33 ವರ್ಷದ ಗೆಳತಿಗೆ 906 ಕೋಟಿ ಆಸ್ತಿ ಬರೆದಿಟ್ಟ ಮಾಜಿ ಪ್ರಧಾನಿ
ಚಿಕಿತ್ಸೆ ಫಲಿಸದೇ ಜೂನ್ 12ರಂದು ಇಟಲಿಯ ಮಾಜಿ ಪ್ರಧಾನಿ ನಿಧನ
ಅತೀ ಹೆಚ್ಚು ಮೌಲ್ಯದ ಆಸ್ತಿ ವಿಲ್ ಬರೆದಿಟ್ಟು ಅಚ್ಚರಿ ಮೂಡಿಸಿದ ಪ್ರಧಾನಿ
ರೋಮ್: ಇಟಲಿಯ ಮಾಜಿ ಪ್ರಧಾನಿ ಸಿಲ್ವಿಯೊ ಬೆರ್ಲುಸ್ಕೋನಿ ಅವರು ಜೂನ್ 12ರಂದು ನಿಧನ ಹೊಂದಿದ್ದರು. ಅವರು ಸಾಯುವ ಮುನ್ನ ತನ್ನ 33 ವರ್ಷದ ಗೆಳತಿಯ ಹೆಸರಿನಲ್ಲಿ ಬರೋಬ್ಬರಿ 906 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಬರೆದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
86 ವರ್ಷದ ಸಿಲ್ವಿಯೊ ಬೆರ್ಲುಸ್ಕೋನಿ ಅವರು 33 ವರ್ಷದ ಮಾರ್ಟಾ ಫಾಸಿನಾ ಅವರನ್ನು ಪ್ರೀತಿಸುತ್ತಿದ್ದರು. ಆದರೆ ಈ ಇಬ್ಬರು ಮದುವೆಯಾಗಿರಲಿಲ್ಲ. ಅನಾರೋಗ್ಯದ ಹಿನ್ನೆಲೆಯಲ್ಲಿ ಮಾಜಿ ಪ್ರಧಾನಿ ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಿಸದೇ ಜೂನ್ 12 ಬೆರ್ಲುಸ್ಕೋನಿ ಅವರು ನಿಧನ ಹೊಂದಿದರು. ಇನ್ನು ಸಾಯುವ ಮುನ್ನ ಅವರ ಗೆಳತಿ ಹೆಸರಿನಲ್ಲಿ ಸುಮಾರು 906 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಿಲ್ ಬರೆದಿಟ್ಟಿದ್ದಾರೆ.
ಇನ್ನು, ಇದರ ಜೊತೆಗೆ ಮಾತ್ರವಲ್ಲದೇ ಬರ್ಲುಸ್ಕೋನಿ ಅವರು ತಮ್ಮ ಕುಟುಂಬಸ್ಥರ ಹೆಸರಿನಲ್ಲೂ ಆಸ್ತಿಯನ್ನು ಬರೆದಿದ್ದಾರೆ. ಇಬ್ಬರು ಮಕ್ಕಳಿಗೆ ಹಾಗೂ ಅವರ ಸಹೋದರನ ಹೆಸರಿನಲ್ಲೂ ಆಸ್ತಿ ಬರೆದಿಟ್ಟಿದ್ದಾರೆ ಎಂದು ತಿಳಿದು ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