51 ಸಬ್ ರಿಜಿಸ್ಟ್ರಾರ್ಗಳ ವಿರುದ್ಧ ಕ್ರಿಮಿನಲ್ ಕೇಸ್ಗೆ ಕಾಂಗ್ರೆಸ್ ಸರ್ಕಾರ ಚಿಂತನೆ
ಕಿಕ್ಬ್ಯಾಕ್ನಿಂದ ಸರ್ಕಾರದ ಬೊಕ್ಕಸಕ್ಕೆ ನೂರಾರು ಕೋಟಿ ಲಾಸ್ ಮಾಡಿದ್ರಾ?
ಸುಪ್ರೀಂಕೋರ್ಟ್ ಆದೇಶ ಏನು ಹೇಳುತ್ತೆ? ಸಬ್ ರಿಜಿಸ್ಟರ್ಸ್ ಮಾಡಿದ್ದೇನು?
ಬೆಂಗಳೂರು: ಹಿಂದೆಯಿದ್ದ ಬಿಜೆಪಿ ಸರ್ಕಾರದ ಕಂದಾಯ ಇಲಾಖೆಯಲ್ಲಿ ನಡೆದಿದೆ ಎನ್ನಲಾದ ಬಹುದೊಡ್ಡ ಹಗರಣ ಬಯಲಾಗಿದೆ. ಕಂದಾಯ ಸಚಿವರಾಗಿದ್ದ ಆರ್.ಅಶೋಕ್ ಅವರ ಗಮನಕ್ಕೆ ಬಾರದಂತೆ ಕಳೆದ 3 ವರ್ಷದಲ್ಲಿ ರಿಜಿಸ್ಟರ್ ಮಾಡಿದ್ದ ಅಧಿಕಾರಿಗಳಿಗೆ ಬಿಗ್ ಶಾಕ್ ಕಾದಿದೆ. 2020ರ ನಂತರದ ಕೆಲ ರಿಜಿಸ್ಟ್ರೇಷನ್ಗಳು ರದ್ದು ಆಗಲಿವೆ ಎನ್ನುವ ಪ್ರಶ್ನೆ ಎದ್ದಿದೆ. ಸುಪ್ರೀಂಕೋರ್ಟ್ ಆದೇಶವನ್ನು ಉಲ್ಲಂಘಿಸಿ, ಇಲಾಖೆ ಅಧಿಕಾರಿಗಳು ಹಣ ದಾಹಕ್ಕಾಗಿ ಯಾವುದೇ ದಾಖಲೆಗಳಿಲ್ಲದೆ ರಿಜಿಸ್ಟ್ರೆಷನ್ ಮಾಡಿದ್ದಾರೆ. ಸದ್ಯ ಇದು ನೋಂದಣಿ ಮಾಡಿಕೊಂಡ ಜನರಿಗೆ ಸಂಕಷ್ಟ ತಂದಂತಾಗಿದೆ. ಕೋರ್ಟ್ ಆದೇಶ ಉಲ್ಲಂಘಿಸಿದ್ದಕ್ಕೆ ರಿಜಿಸ್ಟ್ರೇಷನ್ ಕ್ಯಾನ್ಸಲ್ ಆಗಿ ಪ್ರಾಪರ್ಟಿ ವಾಪಸ್ ಆಗಲಿದೆ ಎಂದು ಹೇಳಲಾಗಿದೆ.
ಎರಡು ಜಿಲ್ಲೆಯ 51 ಸಬ್ ರಿಜಿಸ್ಟ್ರಾರ್ಗಳು ಅಕ್ರಮದಲ್ಲಿ ಭಾಗಿ
ಸರ್ಕಾರದ ಬೊಕ್ಕಸಕ್ಕೆ ಕೋಟಿ ಕೋಟಿ ನಾಮ ಭ್ರಷ್ಟರು ಬೆಂಗಳೂರು ನಗರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಅಕ್ರಮವೆಸಗಿದ್ದಾರೆ. ಈ 2 ಜಿಲ್ಲೆಯಿಂದ ಒಟ್ಟು 51 ಸಬ್ ರಿಜಿಸ್ಟ್ರಾರ್ಗಳು ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಈ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ತನಿಖೆ ಮಾಡಿಸಿದ್ದು ಹಗರಣವನ್ನು ಬಯಲಿಗೆಳೆದಿದ್ದಾರೆ. ಅಷ್ಟೇ ಅಲ್ಲ, ಆರೋಪಿತ ಸಬ್ ರಿಜಿಸ್ಟ್ರಾರ್ಗಳಿಗೆ ಈಗಾಗಲೇ ಸರ್ಕಾರ ನೋಟಿಸ್ ನೀಡಿ ಎಚ್ಚರಿಕೆ ಗಂಟೆ ಕೊಟ್ಟಿದೆ.
