newsfirstkannada.com

ಕೋಲಾರದಲ್ಲಿ ಕಾಂಗ್ರೆಸ್ ಮುಖಂಡನ ಕೊಲೆಗೆ ಕಾರಣವೇನು? A1 ಆರೋಪಿ ಎದೆ ಮೇಲೆ ರಮೇಶ್ ಕುಮಾರ್ ಟ್ಯಾಟೋ

Share :

24-10-2023

  5 ವರ್ಷದ ದ್ವೇಷದ ಹಿನ್ನೆಲೆಯಲ್ಲಿ ಸುಪಾರಿ ಕೊಟ್ಟು ಬರ್ಬರವಾಗಿ ಹತ್ಯೆ

  ಶ್ರೀನಿವಾಸಪುರದಲ್ಲಿ ಕೊಲೆ ಆದ ಕಾಂಗ್ರೆಸ್ ಮುಖಂಡ ಎಂ. ಶ್ರೀನಿವಾಸನ್

  ರಮೇಶ್ ಕುಮಾರ್ ಬಲಗೈ ಬಂಟನ ಕೊಲೆ ಮಾಡಿದ್ದು ಅಭಿಮಾನಿಯೇ?

ಕೋಲಾರ: ಶ್ರೀನಿವಾಸಪುರದಲ್ಲಿ ಕಾಂಗ್ರೆಸ್‌ ಮುಖಂಡನನ್ನು ಬರ್ಬರವಾಗಿ ಹತ್ಯೆ ಮಾಡಿದ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಹತ್ಯೆ ನಡೆದ 12 ಗಂಟೆಯೊಳಗೆ ಕೊಲೆಗೆ ಕಾರಣವೇನು? ಸುಪಾರಿ ಕೊಟ್ಟವರು ಯಾರು ಅನ್ನೋ ಸತ್ಯ ಬಯಲಾಗಿದೆ. ಕಾಂಗ್ರೆಸ್ ಮುಖಂಡ ಎಂ. ಶ್ರೀನಿವಾಸ್ ಅವರ ಹತ್ಯೆಗೆ ಶ್ರೀನಿವಾಸಪುರ ರಕ್ತಸಿಕ್ತ ರಾಜಕೀಯವೇ ಕಾರಣ ಎನ್ನಲಾಗಿದೆ.

ಹಳೆ ದ್ವೇಷದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಮುಖಂಡ ಶ್ರೀನಿವಾಸ ಅವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಇಬ್ಬರ ನಡುವೆ ಇದ್ದ ಹಳೆ ದ್ವೇಷ ನಿನ್ನೆ ಕೊಲೆಯಲ್ಲಿ ಅಂತ್ಯವಾಗಿದೆ. ಶ್ರೀನಿವಾಸ್ ಅವರ ಕೊಲೆಗೆ ಸುಪಾರಿ ಕೊಟ್ಟಿದ್ದು A1 ಆರೋಪಿ ವೇಣುಗೋಪಾಲ್ ಅಲಿಯಾಸ್ ವೇಣು ಎನ್ನಲಾಗಿದೆ. ಪೊಲೀಸರು ವೇಣು ಅವರನ್ನು ಬಂಧಿಸಿದ್ದು, ಕೊಲೆಗೆ ಕಾರಣ ಏನು ಅನ್ನೋದನ್ನು ಪತ್ತೆ ಹಚ್ಚಿದ್ದಾರೆ.

