Advertisment

ಅಲೆಲೆಲೇ ಮೌನಿಕ.. ಹಳೇ ಲವ್ವರ್‌ ಮತ್ತೆ ಮೀಟ್ ಆಗೋಣ ಅಂದ್ರೆ ಹುಷಾರ್! ನಂಬಿ ಹೋದವನ ಕಥೆ ಏನಾಯ್ತು ಗೊತ್ತಾ?

author-image
Gopal Kulkarni
Updated On
ಅಲೆಲೆಲೇ ಮೌನಿಕ.. ಹಳೇ ಲವ್ವರ್‌ ಮತ್ತೆ ಮೀಟ್ ಆಗೋಣ ಅಂದ್ರೆ ಹುಷಾರ್! ನಂಬಿ ಹೋದವನ ಕಥೆ ಏನಾಯ್ತು ಗೊತ್ತಾ?
Advertisment
  • ಹಳೆ ಪ್ರೀತಿ ಮೀಟ್ ಮಾಡೋಣ ಬಾ ಅಂದ್ರೆ ಯಾವುದಕ್ಕೂ ಹುಷಾರಾಗಿರಿ
  • ಮಾಜಿ ಪ್ರಿಯತಮೆ ಕರೆದಳು ಅಂತ ಓಡೋಡಿ ಹೋದವನಿಗೆ ಏನಾಯ್ತು ಗೊತ್ತಾ?
  • ಬೆಂಗಳೂರಿನ ಕೋರಮಂಗಲ ಪೊಲೀಸರಿಂದ ಖತರ್ನಾಕ್ ಗ್ಯಾಂಗ್​ ಬಂಧನ

ಹಳೆ ಲವರ್ ಫೋನ್ ಮಾಡಿ ಬಾ ಮೀಟ್ ಆಗೋಣ ಅಂದ್ರೆ ಯಾವುದಕ್ಕೂ ನೀವು ಹುಷಾರಾಗಿರಿ. ಯಾಕಂದ್ರೆ ಹಳೆ ಲವರ್​ ಮಾತಿಗೆ ಮರುಳಾಗಿ ಮೀಟ್ ಮಾಡಲು ಬಂದ ವ್ಯಕ್ತಿಯನ್ನು ಕಿಡ್ನಾಪ್ ಮಾಡಿ ಸುಲಿಗೆ ಮಾಡಿದ ಘಟನೆ ಕೋರಮಂಗಲದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಎಟಿಎಂ ಬಳಿ ನಡೆಯುತ್ತಿದ್ದ ಜಗಳನ್ನು ಗಮನಿಸಿದ ಪೊಲೀಸರು ಪ್ರಕರಣವನ್ನು ಭೇದಿಸಿದ್ದಾರೆ ಬೆಂಗಳೂರಿನ ಕೋರಮಂಗಲ ಪೊಲೀಸರಿಂದ ಖತರ್ನಾಕ್ ಹನಿಗ್ಯಾಂಗ್​ ಬಂಧನವಾಗಿದೆ.ಆಂಧ್ರದ ನೆಲ್ಲೂರು ಮೂಲದ ಏಳು ಜನ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು. ಆಂಧ್ರದಲ್ಲಿ ಕಿಡ್ನಾಪ್ ಮಾಡಿ ಪಾವಗಡ ಹಾಗೂ ಬೆಂಗಳೂರಿಗೆ ಕರೆತಂದು ಹಲ್ಲೆ ಮಾಡಿ ಹಣ ಸುಲಿಗೆ ಮಾಡಿದ ಆರೋಪವನ್ನು ಇವರು ಎದುರಿಸುತ್ತಿದ್ದಾರೆ.

Advertisment

ಅಷ್ಟಕ್ಕೂ ಆಗಿದ್ದೇನು ಗೊತ್ತಾ?

