ಪಠ್ಯ ಪರಿಷ್ಕರಣೆಗೆ ಮುಂದಾದ ಸಿಎಂ ಸಿದ್ದರಾಮಯ್ಯ ಸರ್ಕಾರ
ಸರ್ಕಾರಕ್ಕೆ ಪಠ್ಯ ಪರಿಷ್ಕರಣೆ ಬಗ್ಗೆ ತಜ್ಙರು ಕೊಟ್ಟ ಸಲಹೆಯೇನು?
ಕಾಂಗ್ರೆಸ್ ಸರ್ಕಾರದ ನಿರ್ಧಾರದಿಂದ ಹಲವರಲ್ಲಿ ಇರಿಸು ಮುರಿಸು
ಬೆಂಗಳೂರು: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದಲೂ ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರದಲ್ಲಿ ಸಾಕಷ್ಟು ಗೊಂದಲಗಳಿತ್ತು. ವಿವಾದದ ಗೂಡಾಗಿದ್ದ ಪಠ್ಯ ಪುಸ್ತಕ ಪರಿಷ್ಕರಣೆ ಕೊನೆಗೂ ಈಗ ಕ್ಲೈಮ್ಯಾಕ್ಸ್ ಹಂತ ತಲುಪಿದೆ. 3 ಪಠ್ಯವನ್ನು ಈ ಪ್ರಸಕ್ತ ಸಾಲಿನಲ್ಲಿ ಸರ್ಕಾರ ಕೈ ಬಿಟ್ಟಿದೆ. ಹಾಗಾದ್ರೆ ಇದು ಮಕ್ಕಳ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ? ಈ ಬಗ್ಗೆ ಶಿಕ್ಷಣ ತಜ್ಞರು ಏನಂತಾರೆ ಗೊತ್ತಾ ಇಲ್ಲಿದೆ ನೋಡಿ ಡೀಟೇಲ್ಸ್!
6ನೇ ತರಗತಿ ಬಳಿಕ ಮಕ್ಕಳಿಗೆ ಹೇಳಿ ಕೊಡುವ ಪಠ್ಯ ಯಾವತ್ತೂ ಕೂಡ ಬುದ್ಧಿ ಬೆಳವಣಿಗೆ ಆಗುವ ವಿಚಾರಗಳು ಆಗಬೇಕು. ಪಕ್ಷಗಳ ಅನುಕೂಲಕ್ಕೆ ತಕ್ಕ ಪಠ್ಯ ಇರಬಾರದು ಮಕ್ಕಳ ಮನಸ್ಥಿತಿ ಮೇಲೆ ಪ್ರತಿಕೂಲ ಪರಿಣಾಮ ಬೀರುವ ವಿಚಾರ ಇರಬಾರದು ಎಂದು ಶಿಕ್ಷಣ ತಜ್ಞರಾದ ಡಾಕ್ಟರ್ ಗೀತಾ ರಾಮಾನುಜನ್ ಹೇಳಿದ್ದಾರೆ.
ಒಟ್ಟಿನಲ್ಲಿ ಈ ವರ್ಷ 3 ಪಠ್ಯ ಕೈ ಬಿಡ್ತೇವೆ ಅನ್ನೋ ಕಾಂಗ್ರೆಸ್ ಸರ್ಕಾರದ ನಿರ್ಧಾರ ಹಲವರಲ್ಲಿ ಇರಿಸು ಮುರಿಸು ಉಂಟು ಮಾಡಿದೆ. ಪಕ್ಷಗಳ ನಡುವಣ ಇರುವ ವೈಷಮ್ಯವನ್ನು ಮಕ್ಕಳ ಮೇಲೆ ಹೇರಿಕೆ ಮಾಡುವ ಪ್ರಯತ್ನ ಸರ್ಕಾರದಿಂದ ಆಗ್ತಿದೆ ಅನ್ನೋ ಅಭಿಪ್ರಾಯವೂ ವ್ಯಕ್ತವಾಗುತ್ತಲೇ ಇದೆ. ಈ ಎಲ್ಲಾ ಬೆಳವಣಿಗೆಗಳ ಮಧ್ಯೆ ಮಗುವಿನ ಮಾನಸಿಕ ಸ್ಥಿತಿ ಅರ್ಥ ಮಾಡಿಕೊಂಡು ಪಠ್ಯ ಪುಸ್ತಕ ಪರಿಷ್ಕರಣೆ ಮಾಡಿ ಅನ್ನೊದು ಶಿಕ್ಷಣ ತಜ್ಞರ ಸಲಹೆಯಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