newsfirstkannada.com

×

‘ಅಣ್ಣಾ.. ಬಾಗಿಲ ಚಿಲಕ ತೆಗೆಯಣ್ಣ’- 60 ವರ್ಷದ ಮಹಿಳೆಯನ್ನೂ ಬಿಟ್ಟಿಲ್ಲ ಪ್ರಜ್ವಲ್ ರೇವಣ್ಣ; ಇಂಚಿಂಚೂ ಮಾಹಿತಿ ಬಹಿರಂಗ!

Share :

Published September 10, 2024 at 6:01pm

Update September 10, 2024 at 6:26pm

    ನನ್ನ ಬೆತ್ತಲುಗೊಳಿಸಿ ಬಲವಂತವಾಗಿ ಬೆಡ್ ಮೇಲೆ ಮಲಗಿಸಿದ್ದರು

    ಮನೆಯಲ್ಲಿ ತಂದೆ ತಾಯಿ ಇಲ್ಲದ ಸಮಯದಲ್ಲಿ ಲೈಂಗಿಕ ದೌರ್ಜನ್ಯ

    ಮೈ ಮೇಲಿನ ಬಟ್ಟೆ ಬಿಚ್ಚಿಸಿದ್ದ ಪ್ರಜ್ವಲ್ ರೇವಣ್ಣ ವಿಡಿಯೋ ರೆಕಾರ್ಡ್‌

ಬೆಂಗಳೂರು: ಮಾಜಿ ಸಂಸದ ಪ್ರಜ್ವಲ್ ರೇವಣ್ಣ ವಿರುದ್ಧ ಅತ್ಯಾಚಾರದ ಆರೋಪ ಕೇಳಿ ಬಂದಿದ್ದು 2ನೇ ಚಾರ್ಜ್‌ಶೀಟ್‌ನಲ್ಲೂ ಅದು ಸಾಬೀತಾಗಿದೆ. SIT ಪೊಲೀಸರು 1632 ಪುಟಗಳ ಚಾರ್ಜ್​ಶೀಟ್​ ಸಲ್ಲಿಸಿದ್ದು, ಅದರಲ್ಲಿ 60 ವರ್ಷದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ್ದು ನಿಜ. ಆ ಪಾಪಕೃತ್ಯವನ್ನು ಆರೋಪಿ ಪ್ರಜ್ವಲ್ ರೇವಣ್ಣ ತನ್ನ ಮೊಬೈಲ್​​ನಲ್ಲಿ ಸೆರೆ ಹಿಡಿದಿದ್ದಾನೆ ಎನ್ನಲಾಗಿದೆ.

ಇದನ್ನೂ ಓದಿ: ಐಷಾರಾಮಿ ಮನೆ, ಕಾಂಪ್ಲೆಕ್ಸ್, ಫಾರ್ಮ್​ ಹೌಸ್​​, ದುಬಾರಿ ಕಾರು; ಅಬ್ಬಬ್ಬಾ! Darshan ಬಳಿಯಿರೋ ಆಸ್ತಿ ಎಷ್ಟು ಗೊತ್ತಾ? 

42ನೇ ಎಸಿಎಂಎಂ ಜನಪ್ರತಿನಿಧಿ ಕೋರ್ಟ್​ಗೆ ಇಂದು ಎಸ್​ಐಟಿ ಪೊಲೀಸರು ಚಾರ್ಜ್ ಶೀಟ್ ಸಲ್ಲಿಕೆ ಮಾಡಿದ್ದಾರೆ. ಅದರಲ್ಲಿ 113 ಸಾಕ್ಷಿಗಳು, ಡಿಜಿಟಲ್ ಎವಿಡೆನ್ಸ್, ಸಾಂದರ್ಭಿಕ ಸಾಕ್ಷಿಗಳು, ಎಫ್ಎಸ್​ಎಲ್ ವರದಿಗಳನ್ನು ಉಲ್ಲೇಖ ಮಾಡಲಾಗಿದೆ. ಅದರಲ್ಲಿ ಕೃತ್ಯದ ವಿಡಿಯೋ & ಸಾಂದರ್ಭೀಕ ಸಾಕ್ಷಿಗಳು ಮ್ಯಾಚ್ ಆಗಿವೆ. ಎಫ್ಎಸ್ಎಲ್ ವರದಿಯಲ್ಲೂ ಸಹ ವಿಡಿಯೋ ಮ್ಯಾಚ್ ಆಗಿದ್ದು, 60 ವರ್ಷದ ಸಂತ್ರಸ್ಥೆ ಹೇಳಿಕೆಗೂ ಸಿಕ್ಕ ಸಾಕ್ಷಿಗಳ ಮೂಲಕ ಪ್ರಜ್ವಲ್ ರೇವಣ್ಣ ಅತ್ಯಾಚಾರ ಎಸಗಿದ್ದ ಭಯಾನಕ ಸತ್ಯ ಬಯಲಾಗಿದೆ.

