newsfirstkannada.com

‘ಸೌಜನ್ಯ ಕೇಸ್​ ರಹಸ್ಯ ಬಿಚ್ಚಿಟ್ಟರೆ ಸಾಯಿಸಬಹುದು’; ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಸ್ಫೋಟಕ ಹೇಳಿಕೆ

Share :

08-08-2023

    ಸೌಜನ್ಯ ಪ್ರಕರಣದ ಮರು ತನಿಖೆಗೆ ಹೆಚ್ಚಿದ ಒತ್ತಡ

    ‘ಸೌಜನ್ಯ ಹಂತಕರು ಗೊತ್ತಿದ್ದರೆ ಗುಂಡು ಹೊಡೆಯಿರಿ’

    ವಿಹೆಚ್​ಪಿ, ಭಜರಂಗದಳದಿಂದ ಸಾಮೂಹಿಕ ಪ್ರಾರ್ಥನೆ

ರಾಜ್ಯಾದ್ಯಂತ ಭಾರೀ ಸದ್ದು ಮಾಡುತ್ತಿರುವ ಧರ್ಮಸ್ಥಳದ ಸೌಜನ್ಯ ಹತ್ಯೆ ಪ್ರಕರಣ, ಕಾಂಗ್ರೆಸ್​ನ ಮಾಜಿ ಶಾಸಕರ ಸ್ಫೋಟಕ ಹೇಳಿಕೆಯಿಂದ ಹೊಸ ಟ್ವಿಸ್ಟ್​ ಪಡೆದುಕೊಂಡಿದೆ. ರಹಸ್ಯ ಬಿಚ್ಚಿಟ್ಟರೆ ನನ್ನನ್ನೇ ಸಾಯಿಸಬಹುದು ಅಂದಿರೋದು ಸಂಚಲನವನ್ನು ಸೃಷ್ಟಿಸಿದೆ. ಇದರ ಬೆನ್ನಲ್ಲೇ ರಾಮಸೇನೆಯ ಸ್ಥಾಪಕಾಧ್ಯಕ್ಷ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಸೌಜನ್ಯ ಸಾವಿಗೆ ಸೂಕ್ತ ನ್ಯಾಯಕ್ಕಾಗಿ ರಾಜ್ಯದಲ್ಲಿ ದಿನದಿಂದ ದಿನಕ್ಕೆ ಒತ್ತಾಯ ಹೆಚ್ಚಾಗುತ್ತಿದೆ. ಇದರ ನಡುವೆ ಬೆಳ್ತಗಂಡಿಯ ಮಾಜಿ ಶಾಸಕ ನೀಡಿರುವ ಹೇಳಿಕೆ ಸೌಜನ್ಯ ಪ್ರಕರಣಕ್ಕೆ ಸ್ಫೋಟಕ ತಿರುವು ನೀಡಿದ್ದು, ಸಂಚಲನವನ್ನೇ ಸೃಷ್ಟಿಸಿದೆ.

ಸೌಜನ್ಯ ಕೇಸ್​ ರಹಸ್ಯ ಬಿಚ್ಚಿಟ್ಟರೆ ನನ್ನನ್ನು ಸಾಯಿಸಬಹುದು

ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾಜಿ ಕಾಂಗ್ರೆಸ್ ಶಾಸಕ ವಸಂತ ಬಂಗೇರ ಅವರು ಸೌಜನ್ಯ ಪ್ರಕರಣದ ತನಿಖೆಯಲ್ಲಿ ಏನೇನು ಮೋಸ ಆಗಿದೆ ಅನ್ನೋದನ್ನು ಸಾರ್ವಜನಿಕವಾಗಿ ನಿಮ್ಮ ಜೊತೆ ಹೇಳೋಕೆ ಸಾಧ್ಯವಿಲ್ಲ. ಆದರೆ ಸಮಯ ಸಂದರ್ಭ ಬಂದಾಗ ನಾನು ಅದನ್ನು ಹೇಳದೆ ಬಿಡೋದಿಲ್ಲ. ಒಂದಲ್ಲ ಒಂದು ದಿನ ಕಾಲ ಬರುತ್ತೆ. ಆ ಸಮಯದಲ್ಲಿ ನಾನು ಸೌಜನ್ಯ ಪ್ರಕರಣದ ದಿಕ್ಕು ತಪ್ಪಿಸಿದ್ದು ಯಾರು, ಅನ್ಯಾಯ ಮಾಡಿದ್ದು ಯಾರು? ತೊಂದರೆ ಕೊಟ್ಟಿದ್ದು ಯಾರು ಅನ್ನೋದು ಸೇರಿದಂತೆ ಸಂಪೂರ್ಣ ವಿಚಾರವನ್ನು ನಾನು ನಿಮ್ಮ ಮುಂದೆ ಇಡುತ್ತೇನೆ. ಆದರೆ ಅದಕ್ಕೂ ಮೊದಲು ನನ್ನನ್ನು ಯಾರಾದರೂ ಕೊಲೆ ಮಾಡಿದರೆ ಹೋಯ್ತು, ನಾನು ಬದುಕಿ ಉಳಿದರೆ ಎಲ್ಲವನ್ನೂ ಹೇಳೇ ಹೇಳುತ್ತೇನೆ. ನನ್ನನ್ನು ಸುಲಭವಾಗಿ ಕೊಲ್ಲೋಕೆ ಯಾರಿಂದಲೂ ಸಾಧ್ಯವಿಲ್ಲ. ಯಾಕೆಂದರೆ ನಾನು ದೈವ ಭಕ್ತ ಇದ್ದೀನಿ ಎಂದಿದ್ದಾರೆ.

