newsfirstkannada.com

ಮಾಜಿ ಸ್ಪೀಕರ್‌ ರಮೇಶ್ ಕುಮಾರ್ ಆಪ್ತನ ಬರ್ಬರ ಹತ್ಯೆ; ಶ್ರೀನಿವಾಸಪುರ ರಾಜಕೀಯ ವೈಷಮ್ಯಕ್ಕೆ ಹರಿದ ನೆತ್ತರು

Share :

23-10-2023

    ಶ್ರೀನಿವಾಸಪುರದಲ್ಲಿ JDS, ಕಾಂಗ್ರೆಸ್ ನಡುವಿನ ರಕ್ತಸಿಕ್ತ ರಾಜಕೀಯ

    ಬಾರ್ ಕಟ್ಟಡ ಕಾಮಗಾರಿಗೆ ಹೋಗಿದ್ದ ವೇಳೆ ದುಷ್ಕರ್ಮಿಗಳ ದಾಳಿ

    ಜಾಲಪ್ಪ ಆಸ್ಪತ್ರೆಗೆ ಭೇಟಿ ಕೊಟ್ಟು ಕಣ್ಣೀರು ಹಾಕಿದ ರಮೇಶ್ ಕುಮಾರ್

ಕೋಲಾರ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತ, ಮಾಜಿ ಜಿಲ್ಲಾ ಪಂಚಾಯ್ತಿ ಅಧ್ಯಕ್ಷ, ಕಾಂಗ್ರೆಸ್‌ ಮುಖಂಡ ಎಂ.ಶ್ರೀನಿವಾಸ್ ಅವರು ಬರ್ಬರವಾಗಿ ಹತ್ಯೆಯಾಗಿದ್ದಾರೆ. ಶ್ರೀನಿವಾಸಪುರ ಪಟ್ಟಣದ ಹೊರವಲಯದ ಹೊಗಳಗೆರೆ ಬಳಿ ಆರು ಜನ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದರು. ಹಲ್ಲೆಗೊಳಗಾದ ಶ್ರೀನಿವಾಸ್ ಅವರನ್ನು ಕೂಡಲೇ ಕೋಲಾರದ ಜಾಲಪ್ಪ ಆಸ್ಪತ್ರೆಗೆ ರವಾನೆ ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.

ಮೃತ ಶ್ರೀನಿವಾಸ್ ಅವರು ಕೋಲಾರ ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಹಾಗೂ ಶ್ರೀನಿವಾಸಪುರ ಕಾಂಗ್ರೆಸ್ ಮುಖಂಡರು. ಹೊಗಳಗೆರೆ ಬಳಿ ಬಾರ್ ಕಟ್ಟಡ ಕಾಮಗಾರಿಗೆ ಹೋಗಿದ್ದ ವೇಳೆ 6 ಜನ ದುಷ್ಕರ್ಮಿಗಳ ತಂಡ ಇವರ ಮೇಲೆ ದಾಳಿ ಮಾಡಿ ಮಾರಕಾಸ್ತ್ರಗಳಿಂದ ಬರ್ಬರವಾಗಿ ಹತ್ಯೆ ಮಾಡಿದೆ. ಗಂಭೀರವಾಗಿ ಗಾಯಗೊಂಡಿರುವ ಶ್ರೀನಿವಾಸ್ ಅವರನ್ನು ಕೂಡಲೇ ಜಾಲಪ್ಪ ಆಸ್ಪತ್ರೆಗೆ ಸಾಗಿಸಲಾಯಿತು. ಜಾಲಪ್ಪ ಆಸ್ಪತ್ರೆಯ ಐಸಿಯುಗೆ ದಾಖಲಾಗಿದ್ದ ಶ್ರೀನಿವಾಸ್ ಅವರು ಕೊನೆಗೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ. ಜಾಲಪ್ಪ ಆಸ್ಪತ್ರೆಗೆ ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು ಭೇಟಿ ನೀಡಿದ್ದು, ತಮ್ಮ ಪರಮಾಪ್ತ ಕೆ.ಎಂ ಶ್ರೀನಿವಾಸ್ ನಿಧನಕ್ಕೆ ಕಣ್ಣೀರು ಹಾಕಿದ್ದಾರೆ.

ಮಾಜಿ ಸ್ಪೀಕರ್ ರಮೇಶ್ ಕುಮಾರ್ ಆಪ್ತರಲ್ಲಿ ಶ್ರೀನಿವಾಸ್ ಗುರುತಿಸಿಕೊಂಡಿದ್ದರು. ಶ್ರೀನಿವಾಸಪುರದ ರಾಜಕೀಯದಲ್ಲಿ ಚಿರಪರಿಚಿತರಾಗಿದ್ದ ಶ್ರೀನಿವಾಸ್ ಅವರು ರಾಜಕೀಯ ಜಿದ್ದಾಜಿದ್ದಿಗೆ ಹೆಸರುವಾಸಿಯಾಗಿದ್ದರು. ಶ್ರೀನಿವಾಸಪುರ ವಿಧಾನಸಭಾ ಕ್ಷೇತ್ರ ಜೆಡಿಎಸ್, ಕಾಂಗ್ರೆಸ್ ನಡುವಿನ ರಕ್ತಸಿಕ್ತ ರಾಜಕೀಯವನ್ನು ಕಂಡಿದೆ. ಇದೀಗ ದ್ವೇಷದ ರಾಜಕಾರಣಕ್ಕೆ ಶ್ರೀನಿವಾಸ್ ಮೇಲೆ ಹಲ್ಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಮಾಜಿ ಸ್ಪೀಕರ್‌ ರಮೇಶ್ ಕುಮಾರ್ ಆಪ್ತನ ಬರ್ಬರ ಹತ್ಯೆ; ಶ್ರೀನಿವಾಸಪುರ ರಾಜಕೀಯ ವೈಷಮ್ಯಕ್ಕೆ ಹರಿದ ನೆತ್ತರು

https://newsfirstlive.com/wp-content/uploads/2023/10/Ramesh-Kumar-Malur.jpg

Load More