newsfirstkannada.com

ಹೆಚ್‌.ಡಿ ಕುಮಾರಸ್ವಾಮಿ ಫೇಸ್‌ಬುಕ್‌ ಖಾತೆ ಹ್ಯಾಕ್‌; ಅಶ್ಲೀಲ ಫೋಟೋ ಪೋಸ್ಟ್‌ ಮಾಡಿ ಯಡವಟ್ಟು

Share :

26-08-2023

    ಹೆಚ್‌.ಡಿ ಕುಮಾರಸ್ವಾಮಿ ಫೇಸ್‌ಬುಕ್‌ ಖಾತೆಯಲ್ಲಿ ಆ ಪೋಟೋ?

    ಹ್ಯಾಕ್ ಬಳಿಕ ತಕ್ಷಣ ಎಚ್ಚೆತ್ತುಕೊಂಡ ಹೆಚ್‌ಡಿಕೆ ಮೀಡಿಯಾ ಟೀಮ್

    ಹ್ಯಾಕರ್ಸ್‌ಗಳ ಕಣ್ಣು ಮಾಜಿ ಸಿಎಂ ಕುಮಾರಸ್ವಾಮಿ ಮೇಲೆ ಯಾಕೆ?

ಮಾಜಿ ಸಿಎಂ ಹೆಚ್‌.ಡಿ ಕುಮಾರಸ್ವಾಮಿ ಅವರ ಫೇಸ್‌ಬುಕ್‌ ಖಾತೆ ಕೆಲ ಕಾಲ ಆತಂಕ ಸೃಷ್ಟಿಸಿತ್ತು. ಯಾರೋ ಹ್ಯಾಕ್ ಮಾಡಿದ್ದು ಅಶ್ಲೀಲ ಫೋಟೋ ಒಂದನ್ನು ಪೋಸ್ಟ್ ಮಾಡಿದ್ದಾರೆ ಎನ್ನಲಾಗಿದೆ. ಹ್ಯಾಕ್ ಬಳಿಕ ತಕ್ಷಣ ಎಚ್ಚೆತ್ತುಕೊಂಡಿರುವ ಹೆಚ್‌ಡಿಕೆ ಅವರ ಸೋಷಿಯಲ್ ಮೀಡಿಯಾ ಟೀಮ್‌ ಆ ಫೋಟೋವನ್ನು ಡಿಲೀಟ್ ಮಾಡಿದೆ. ಕುಮಾರಸ್ವಾಮಿ ಅವರ ಅಧಿಕೃತ ಫೇಸ್‌ಬುಕ್‌ ಖಾತೆಯಲ್ಲೇ ಇಂತಹದೊಂದು ಯಡವಟ್ಟು ಆಗಿದ್ದು, ಕೆಲ ಕಾಲ ಗಾಬರಿಯಾಗುವಂತೆ ಮಾಡಿತ್ತು.

ಕುಮಾರಸ್ವಾಮಿ ಫೇಸ್‌ಬುಕ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದ ಹ್ಯಾಕರ್ಸ್‌

ಇದನ್ನೂ ಓದಿ: ದಳಕ್ಕೆ DK ಗಾಳ..!! ಕುಮಾರಸ್ವಾಮಿಗೆ ದೊಡ್ಡ ಮಟ್ಟದಲ್ಲಿ ಪೆಟ್ಟು ಕೊಡಲು ಡಿ.ಕೆ.ಶಿವಕುಮಾರ್ ಮಾಸ್ಟರ್ ಪ್ಲಾನ್..!

ಸೋಷಿಯಲ್ ಮೀಡಿಯಾದಲ್ಲಿ ಹ್ಯಾಕರ್ಸ್‌ಗಳ ಹಾವಳಿ ಇದೇ ಮೊದಲಲ್ಲ. ದೊಡ್ಡ, ದೊಡ್ಡ ಸ್ಟಾರ್ಸ್‌, ರಾಜಕಾರಣಿಗಳ ನೆಟ್‌ವರ್ಕ್‌ಗಳ ಮೇಲೆ ಇವರ ಕಣ್ಣು ಬಿದ್ದಿರುತ್ತೆ. ಇಷ್ಟು ದಿನ ಹಲವು ಗಣ್ಯರ ಅಕೌಂಟ್ ಹ್ಯಾಕ್ ಮಾಡುತ್ತಿದ್ದ ಹ್ಯಾಕರ್ಸ್‌ ಇದೀಗ ಹೆಚ್‌.ಡಿ ಕುಮಾರಸ್ವಾಮಿ ಅವರನ್ನು ಟಾರ್ಗೆಟ್ ಮಾಡಿದ್ದಾರೆ. ಇಂದು ಮಾಜಿ ಸಿಎಂ ಕುಮಾರಸ್ವಾಮಿ ಅವರ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದ್ದು, ಅಶ್ಲೀಲ ಫೋಟೋವೊಂದನ್ನು ಪೋಸ್ಟ್ ಮಾಡಿದ್ದರು. ತಕ್ಷಣವೇ ಹೆಚ್‌ಡಿಕೆ ಅವರ ಸೋಷಿಯಲ್ ಮೀಡಿಯಾ ಟೀಮ್ ಆ ಪೋಸ್ಟ್ ಡಿಲೀಟ್ ಮಾಡಿದೆ. ಈ ಮೂಲಕ ಮುಂದಾಗುವ ಅನಾಹುತವನ್ನು ತಪ್ಪಿಸಲು ಬೇಕಾದ ಅಗತ್ಯ ಕ್ರಮಗಳನ್ನು ಕೈಗೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಹೆಚ್‌.ಡಿ ಕುಮಾರಸ್ವಾಮಿ ಫೇಸ್‌ಬುಕ್‌ ಖಾತೆ ಹ್ಯಾಕ್‌; ಅಶ್ಲೀಲ ಫೋಟೋ ಪೋಸ್ಟ್‌ ಮಾಡಿ ಯಡವಟ್ಟು

https://newsfirstlive.com/wp-content/uploads/2023/08/HD-Kumaraswamy-Facebook-1.jpg

Load More