ಆಂಧ್ರದ ನೆಲ್ಲರೂರಿನ ಮೆಡಿಕಲ್ ಶಾಫ್​ನಲ್ಲಿ ಶಿವ ಎಂಬ ವ್ಯಕ್ತಿ ಕೆಲಸ ಮಾಡಿಕೊಂಡಿದ್ದ ಈ ವೇಳೆ ಸಂಬಂಧಿಯಾದ ಮೌನಿಕ ಜೊತೆ ಶಿವನಿಗೆ ಪ್ರೇಮಾಂಕುರವಾಗಿತ್ತು. ಒಂದು ವರ್ಷದ ಇಂದೆ ಮೌನಿಕ ಶಿವನಿಂದ ದೂರವಾಗಿದ್ದಳು. ಆದ್ರೆ, ನವೆಂಬರ್ 17 ರಂದು ಏಕಾಏಕಿ ಶಿವನಿಗೆ ಕರೆ ಮಾಡಿ ಮೀಟ್​ ಮಾಡಲು ಪೆನಾಗೊಂಡಗೆ ಕರೆದಿದ್ದಾಳೆ. ಅಷ್ಟು ಮಾತ್ರವಲ್ಲ ನಿನ್ನ ಬಳಿ ಇರೋ ಕಾರು, ಚಿನ್ನಾಭರಣದ ಜೊತೆಗೆ ಬಾ ಸ್ನೇಹಿತರಿಗೆ ನಿನ್ನನ್ನು ಪರಿಚಯ ಮಾಡಿಸಬೇಕು ಎಂದು ಕೂಡ ಹೇಳಿದ್ದಾಳೆ.

ಇದನ್ನೂ ಓದಿ:ರೇಣುಕಾಸ್ವಾಮಿ ಕೇಸ್​ಗೆ ಬಿಗ್​ ಟ್ವಿಸ್ಟ್​; ಶೆಡ್​ನಲ್ಲಿದ್ದ ದರ್ಶನ್​ ಎಕ್ಸ್​ಕ್ಲ್ಯೂಸಿವ್ ಫೋಟೋಸ್ ರಿವೀಲ್​

ಮಾಜಿ ಪ್ರೇಯಸಿಯ ಮಾತನ್ನು ನಂಬಿದ ಶಿವ, ತನ್ನ ಬಳಿ ಇದ್ದ ಚಿನ್ನಾಭರಣದೊಂದಿಗೆ ಹೊರಟಿದ್ದಾನೆ. ಪೆನಾಗೊಂಡ ಬದಲು ಪಾವಗಡಕ್ಕೆ ಮೀಟಿಂಗ್ ಫಿಕ್ಸ್ ಆಗಿದೆ. ಪಾವಡಗಡದಲ್ಲಿ ಚಿನ್ನಾಭರಣದೊಂದಿಗೆ ಬಸ್​ನಲ್ಲಿ ಬಂದಿಳಿದ ಶಿವ ಮೌನಿಕಳನ್ನ ಭೇಟಿಯಾಗಿದ್ದ.
ಇಬ್ಬರು ಪಾವಗಡದಲ್ಲಿ ಸುತ್ತಾಡುವಾಗ ಕಾರ್​ನಲ್ಲಿ ಬಂದ ಆರೋಪಿಗಳು ಕಿಡ್ನಾಪ್ ಮಾಡಿದ್ದಾರೆ. ಬಳಿಕ ಪಾವಗಡದ ಮನೆಯೊಂದರಲ್ಲಿ ಕೂಡಿ ಹಾಕಿ ಶಿವನ ಮೇಲೆ ಮನಸೋಯಿಚ್ಛೆ ಹಲ್ಲೆ ಮಾಡಿದ್ದಾರೆ. ಆತನ ಬಳಿ ಇದ್ದ 4.20 ಲಕ್ಷ ರೂಪಾಯಿ ಮೌಲ್ಯದ 60 ಗ್ರಾಂ ಚಿನ್ನಾಭರಣ ಸುಲಿಗೆ ಮಾಡಿದ್ದಾರೆ. ಇವೆಲ್ಲವನ್ನೂ ತನಗೆ ಸಂಬಂಧವೇ ಇಲ್ಲದಂತೆ ನೋಡಿಕೊಂಡಿದ್ದಾಳೆ ಮೌನಿಕಳನ್ನು ಆ ಮನೆಯಿಂದ ಆರೋಪಿಗಳು ಕಳುಹಿಸಿಕೊಟ್ಟಿದ್ದಾಳೆ.

