ಪುತ್ರನ ರಾಜಕೀಯ ಭವಿಷ್ಯಕ್ಕಾಗಿ ಕಾಂಗ್ರೆಸ್ಗೆ ಬರ್ತಾರಾ?
ಹೆಬ್ಬಾರ್ ಸೋಲಿಸಲು ಬಿಜೆಪಿಯಲ್ಲೇ ನಡೆದಿತ್ತಾ ಷಡ್ಯಂತ್ರ..?
ಕಾಂಗ್ರೆಸ್ ಸೇರುವ ಬಗ್ಗೆ ಶಿವರಾಂ ಹೆಬ್ಬಾರ್ ಆಡಿದ ಮಾತೇನು..?
ಬಿಜೆಪಿ ತೊರೆದು ಪುನಃ ಕಾಂಗ್ರೆಸ್ ಸೇರಲು ಶಾಸಕ ಶಿವರಾಂ ಹೆಬ್ಬಾರ್ ಸಿದ್ಧರಾಗಿದ್ದಾರೆ ಎಂಬ ಚರ್ಚೆ ರಾಜಕೀಯದಲ್ಲಿ ಜೋರಾಗಿದೆ. ಈ ಸಂಬಂಧ ಇವತ್ತು ಹೆಬ್ಬಾರ್ ಅವರು ದಿಢೀರ್ ಸುದ್ದಿಗೋಷ್ಟಿ ನಡೆಸಿ ತಮ್ಮದೇ ಪಕ್ಷದ ಕೆಲವು ನಾಯಕರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿರೋದು ರಾಜಕೀಯ ಚರ್ಚೆಗಳಿಗೆ ಮತ್ತಷ್ಟು ಪುಷ್ಟಿ ನೀಡಿದೆ.
ಹೆಬ್ಬಾರ್ ಬೇಸರ ಏನು..?
ನಾನು ಪಕ್ಷ ಬಿಡುವ ಬಗ್ಗೆ ಇವತ್ತಿನವರೆಗೂ ಯಾರೊಂದಿಗೂ ಚರ್ಚಿಸಿಲ್ಲ. ಸದ್ಯ ನಾನು ಬಿಜೆಪಿ ಪಕ್ಷದಲ್ಲಿಯೇ ಶಾಸಕನಾಗಿದ್ದೇನೆ. ತಮ್ಮ ಪಕ್ಷದ ಕೆಲವರೇ ನನ್ನ ವಿರುದ್ಧ ತಂತ್ರ ಮಾಡ್ತಿದ್ದಾರೆ. ಜವಾಬ್ದಾರಿ ಸ್ಥಾನದಲ್ಲಿರುವವರು ನನ್ನನ್ನ ಸೋಲಿಸಲು ಪ್ರಯತ್ನಿಸಿದ್ದಾರೆ. ಇದನ್ನ ನಮ್ಮ ಪಕ್ಷದ ನಾಯಕರ ಗಮನಕ್ಕೆ ತಂದಿದ್ದೇನೆ. ಈವರೆಗೆ ಅವರು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಬೇಸರ ಹೊರಹಾಕಿದ್ದಾರೆ. ಆದರೆ ಕಾಂಗ್ರೆಸ್ ಸೇರುವ ಬಗ್ಗೆ ಯಾವುದೇ ಸುಳಿವು ನೀಡಿಲ್ಲ.
ಪುತ್ರನ ಭವಿಷ್ಯಕ್ಕಾಗಿ ಕಾಂಗ್ರೆಸ್ ಸೇರ್ಪಡೆ..?
ಈ ಅಸಮಾಧಾನ ಬೆನ್ನಲ್ಲೇ ಹೆಬ್ಬಾರ್ ಕಾಂಗ್ರೆಸ್ ಸೇರೋದು ಬಹುತೇಕ ಪಕ್ಕಾ ಎನ್ನಲಾಗುತ್ತಿದೆ. ಮತ್ತೊಂದು ಕಡೆ ಹೆಬ್ಬಾರ್, ಕಾಂಗ್ರೆಸ್ ಸೇರುವ ಹಿಂದೆ ವೈಯಕ್ತಿಕ ರಾಜಕೀಯ ಲೆಕ್ಕಾಚಾರ ಕೂಡ ಇದೆ. ಅದು ಏನೆಂದರೆ, ತಮ್ಮ ಪುತ್ರ ವಿವೇಕ್ ಹೆಬ್ಬಾರ್ ಅವರ ರಾಜಕೀಯ ಭವಿಷ್ಯ ಎಂದು ಹೇಳಲಾಗಿದೆ.
ವರದಿಗಳ ಪ್ರಕಾರ, ಪುತ್ರ ವಿವೇಕ್ ಹೆಬ್ಬಾರ್ ರಾಜಕೀಯ ಭವಿಷ್ಯಕ್ಕಾಗಿ ಕಾಂಗ್ರೆಸ್ ಸೇರಲು ಸಿದ್ಧರಾಗಿದ್ದಾರಂತೆ. ಒಂದು ವೇಳೆ ನಾನು, ಕಾಂಗ್ರೆಸ್ಗೆ ಬಂದರೆ ಮುಂದೆ ಬರುವ ಲೋಕಸಭಾ ಚುನಾವಣೆಯಲ್ಲಿ ಪುತ್ರನಿಗೆ ಟಿಕೆಟ್ ನೀಡಿ ಎಂದು ಡಿಮ್ಯಾಂಡ್ ಮಾಡಲಿದ್ದಾರಂತೆ. ಎಲ್ಲವೂ ಅಂದುಕೊಂಡಂತೆ ಆದರೆ ವಿವೇಕ್ ಹೆಬ್ಬಾರ್ ಅವರನ್ನು ಕೆನರಾ ಲೋಕಸಭಾ ಕ್ಷೇತ್ರದಿಂದ ಕಣಕ್ಕೆ ಇಳಿಸಲು ಶಿವರಾಂ ಹೆಬ್ಬಾರ್ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಇನ್ನು ಬಿಜೆಪಿಯಲ್ಲಿ ವಿವೇಕ್ ಹೆಬ್ಬಾರ್ಗೆ ಟಿಕೆಟ್ ಸಿಗೋದು ಬಹುತೇಕ ಡೌಟ್. ಮತ್ತೊಂದು ಕಡೆ ಕಾಂಗ್ರೆಸ್, ಉತ್ತರ ಕನ್ನಡ ಲೋಕಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯ ಹುಡುಕಾಟದಲ್ಲಿದೆ. ಇದನ್ನೇ ಎನ್ಕ್ಯಾಶ್ ಮಾಡಿಕೊಂಡಿರುವ ಹೆಬ್ಬಾರ್, ಪುತ್ರನಿಗೆ ಟಿಕೆಟ್ ನೀಡುವಂತೆ ಬೇಡಿಕೆ ಇಡಲು ಪ್ಲಾನ್ ಮಾಡಿದ್ದಾರೆ ಎಂದು ಹೇಳಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