‘ಸೌಜನ್ಯ ಹತ್ಯೆ ಹಂತಕರಿಗೆ ಗುಂಡು ಹೊಡೆಯಿರಿ’

ಸೌಜನ್ಯ ಪ್ರಕರಣದಲ್ಲಿ ಮಾಜಿ ಕಾಂಗ್ರೆಸ್​ ಶಾಸಕ ನೀರುವ ಹೇಳಿಕೆ ಸಂಚಲನ ಸೃಷ್ಟಿಸಿದೆ. ಮತ್ತೊಂದೆಡೆ ಮಂಗಳೂರಿನಲ್ಲಿ ರಾಮಸೇನೆ ರಾಜ್ಯಾಧ್ಯಕ್ಷ ಪ್ರಚೋದನಾಕಾರಿ ಹೇಳಿಕೆ ನೀಡಿದ್ದಾರೆ. ಸೌಜನ್ಯ ಅತ್ಯಾಚಾರ ಕೊಲೆ ಪ್ರಕರಣದಲ್ಲಿ ಹಂತಕರು ಯಾರೆಂದು ಗೊತ್ತಿದ್ದರೆ ಅವರಿಗೆ ಗುಂಡು ಹೊಡೆಯಿರಿ. ಆ ಬಳಿಕ ನನ್ನ ಬಳಿಗೆ ಬನ್ನಿ, ನಾವು ಬೆಂಬಲ ನೀಡುತ್ತೇವೆ ಎಂದು ರಾಮ್ ಸೇನೆಯ ಸ್ಥಾಪಕಾಧ್ಯಕ್ಷ ಪ್ರಸಾದ್ ಅತ್ತಾವರ್ ಕರೆ ನೀಡಿದ್ದಾರೆ.

ಸೌಜನ್ಯ ಪ್ರಕರಣದಲ್ಲಿ ಸೂಕ್ತ ನ್ಯಾಯಕ್ಕಾಗಿ ಪ್ರತಿಭಟನೆ, ಕೂಗು ಹೆಚ್ಚಾಗುತ್ತಿದೆ. ಇದೀಗ ನಿಜವಾದ ಆರೋಪಿಗಳಿಗೆ ಶಿಕ್ಷೆ ನೀಡುವಂತೆ ದೇವರ ಮೊರೆ ಹೋಗಲಾಗಿದೆ. ವಿಶ್ವ ಹಿಂದೂ ಪರಿಷತ್​ ಮತ್ತು ಭಜರಂಗದಳದ ಸದಸ್ಯರು, ಲಕ್ಷೀ ವೆಂಕಟರಮಣ, ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿದ್ದಾರೆ. ಇನ್ನು ಈ ಸಾಮೂಹಿಕ ಪ್ರಾರ್ಥನೆಯಲ್ಲಿ ಸೌಜನ್ಯ ತಾಯಿ ಕುಸುಮಾವತಿ ಕೂಡ ಭಾಗಿಯಾಗಿದ್ರು. ಒಟ್ಟಾರೆ.. ಧರ್ಮಸ್ಥಳದ ಸೌಜನ್ಯ ಪ್ರಕರಣದ ಮರು ತನಿಖೆಗೆ ಒತ್ತಡ, ಪ್ರತಿಭಟನೆ ಹೆಚ್ಚಾಗುತ್ತಿದೆ. ರಾಜ್ಯ ಸರ್ಕಾರ ಇದನ್ನು ಮರು ತನಿಖೆಗೆ ಒಪ್ಪಿಸುತ್ತಾ ಇಲ್ವಾ ಅನ್ನೋದನ್ನು ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಸೌಜನ್ಯ ಕೇಸ್​ ರಹಸ್ಯ ಬಿಚ್ಚಿಟ್ಟರೆ ಸಾಯಿಸಬಹುದು’; ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ ಸ್ಫೋಟಕ ಹೇಳಿಕೆ

https://newsfirstlive.com/wp-content/uploads/2023/06/Soujanya-Murder-Case.jpg

Load More