Advertisment

ಇದನ್ನೂ ಓದಿ:ಹೇರ್ ಡ್ರೈಯರ್‌ ಸ್ಫೋಟ ಪ್ರಕರಣಕ್ಕೆ ಬಿಗ್ ಟ್ವಿಸ್ಟ್‌; ಪ್ರೇಯಸಿಯ ಕೈ ಕಟ್‌! ಅಸಲಿಗೆ ಆಗಿದ್ದೇನು?

ಇದಾದ ಬಳಿಕ ಆರೋಪಿಗಳು ಶಿವನಿಗೆ ಮತ್ತೆ 10 ಲಕ್ಷ ರೂಪಾಯಿ ನೀಡುವಂತೆ ಬೆದರಿಕೆ ಹಾಕಿದ್ದಾರೆ. ಕೊನೆಗೆ 5 ಲಕ್ಷ ನೀಡಲು ಒಪ್ಪಿದ ಶಿವ,  ಸ್ನೇಹಿತರಿಂದ ಅಕೌಂಟ್​ಗೆ ಹಣ ಹಾಕಿಸಿಕೊಂಡಿದ್ದಾನೆ . ಆದ್ರೆ ಆತನ ಬಳಿ ಎಟಿಎಂ ಕಾರ್ಡ್ ಇಲ್ಲದಿದ್ದರಿಂದ ಕಾರ್ಡ್ ಕೊರಿಯರ್ ಮಾಡಿಸಿಕೊಂಡಿದ್ದ. ಬೆಂಗಳೂರಿನ ಮೆಸೆಸ್ಟಿಕ್ ಅಡ್ರೆಸ್​ಗೆ 4 ರಿಂದ 5 ಎಟಿಎಂ ಕಾರ್ಡ್​ಗಳನ್ನ ಕೊರಿಯರ್ ಮಾಡಿಸಿಕೊಂಡಿದ್ದರು ಆರೋಪಿಗಳು, ಎ1 ಆರೋಪಿ ಹರೀಶ್​ಗೆ ಬೆಂಗಳೂರು ಪರಿಚಯ ಇದ್ದಿದ್ದರಿಂದ ಸಿಕ್ಕಿ ಬೀಳುವುದಿಲ್ಲ ಎಂಬ ವಿಶ್ವಾಸದಲ್ಲಿದ್ದ. ಬಳಿಕ ನವೆಂಭರ್ 21 ರ ಸಂಜೆ 5 ಗಂಟೆ ಸುಮಾರಿಗೆ ಇಬ್ಬರು ಆರೋಪಿಗಳು ಮತ್ತು ಶಿವ ಕೋರಮಂಗಲದ ಎಟಿಎಂನಲ್ಲಿ ಹಣ ಡ್ರಾ ಮಾಡಿದ್ದರು. ಆದರೆ ಈ ವೇಳೆ ಇಬ್ಬರು ಆರೋಪಿಗಳ ಮಧ್ಯೆ ಹಣದ ವಿಚಾರಕ್ಕೆ ಜಗಳ ಆಗಿದೆ. ಇದೇ ಸಮಯವನ್ನು ಉಪಯೋಗಿಸಿಕೊಂಡ ಶಿವ ಜೋರಾಗಿ ಕಿರುಚಿಕೊಂಡು ಸ್ಥಳದಲ್ಲಿದ್ದ ಜನರನ್ನು ಸೇರಿಸಿದ್ದಾನೆ.

