಿ ಮತ್ತೊಮ್ಮೆ ಹಿಟ್​ ಅಂಡ್ ರನ್ ಮಾಡಿದ್ದಾರೆ. ಗಂಭೀರವಾಗಿ ಪರಿಗಣಿಸುವ ಅಗತ್ಯ ಇಲ್ಲ ಎಂದು ಹೇಳಿದ್ದರೂ, ಎಲ್ಲೋ ಒಂದು ಕಡೆ ಮುಖ್ಯವಾದ ವಿಚಾರಗಳನ್ನು ಮಾಜಿ ಮುಖ್ಯಮಂತ್ರಿಗಳು ಹೇಳಿದ್ದರು ಎಂದು ಜನ ಭಾವಿಸಿದ್ದರು.

ಇದನ್ನೂ ಓದಿ: ಕುಮಾರಸ್ವಾಮಿ ಪೆನ್‌ಡ್ರೈವ್‌ ಆರೋಪ.. ಹಾವಿನ ಬುಟ್ಟಿ ಅಂತ ಗೇಲಿ ಮಾಡಿದ ಕಾಂಗ್ರೆಸ್; ಹಿಟ್ & ರನ್​ಗೆ ಗುರಿ ಆಗ್ತಾರಾ ಮಾಜಿ ಸಿಎಂ?

ಆದರೆ ಇವತ್ತು ಕುಮಾರಸ್ವಾಮಿ ನೀಡಿದ ಹೇಳಿಕೆ ಠುಸ್ ಪಟಾಕಿನಾ? ಎಂಬ ಅನುಮಾನ ಸಹಜವಾಗಿಯೇ ಮೂಡಿದೆ. ಎರಡು ದಿನಗಳ ಬಿಡುವಿನ ನಂತರ ವಿಧಾನಸಭೆ ಕಲಾಪ ಇವತ್ತು ಪುನರರಾಂಭಗೊಂಡಿದೆ. ಇವತ್ತಿನ ಅಧಿವೇಶನದಲ್ಲಿ ಕುಮಾರಸ್ವಾಮಿ, ಪೆನ್​​ಡ್ರೈವ್​​ ರಹಸ್ಯ ಬಿಚ್ಚಿಡಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ ಕಲಾಪ ಆರಂಭಕ್ಕೂ ಮೊದಲು ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಕುಮಾರಸ್ವಾಮಿ, ‘ಅದೇನ್ ಅರ್ಜೆಂಟ್ ಇಲ್ಲ ಬ್ರದರ್​’ ಅಂತಾ ನಗುತ್ತಾ ವಿಧಾನಸೌಧ ಪ್ರವೇಶ ಮಾಡಿದ್ದಾರೆ. ಕುಮಾರಸ್ವಾಮಿಯ ಈ ಸ್ಟೇಟ್​ಮೆಂಟ್ ಹಲವು ಅನುಮಾನಗಳನ್ನು ಹುಟ್ಟಿಹಾಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಅರ್ಜೆಂಟ್ ಏನಿದೆ ಬ್ರದರ್​..?’ -‘ಪೆನ್​ಡ್ರೈವ್ ಪ್ರಹಸನ’ದ ಕೌತುಕಕ್ಕೆ ಕುಮಾರಸ್ವಾಮಿ ಮತ್ತೊಂದು ಸ್ಟೇಟ್​ಮೆಂಟ್..!

https://newsfirstlive.com/wp-content/uploads/2023/07/HDK-4.jpg

Load More