ಕಳೆದ 5 ವರ್ಷಗಳ ಹಿಂದೆ A1 ಆರೋಪಿ ವೇಣುಗೋಪಾಲ್ ಅಲಿಯಾಸ್‌ ವೇಣು ಮನೆ ಮೇಲೆ ದಾಳಿ ನಡೆದಿತ್ತು. 2018ರಲ್ಲಿ ಮೂರು ಮನೆಗಳಿಗೆ ಬೆಂಕಿ ಹಾಕಿಸಿದ್ದು, ಹಳೆ ದ್ವೇಷದ ಹಿನ್ನೆಲೆಯಲ್ಲಿ ವೇಣು ಸುಪಾರಿ ಕೊಟ್ಟು ಕೊಲೆ ಮಾಡಿಸಿದ್ದಾರೆ. ವೇಣುಗೋಪಾಲ್ ಸ್ನೇಹಿತರಾದ ಮುನೀಂದ್ರ, ಸಂತೋಷ ಸೇರಿ ಮೂರು ಜನ ಸ್ನೇಹಿತರು ಬರ್ಬರವಾಗಿ ಹತ್ಯೆ ಮಾಡಿದ್ದಾರೆ. ಕೋಲಾರ ಪೊಲೀಸರು ಶ್ರೀನಿವಾಸಪುರ ಪಟ್ಟಣದ ಜಗಜೀವನ್ ಪಾಳ್ಯದ ಮೂರು ಜನ ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಮೂರು ಸುಪಾರಿ ಹಂತಕರು ಪರಾರಿಯಾಗಿದ್ದು, ಆರೋಪಿಗಳಿಗಾಗಿ ಖಾಕಿ ಪಡೆ ಬಲೆ ಬೀಸಿದೆ.

ಇದನ್ನೂ ಓದಿ: ಕಾಂಗ್ರೆಸ್‌ ಮುಖಂಡ ಎಂ. ಶ್ರೀನಿವಾಸ್ ಕೊಲೆ ಪ್ರಕರಣ; ಮೂವರು ಆರೋಪಿಗಳ ಮೇಲೆ ಫೈರಿಂಗ್​

ಬಲಗೈ ಬಂಟನ ಕೊಲೆ ಮಾಡಿದ್ದು ಅಭಿಮಾನಿಯೇ!

ಶ್ರೀನಿವಾಸಪುರದಲ್ಲಿ ಕೊಲೆ ಆಗಿರುವ ಕಾಂಗ್ರೆಸ್ ಮುಖಂಡ ಎಂ. ಶ್ರೀನಿವಾಸನ್ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಬಲಗೈ ಬಂಟನಾಗಿದ್ದರು. ಆಶ್ಚರ್ಯ ಏನಂದ್ರೆ ಕೊಲೆಗೆ ಸುಪಾರಿ ಕೊಟ್ಟ ಆರೋಪಿ ವೇಣುಗೋಪಾಲ್ ಸಹ ರಮೇಶ್ ಕುಮಾರ್ ಅಭಿಮಾನಿ ಎನ್ನಲಾಗಿದೆ. ಆರೋಪಿ ವೇಣುಗೋಪಾಲ್ ಎದೆಯ ಮೇಲೆ ರಮೇಶ್ ಕುಮಾರ್ ಅವರ ಟ್ಯಾಟೋ ಇದೆ. ಹಳೆ ದ್ವೇಷದ ಹಿನ್ನೆಲೆಯಲ್ಲಿ ರಮೇಶ್ ಕುಮಾರ್ ಅಭಿಮಾನಿಯಿಂದಲೇ ಕಾಂಗ್ರೆಸ್ ಮುಖಂಡನ ಕೊಲೆ ನಡೆದಿದೆ ಎನ್ನಲಾಗಿದೆ. ಶ್ರೀನಿವಾಸ್ ಅವರ ಭೀಕರ ಕೊಲೆ ನಡೆದ ಬಳಿಕ A1 ಆರೋಪಿ ವೇಣು ಎದೆಯ ಮೇಲೆ ರಮೇಶ್ ಕುಮಾರ್ ಟ್ಯಾಟೋ ಹಾಕಿಸಿಕೊಂಡಿರೋ ಪೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೋಲಾರದಲ್ಲಿ ಕಾಂಗ್ರೆಸ್ ಮುಖಂಡನ ಕೊಲೆಗೆ ಕಾರಣವೇನು? A1 ಆರೋಪಿ ಎದೆ ಮೇಲೆ ರಮೇಶ್ ಕುಮಾರ್ ಟ್ಯಾಟೋ

https://newsfirstlive.com/wp-content/uploads/2023/10/Kolar-Murder-Case.jpg

Load More