newsfirstkannada.com

WATCH: ಅಣ್ಣ ಹೇಳಿದ್ರೆ, ತಮ್ಮ ಕೇಳಬೇಕಲ್ಲ.. ಡಿ.ಕೆ ಶಿವಕುಮಾರ್​​ಗೆ ಹೆಚ್​​ಡಿಕೆ ಖಡಕ್​ ಎಚ್ಚರಿಕೆ

Share :

05-08-2023

    ನಿನ್ನೆ ಹೆಚ್‌.ಡಿ ಕುಮಾರಸ್ವಾಮಿ ಅಣ್ಣ ಎಂದಿದ್ದ ಡಿಸಿಎಂ ಡಿಕೆ ಶಿವಕುಮಾರ್

    ಈ ಜನ್ಮದಲ್ಲಂತೂ ತಮ್ಮ ಆಗೋಕೆ ಸಾಧ್ಯವಿಲ್ಲ ಎಂದು ಕುಮಾರಸ್ವಾಮಿ

    ಡಿಸಿಎಂ ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ಸಿಸಿಟಿವಿ ಇದೆಯಾ?

ಬೆಂಗಳೂರು: ಡಿಸಿಎಂ ಡಿ.ಕೆ ಶಿವಕುಮಾರ್ ಹಾಗೂ ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರ ಮೆಗಾ ಫೈಟ್ ಮತ್ತೆ ಜೋರಾಗಿದೆ. ನಿನ್ನೆ ಅಣ್ಣ ಹೇಳ್ತಾರೆ, ತಮ್ಮ ಕೇಳಬೇಕಲ್ಲ ಎಂದಿದ್ದ ಡಿಕೆ ಶಿವಕುಮಾರ್‌ಗೆ ಇವತ್ತು ಹೆಚ್‌ಡಿಕೆ ತಿರುಗೇಟು ಕೊಟ್ಟಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಕುಮಾರಸ್ವಾಮಿ ಅವರು, ಪಾಪ ನಮ್ಮ ತಮ್ಮ.. ಅಣ್ಣ ಹೇಳ್ತಾರೆ.. ತಮ್ಮ ಕೇಳ್ಬೆಕ್ಕಲ್ಲ ಕೇಳ್ತಿವಿ ಅಂತಾ. ಸದ್ಯ ನಮಗೆ ಅಂತಹ ತಮ್ಮ ಇಲ್ಲ. ನಾನು ಅವರಿಗೆ ಅಣ್ಣ ಆಗೋಕೆ ಸಾಧ್ಯ ಆಗಲ್ಲ. ಈ ಜನ್ಮದಲ್ಲಂತೂ ತಮ್ಮ ಆಗೋಕೆ ಸಾಧ್ಯವಿಲ್ಲ. ಮುಂದಿನ ಜನ್ಮದಲ್ಲೂ ಅವರು ನನಗೆ ತಮ್ಮ ಆಗೋದು ಬೇಡ ಎಂದಿದ್ದಾರೆ.

ಡಿ.ಕೆ ಶಿವಕುಮಾರ್ ಅವರನ್ನು ತೀವ್ರ ತರಾಟೆ ತೆಗೆದುಕೊಂಡಿರುವ ಹೆಚ್‌ಡಿ ಕುಮಾರಸ್ವಾಮಿ ಅವರು ಬ್ರ್ಯಾಂಡ್ ಬೆಂಗಳೂರು ಮಾಡಲು ಹೊರಟಿದ್ದಾರಲ್ಲ. ಅವರ ಮನೆಯಲ್ಲಿ ಸಿಸಿಟಿವಿ ಇದೆಯಾ? ಯಾಕಪ್ಪಾ ಬೆಂಗಳೂರು ಅಭಿವೃದ್ಧಿ ಸಚಿವರು 710 ಕೋಟಿ ಹಣ ರಿಲೀಸ್ ಮಾಡಿಲ್ಲ ಎಂದು ಪ್ರಶ್ನಿಸಿದರು. ಇನ್ನು, ಕಾಂಗ್ರೆಸ್ ರಾಜ್ಯ ಉಸ್ತುವಾರಿ ಸುರ್ಜೇವಾಲರನ್ನು ಅಧಿಕಾರಿಗಳ ಸಭೆಯಲ್ಲಿ ಕೂರಿಸಿಕೊಂಡಿದ್ರಿ. ಇವಾಗ ಹೇಳಿದ್ರಲ್ಲ ಅಣ್ಣ ತಮ್ಮನೋ ಅಂತಾ ಅವರಿಗೆ ಹೇಳ್ತಿದ್ದೇನೆ. ಇಂತಹ ದರಿದ್ರ ಸರ್ಕಾರ ಇಂತಹ ಕೆಟ್ಟ ಸರ್ಕಾರ ನಾನು ಎಲ್ಲಿಯೂ ನೋಡಿಲ್ಲ. ಯಡಿಯೂರಪ್ಪನವರು ನನ್ನನ್ನು ಹಿಂದೆ ಕೆಣಕಿದ್ರು. ಇವಾಗ ಇವರು ಕೆಣಕಲಿ ಎಂದು ಕಾಯ್ತಿದ್ದೇನೆ. ಕೆಣಕಲಿ, ಸೂಟ್ ಕೇಸ್‌ಗಟ್ಟಲೇ ದಾಖಲೆ‌ಗಳು ನನ್ನ ಬಳಿ ಇವೆ ಎಂದು ಹೆಚ್‌ಡಿಕೆ ಎಚ್ಚರಿಸಿದ್ದಾರೆ.