‘ಅಣ್ಣಾ.. ಬಾಗಿಲ ಚಿಲಕ ತೆಗೆಯಣ್ಣ’!
ಪ್ರಜ್ವಲ್ ರೇವಣ್ಣ ವಿರುದ್ಧ ಮನೆ ಕೆಲಸದಾಕೆ ಗಂಭೀರ ಹೇಳಿಕೆ ನೀಡಿದ್ದರು. ದಮ್ಮಯ್ಯ ಅಂದ್ರೂ ಬಿಡದೇ ಆತ್ಯಾಚಾರ ಎಸಗಿದ್ದಾರೆ. ಅಣ್ಣಾ.. ಬಾಗಿಲ ಚಿಲಕ ತೆಗೆಯಣ್ಣ. ನನಗೆ ಭಯ ಆಗ್ತಾ ಇದೆ. ಹೊರಗೆ ಹೋಗ್ತಿನಿ. ನಿನ್ನ ದಮ್ಮಯ್ಯ ಬಾಗಿಲು ತೆಗಿ ಎಂದು ಮನವಿ ಮಾಡಿದ್ದೆ. ಆದರೂ ಕೇಳದೆ ಮೈ ಮೇಲಿನ ಬಟ್ಟೆಯನ್ನು ಪ್ರಜ್ವಲ್ ರೇವಣ್ಣ ಬಿಚ್ಚಿಸಿದ್ದರಂತೆ.

ನನ್ನ ಬೆತ್ತಲುಗೊಳಿಸಿ ಬಲವಂತವಾಗಿ ಬೆಡ್ ಮೇಲೆ ಮಲಗಿಸಿದ್ದರು. ನನ್ನ ಮೇಲೆ ಕಂಟ್ರೋಲ್ ತೆಗೆದುಕೊಂಡು ಅತ್ಯಾಚಾರ ಮಾಡಿದರು. ಬೇಡ, ಬೇಡ ಆಂದ್ರೂ ಏನು ಆಗಲ್ಲ ಎಂದ ಪ್ರಜ್ವಲ್ ರೇವಣ್ಣ ಅವರು ಒಂದು ಕೈಯಲ್ಲಿ ಮೊಬೈಲ್ ಹಿಡಿದುಕೊಂಡು ಅತ್ಯಾಚಾರ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಸಂತ್ರಸ್ತೆಯನ್ನು ಮನೆ ಸ್ವಚ್ಚಗೊಳಿಸುವ ಕೆಲಸಕ್ಕಾಗಿ ಆಗಾಗ ಕರೆಸಿಕೊಳ್ತಿದ್ದರು. ಅವರ ತಂದೆ ತಾಯಿ ಇಲ್ಲದ ಸಮಯದಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮನೆ ಕೆಲಸದಾಕೆ ಗಂಭೀರ ಆರೋಪಗಳನ್ನು ಮಾಡಿದ್ದರು.