ಕಿಕ್ ಬ್ಯಾಕ್ ಪಡೆದುಕೊಂಡಿರುವ ಅಧಿಕಾರಿಗಳು ಸರ್ಕಾರದ ಆದಾಯಕ್ಕೆ ನೂರಾರು ಕೋಟಿ ಕನ್ನ ಹಾಕಿದ್ದಾರೆ. ಹೀಗಾಗಿ ಬೆಂಗಳೂರು ನಗರದ 47 ಸಬ್ ರಿಜಿಸ್ಟ್ರಾರ್ಗಳು ಮತ್ತು ಬೆಂಗಳೂರು ಗ್ರಾಮಾಂತರದ 4 ಸಬ್ ರಿಜಿಸ್ಟ್ರಾರ್ಗಳ ವಿರುದ್ಧ ಸರ್ಕಾರ ಕ್ರಿಮಿನಲ್ ಕೇಸ್ ದಾಖಲಿಸಲು ಮುಂದಾಗಿದೆ ಎಂದು ಸಾಮಾಜಿಕ ಕಾರ್ಯಕರ್ತ ನಾರಾಯಣ ಸ್ವಾಮಿಯವರು ಆರೋಪ ಮಾಡಿದ್ದಾರೆ.
ಸುಪ್ರಿಂ ಕೋರ್ಟ್ ಆದೇಶವೇನು?
ರಾಜ್ಯ ಸರ್ಕಾರ 2009ರಲ್ಲಿ 344 ರಾಜ್ಯಪತ್ರ ಬಿಡಗಡೆ ಮಾಡಿ, ರಿಜಿಸ್ಟ್ರೇಷನ್ಗೆ ಸೂಕ್ತ ದಾಖಲೆಗಳ ಸಂಗ್ರಹ ಮಾಡಲು ಸೂಚನೆ ನೀಡಿತ್ತು. ಇ ಸ್ವತ್ತು, ಕೃಷಿ, ಅಪಾರ್ಟ್ಮೆಂಟ್ ರಿಜಿಸ್ಟ್ರೇಷನ್ಗೆ ಕೆಲ ನಿಯಮಗಳಿದ್ದವು. ಹೀಗಾಗಿಯೇ ಕೆಲ ಸಬ್ ರಿಜಿಸ್ಟ್ರಾರ್ಗಳು ಹೈ ಕೋರ್ಟ್ಗೆ ಹೋಗಿ ಸ್ಟೇ ತಂದಿದ್ದರು. ಇದನ್ನು ಸ್ವತಃ ಐಜಿಆರ್ ಸುಪ್ರಿಂ ಕೊರ್ಟ್ಗೆ ಹೋಗಿ ಪ್ರಶ್ನಿಸಿದ್ದರು. ಇದರಿಂದ ಹೈಕೋರ್ಟ್ ಆದೇಶಕ್ಕೆ ಸ್ಟೇ ಮಾಡಿ ಸುಪ್ರಿಂ ಕೋರ್ಟ್ ವಿಚಾರಣೆ ಮಾಡುತ್ತಿದ್ದು ಇದು ಈಗ ಕೊನೆ ಹಂತಕ್ಕೆ ಬಂದು ನಿಂತಿದೆ. ಇದರ ನಡುವೆಯೇ ಸಬ್ ರಿಜಿಸ್ಟ್ರಾರ್ಗಳು 3 ವರ್ಷದಲ್ಲಿ ಮತ್ತೆ ಅಕ್ರಮವೆಸಗಿದ್ದಾರೆ ಎಂದು ಆರೋಪ ಕೇಳಿ ಬಂದಿದೆ.
ಬೆಂಗಳೂರಿನ ಸಬ್ ರಿಜಿಸ್ಟ್ರಾರ್ಗಳ ಕಳ್ಳಾಟ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