ಇದನ್ನೂ ಓದಿ: ಮಾಯಾನೋ, ಮಾಟಾನೋ, ಜೋತಿಷ್ಯಾನೋ, ಧರ್ಮಾನೋ.. ಹೆಚ್​ಡಿಕೆಗೆ ಡಿ.ಕೆ ಶಿವಕುಮಾರ್​ ತಿರುಗೇಟು

ಈ ಸರ್ಕಾರದಲ್ಲಿ ವರ್ಗಾವಣೆ ದಂಧೆಯಲ್ಲಿ ಲೆಕ್ಕಾನೇ ಇಲ್ಲ. 1000 ಕೋಟಿಗೂ ಜಾಸ್ತಿ ಆಗಿದೆ. ಒಂದೊಂದು ಪೋಸ್ಟ್‌ಗೆ ಮೂರು, ಮೂರು ಅಧಿಕಾರಿಗಳ‌ ನಿಯೋಜನೆ ಆಗಿದ್ದಾರೆ. ಒಬ್ಬ ಮಂತ್ರಿಗೆ ಜೀವನ ಕಳೆಯುವಷ್ಟು ಹಣ ಇದೆ. ಆದರೆ ಅವನು ಸಣ್ಣ, ಸಣ್ಣ ಪೋಸ್ಟಿಗೂ 10, 15 ಲಕ್ಷ ರೂಪಾಯಿ ಹಣ ಕೇಳ್ತಾ ಇದ್ದಾನೆ. ಮೇನಲ್ಲಿ ಗುತ್ತಿಗೆದಾರರಿಗೆ 710 ಕೋಟಿ ಬಿಡುಗಡೆ ಆಯ್ತು. ಅವತ್ತು ಕಾಂಗ್ರೆಸ್‌ನ ಸಂಸದರೊಬ್ಬರು ಎಚ್ಚರಿಕೆ ಕೊಟ್ರು. ನಮ್ಮ ಸರ್ಕಾರ ಬರ್ತಾ ಇದೆ. ಒಂದು ರೂಪಾಯಿ ಬಿಡುಗಡೆ ಆಗಬಾರದು ಅಂತಾ ಎಚ್ಚರಿಸಿದ್ದರು. ಆ ದುಡ್ಡನ್ನು ಹಾಗೇ ಅಕೌಂಟ್‌ನಲ್ಲಿ ಇಟ್ಟರು. ಹಣ ಬಿಡುಗಡೆಗೆ ಹಲವಾರು ಮೀಟಿಂಗ್ ಆದವು. ಐದು ಪರ್ಸೆಂಟ್‌ನಿಂದ ಹತ್ತು ಪರ್ಸೆಂಟ್ ಆಗಿದೆ ಈಗ. ನಿನ್ನೆ ಒಬ್ಬ ಅಧಿಕಾರಿ ಮನೆಗೆ ಹೋದವರು ಹತ್ತರಿಂದ ಹದಿನೈದು ಪರ್ಸೆಂಟ್ ಕೊಟ್ಟರೆ ಹಣ ಬಿಡುಗಡೆ ಮಾಡ್ತೀವಿ ಅಂತಾ ಹೇಳಿದ್ದಾರೆ. ಈ ಸರ್ಕಾರದ ವರ್ಗಾವಣೆ ಬಗ್ಗೆ ಮಾತಾಡೋಕೆ ಅಸಹ್ಯ ಆಗುತ್ತದೆ ಎಂದು ಹೆಚ್‌ಡಿ ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

WATCH: ಅಣ್ಣ ಹೇಳಿದ್ರೆ, ತಮ್ಮ ಕೇಳಬೇಕಲ್ಲ.. ಡಿ.ಕೆ ಶಿವಕುಮಾರ್​​ಗೆ ಹೆಚ್​​ಡಿಕೆ ಖಡಕ್​ ಎಚ್ಚರಿಕೆ

https://newsfirstlive.com/wp-content/uploads/2023/08/HD-Kumaraswamy.jpg

Load More