ಇದನ್ನೂ ಓದಿ: ‘ಬರೋಬ್ಬರಿ 1.75 ಕೋಟಿ ಸಾಲ ಮಾಡಿ ಪವಿತ್ರಾ ಗೌಡಗೆ ಮನೆ ಕೊಡಿಸಿದ್ದೆ’- ನಟ ದರ್ಶನ್​​

ಪ್ರಜ್ವಲ್ ಬ್ಲ್ಯಾಕ್ ಮೇಲ್​!
ಇನ್ನು ಚಾರ್ಜ್‌ಶೀಟ್‌ನಲ್ಲಿ ಆರೋಪಿ ಪ್ರಜ್ವಲ್ ರೇವಣ್ಣ ಬ್ಲ್ಯಾಕ್ ಮೇಲ್ ಮಾಡಲು ಅತ್ಯಾಚಾರದ ವಿಡಿಯೋ ರೆಕಾರ್ಡ್​ ಮಾಡಿದ್ದರು. ಉದ್ದೇಶಪೂರ್ವಕವಾಗಿಯೇ ವಿಡಿಯೋ ರೆಕಾರ್ಡ್ ಮಾಡಿದ್ದು, ಸಂತ್ರಸ್ತೆಯೂ ಅತ್ಯಾಚಾರವನ್ನು ಯಾರಿಗೂ ಹೇಳದಂತೆ ಮಾಡಲು ಪ್ಲಾನ್ ಮಾಡಿದ್ದಾರೆ. ಮತ್ತೆ ಇದೇ ರೀತಿ ಕೃತ್ಯಕ್ಕೆ ಸಹಕರಿಸಲು ಈ ವಿಡಿಯೋ ರೆಕಾರ್ಡ್ ತೋರಿಸಿ ಒತ್ತಾಯಿಸಿದ್ದಾರೆ ಎಂದು ಚಾರ್ಜ್​ಶೀಟ್​ನಲ್ಲಿ ಎಸ್‌ಐಟಿ ಉಲ್ಲೇಖಿಸಿದೆ.

ಇದು ಚಾರ್ಜ್‌ಶೀಟ್‌ನ ಆರಂಭವಷ್ಟೇ!
ಆರೋಪಿ ಪ್ರಜ್ವಲ್ ರೇವಣ್ಣ ವಿರುದ್ಧ ಈಗ ಸಲ್ಲಿಕೆಯಾಗಿರೋದು ಪ್ರೈಮರಿ ಚಾರ್ಜ್ ಶೀಟ್ ಮಾತ್ರ. ಕೇಸ್ 90 ದಿನ ಮುಕ್ತಾಯ ಆದ ಹಿನ್ನಲೆ ಪ್ರೈಮರಿ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ. ಎಸ್ಐಟಿ ವಿಶೇಷ ಟೀಂ ಇನ್ನೂ ತನಿಖೆಯನ್ನ ಮುಂದುವರಿಸಿದೆ.

ಸದ್ಯದ ಮಾಹಿತಿಯಲ್ಲಿ ಮೊಬೈಲ್‌ನಲ್ಲಿ ರೆಕಾರ್ಡ್ ಆದ ವಿಡಿಯೋ ಮತ್ತು ವೈದ್ಯಕೀಯ ವಿಡಿಯೋ ಮ್ಯಾಚಿಂಗ್ ಆಗಿದೆ. ಇದರ ವರದಿ ಇನ್ನೂ ಎಫ್ಎಸ್ಎಲ್‌ನಿಂದ ಬರೋದು ಬಾಕಿ ಇದೆ. ಆ ವರದಿ ಬಂದ ಬಳಿಕ ಅಡಿಷನಲ್ ಚಾರ್ಜ್ ಶೀಟ್ ಸಲ್ಲಿಕೆಯಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಅಣ್ಣಾ.. ಬಾಗಿಲ ಚಿಲಕ ತೆಗೆಯಣ್ಣ’- 60 ವರ್ಷದ ಮಹಿಳೆಯನ್ನೂ ಬಿಟ್ಟಿಲ್ಲ ಪ್ರಜ್ವಲ್ ರೇವಣ್ಣ; ಇಂಚಿಂಚೂ ಮಾಹಿತಿ ಬಹಿರಂಗ!

https://newsfirstlive.com/wp-content/uploads/2024/05/prajwal-revanna-1-1.jpg

Load More