newsfirstkannada.com

ಧೋನಿ ಟೈಂ ವೇಸ್ಟ್​ ಮಾಡಿದ್ದಕ್ಕೆ ಮಾಜಿ ಕ್ರಿಕೆಟಿಗ ಕಿಡಿ! ಅಷ್ಟಕ್ಕೂ ಏನು ಮಾಡಿದ್ರು ಮಾಹಿ?

Share :

25-05-2023

    ಫೈನಲ್ ಪ್ರವೇಶ ಮಾಡಿದ ಮಾಹಿ ತಂಡ

    ಧೋನಿ ಟೈಂ ವೇಸ್ಟ್​ ಮಾಡಿದ್ದಕ್ಕೆ ಮಾಜಿ ಕ್ರಿಕೆಟಿಗ ಕಿಡಿ

    ಧೋನಿ ವಿದಾಯ ಸಂಗತಿ ನಿಜಾನಾ?

ಲೆಜೆಂಡ್ ಕ್ಯಾಪ್ಟನ್ ಎಂಎಸ್ ಧೋನಿ ವಿರುದ್ಧ ಮಾಜಿ ಕ್ರಿಕೆಟಿಗ ಬ್ರಾಡ್ ಹಾಗ್ ಹರಿಹಾಯ್ದಿದ್ದಾರೆ. ಮಾಹಿ ಅಂಪೈರ್​​ ಜೊತೆ ವಾಗ್ವಾದ ನಡೆಸಿ 4 ನಿಮಿಷ ಸಮಯ ವ್ಯರ್ಥ ಮಾಡಿದರು. ವೇಗಿ ಮಥೀಶ ಪತಿರಾಣ ಬ್ರೇಕ್​​ ಪಡೆದು ನೇರವಾಗಿ ಬೌಲಿಂಗ್​ ಮಾಡಲು ಮುಂದಾದ್ರು. ಆನ್​ಫೀಲ್ಡ್ ಅಂಪೈರ್ಸ್​ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ರು. ಆಗ ನಾಯಕ ಧೋನಿ ಮಧ್ಯಪ್ರವೇಶಿಸಿದ್ದಾರೆ. ಮಾಹಿ ನಡೆಯನ್ನ ಕಂಡು ಅಂಪೈರ್ಸ್​ ನಗುವುದು ಕಂಡು ಬಂದಿದೆ. ಇದು ನಿಜಕ್ಕೂ ಉತ್ತಮ ನಡೆಯಲ್ಲ ಎಂದು ಆಸೀಸ್ ಮಾಜಿ ಸ್ಪಿನ್ನರ್​​​ ಬ್ರಾಡ್​​​ ಹಾಗ್​​​​ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಫೈನಲ್ ಪ್ರವೇಶ ಮಾಡಿದ ಮಾಹಿ ತಂಡ

ಗುಜರಾತ್​ ತಂಡದ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಸ ಚರಿತ್ರೆ ಸೃಷ್ಟಿಸಿದ್ದಾರೆ. ಬರೋಬ್ಬರಿ 10ನೇ ಬಾರಿಗೆ ತಮ್ಮ ತಂಡವನ್ನು ಫೈನಲ್​ಗೆ ಕೊಂಡೊಯ್ದಿದ್ದಾರೆ. ಮೊದಲ ಕ್ವಾಲಿಫೈರ್​​ ಪಂದ್ಯದಲ್ಲಿ ಗುಜರಾತ್ ತಂಡವನ್ನು ಬಗ್ಗು ಬಡಿದು ಸಿಎಸ್​ಕೆ ಗ್ರ್ಯಾಂಡ್​ ಆಗಿ ಫೈನಲ್ ಪ್ರವೇಶ ಮಾಡಿದೆ.

ಧೋನಿ ವಿದಾಯ

ಧೋನಿ ನಿವೃತ್ತಿ ವಿಚಾರಕ್ಕೆ ಸಿಎಸ್​​ಕೆ ಸಿಇಒ ಸ್ಪಷ್ಟನೆ ನೀಡಿದ್ದು, ವಿದಾಯ ನೀಡುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ನಮಗೆ ಭರವಸೆ ಇದೆ. ಧೋನಿ ನಿವೃತ್ತಿ ಕೊಡುವುದಿಲ್ಲ. ಅವರು ಮುಂದಿನ ಐಪಿಎಲ್​​​ನಲ್ಲಿ ಅಡಲಿದ್ದಾರೆ ಎಂದು ಚೆನ್ನೈ ಸಿಇಒ ಕಾಶಿ ವಿಶ್ವನಾಥನ್​ ಹೇಳಿದ್ದಾರೆ. ಮಾಹಿತಿಯಂತೆ ಮುಂದಿನ 7 ತಿಂಗಳ ಒಳಗೆ ಈ ವಿಚಾರಕ್ಕೆ ಸರಿಯಾದ ಸಷ್ಟಣೆ ಸಿಗಲಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಧೋನಿ ಟೈಂ ವೇಸ್ಟ್​ ಮಾಡಿದ್ದಕ್ಕೆ ಮಾಜಿ ಕ್ರಿಕೆಟಿಗ ಕಿಡಿ! ಅಷ್ಟಕ್ಕೂ ಏನು ಮಾಡಿದ್ರು ಮಾಹಿ?

https://newsfirstlive.com/wp-content/uploads/2023/05/Dhoni-4.jpg

Load More