publive-image

ಇದೇ ಸಮಯದಲ್ಲಿ ಸಮೀಪದಲ್ಲಿಯೇ ಡ್ಯೂಟಿಯಲ್ಲಿದ್ದ ಪಿಎಸ್​ಐ ಮಾದೇಶ್ ಸ್ಥಳಕ್ಕೆ ಬಂದು ವಿಚಾರಣೆ ನಡೆಸಿದಾಗ ಶಿವನ ಮಾತು ಕೇಳಿ ಅನುಮಾನ ಬಂದು ಮೂವರನ್ನು ಸ್ಟೇಷನ್​ಗೆ ಕರೆತಂದಿದ್ದಾರೆ. ಆರೋಪಿಗಳು ಮತ್ತು ಶಿವನನ್ನು ವಿಚಾರಿಸಿದಾಗ ಕಿಡ್ನಾಪ್ ಮತ್ತು ಸುಲಿಗೆಯ ಕಥೆ ಬಯಲಿಗೆ ಬಂದಿದೆ. ಈ ವಿಚಾರ ಕೇಳಿ ತಕ್ಷಣ FIR ದಾಖಲಿಸಿ ತನಿಖೆಗೆ ಸೂಚಿಸಿದ್ದ ಡಿಸಿಪಿ ಸಾರಾ ಫಾತೀಮಾ, ಶಿವನಿಂದ ದೂರು ಪಡೆದು ಪಾವಗಡದಲ್ಲಿದ್ದ ಮೌನಿಕ‌ ಸೇರಿದಂತೆ ಇನ್ನಿತರ ಆರೋಪಿಗಳನ್ನ ಕರೆತಂದು ವಿಚಾರಣೆ ನಡೆಸಿದ್ದಾರೆ.ವಿಚಾರಣೆ ವೇಳೆ ಎಲ್ಲಾ ಕಥೆ ಬಿಚ್ಚಿಟ್ಟಿದ್ದಾರೆ ಮೌನಿಕ ಮತ್ತು ಆರೋಪಿಗಳು.ಸದ್ಯ 7 ಜನರನ್ನ ಬಂಧಿಸಿ ಕಸ್ಟಡಿಗೆ ಪಡೆದು ಹೆಚ್ಚಿನ ವಿಚಾರಣೆಯನ್ನು ಪೊಲೀಸರು ನಡೆಸುತ್ತಿದ್ದಾರೆ.

Advertisment

ಆರೋಪಿಗಳಲ್ಲಿ ಒಬ್ಬನಾದ ಅಂಜನೀಲ್ ಆಂಧ್ರದಲ್ಲಿ ತನ್ನದೇ ಆದ ಟಾಪ್ -9 ಎಂಬ ಯೂಟ್ಯೂಬ್ ಚಾನೆಲ್ ನಡೆಸುತ್ತಿದ್ದ. ಇದೇ ಸಂಸ್ಥೆಯಲ್ಲಿ ಮೌನಿಕ ಕೂಡ ಕೆಲಸ ಮಾಡ್ತಿದ್ಲು, ಇಬ್ಬರಿಗೂ ಗೆಳೆತನ ಇತ್ತು. ಈ ವೇಳೆ ಮೌನಿಕಗೆ ಹಣದ ಅವಶ್ಯಕತೆ ಇದ್ದಿದ್ದರಿಂದ ಅಂಜನೀಲ್ ಬಳಿ ಹೇಳಿಕೊಂಡಿದ್ದಳು. ಜೊತೆಗೆ ಶಿವನ ಬಗ್ಗೆಯೂ ಹೇಳಿದ್ದಳು. ಇದನ್ನು ಅರಿತ ಅಂಜನೀಲ್ ತನ್ನ ಸ್ನೇಹಿತ ಹರೀಶ್ ಜೊತೆ ಸೇರಿ ಈ ಹನಿಟ್ರ್ಯಾಪ್​ಗೆ ಪ್ಲ್ಯಾನ್ ಮಾಡಿದ್ದ. ಈ ಮೊದಲೇ ಹರೀಶ್ ಕ್ರಿಮಿನಲ್ ಬ್ಯಾಕ್​ಗ್ರೌಂಡ್ ಇರೋ ವ್ಯಕ್ತಿಯಾಗಿದ್ದ. ಹೀಗಾಗಿಯೇ ತನ್ನ ಸ್ನೇಹಿತರ ಜೊತೆ ಸೇರಿ ಮೌನಿಕಗಳನ್ನು ಮುಂದೆ ಬಿಟ್ಟು ಶಿವನನ್ನು ಕಿಡ್ನಾಪ್ ಮಾಡುವ ಪ್ಲ್ಯಾನ್ ಮಾಡಿದ್ದ.ಆದರೆ ಎಲ್ಲಾ ಅಂದುಕೊಂಡಂತೆ ನಡೆದು ಹಣ ಕೈಗೆ ಬರೋ ವೇಳೆ ಕೈಕೊಟ್ಟ ನಸೀಬು ಇವರೆಲ್ಲರನ್ನೂ ಕಂಬಿ ಹಿಂದೆ ಹೋಗುವಂತೆ ಮಾಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment