newsfirstkannada.com

ಅನ್ನ ತಿನ್ನಿಸಿ ಹತ್ಯೆ.. ವಿಡಿಯೋ ಮಾಡಿ ವಿಕೃತಿ; ಬೆಚ್ಚಿ ಬೀಳಿಸಿದ ರೇಣುಕಾಸ್ವಾಮಿ ಕೊಲೆಯ ಸ್ಫೋಟಕ ಸತ್ಯಗಳು

Share :

Published July 5, 2024 at 8:39pm

Update July 5, 2024 at 8:40pm

    ಹತ್ಯೆಗೂ ಮುನ್ನ ರೇಣುಕಾಸ್ವಾಮಿಗೆ ಊಟ ನೀಡಿದ್ದ ದರ್ಶನ್ ಗ್ಯಾಂಗ್

    ಶೆಡ್‌ಗೆ ದರ್ಶನ್ ಬರೋ ತನಕ ರೇಣುಕಾಸ್ವಾಮಿ ಚೆನ್ನಾಗಿಯೇ ಇದ್ದ

    ರೇಣುಕಾ ಮೇಲೆ ಹಲ್ಲೆ ನಡೆಸುತ್ತಿರುವ ದೃಶ್ಯ ಕಳಿಸಿರೋದು ಬೆಳಕಿಗೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆಯಲ್ಲಿ ದಿನಕಳೆದಂತೆ ಮಹತ್ವದ ರಹಸ್ಯಗಳು ಬಯಲಾಗುತ್ತಿವೆ. ರೇಣುಕಾಸ್ವಾಮಿಯನ್ನು ಪಟ್ಟಣಗೆರೆ ಶೆಡ್​​ಗೆ ಕರೆದೊಯ್ದು ಹತ್ಯೆ ಮಾಡುವ ಮುನ್ನ ಹೊಟ್ಟೆ ತುಂಬಾ ಊಟ ಮಾಡಿಸಿದ್ದ ವಿಚಾರ ಪೋಸ್ಟ್‌ ಮಾರ್ಟಂನಲ್ಲಿ ಬಯಲಾಗಿದೆ. ಊಟ ಮಾಡಿಸಿದ ಬಳಿಕವೇ ರೇಣುಕಾಸ್ವಾಮಿಯ ಹತ್ಯೆ ನಡೆದಿರೋದು ದೃಢಪಟ್ಟಿದೆ.

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆಗೂ ಮುನ್ನ ಹೊಟ್ಟೆ ತುಂಬಾ ಊಟ ತಿನ್ನಿಸಿದ್ರು.. ಆಮೇಲೆ ನಡೆದಿದ್ದೇ ಡೆವಿಲ್‌ ಗ್ಯಾಂಗ್‌ ಚಿತ್ರಹಿಂಸೆ! 

ಹತ್ಯೆಗೂ ಮುನ್ನ ರೇಣುಕಾಸ್ವಾಮಿಗೆ ಹೊಟ್ಟೆ ತುಂಬಾ ಊಟ
ಹೊಟ್ಟೆ ತುಂಬಾ ಊಟ ಹಾಕಿ ಕುರಿ ಬಲಿ ಕೊಟ್ಟಂತೆ ಚಿತ್ರಹಿಂಸೆ

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಮುಂದುವರಿದಿದ್ದು ಮತ್ತೊಂದು ಸ್ಫೋಟಕ ವಿಚಾರ ಬಯಲಾಗಿದೆ. ಚಿತ್ರದುರ್ಗದಿಂದ ಕಿಡ್ನಾಪ್ ಮಾಡಿಕೊಂಡು ಬಂದಿದ್ದ ಗ್ಯಾಂಗ್ ಮಧ್ಯಾಹ್ನ 3 ಗಂಟೆ ವೇಳೆಗೆ ಪಟ್ಟಣಗೆರೆ ಶೆಡ್​ಗೆ ಕರೆ ತಂದಿತ್ತು. ಈ ವೇಳೆ ಆರ್.ಆರ್. ನಗರದ ವಿನಯ್​ನ ಸ್ಟೋನಿ ಬ್ರೂಕ್ ಪಬ್​​​​ನಲ್ಲಿ ಪಾರ್ಟಿ ಮಾಡ್ತಿದ್ದ ದರ್ಶನ್​ಗೆ ವಿಷಯ ತಿಳಿದು ಕೂಡಲೇ ಪಟ್ಟಣಗೆರೆ ಶೆಡ್​​ಗೆ ಬಂದಿದ್ದಾರೆ. ಆಮೇಲೆ ನಡೆದಿದ್ದು ರಕ್ತಚರಿತ್ರೆ.

ಅನ್ನ ತಿನ್ನಿಸಿ ಹತ್ಯೆ!
ಹತ್ಯೆಗೂ ಮುನ್ನ ರೇಣುಕಾಸ್ವಾಮಿಗೆ ಊಟ ನೀಡಿದ್ದ ಗ್ಯಾಂಗ್
ಸಂಜೆ 4.30 ರಿಂದ 5 ಗಂಟೆ ವೇಳೆಗೆ ಊಟ ಮಾಡಿದ್ದ ರೇಣುಕಾ
ಹೊಟ್ಟೆ ತುಂಬಾ ಊಟ ಕೊಟ್ಟು ಬಳಿಕ ರೇಣುಕಾಸ್ವಾಮಿ ಹತ್ಯೆ

ದರ್ಶನ್ ಟೀಂ ಬಂದ ಮೇಲೆ ರೇಣುಕಾ ಮೇಲೆ ಮೃಗೀಯ ದಾಳಿ

ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಕೇಸ್‌ಗೆ ಹೊಸ ಟ್ವಿಸ್ಟ್.. ಕೊನೆಗೂ ವಿಚಾರಣೆಗೆ ಬಂದ ದರ್ಶನ್ ಆಪ್ತ ಮೋಹನ್ ರಾಜ್‌! 

ತನಿಖೆ ವೇಳೆ ರೇಣುಕಾಸ್ವಾಮಿಯ ಹತ್ಯೆಯ ದೃಶ್ಯಗಳನ್ನು ವಿಡಿಯೋ ಮಾಡಿದ್ದ ದರ್ಶನ್ ಗ್ಯಾಂಗ್, ತಮ್ಮ ಘನಂದಾರಿ ಕೆಲಸದ ವಿಡಿಯೋಗಳನ್ನು ಶೆಡ್ ಇಂಚಾರ್ಜ್​ ಮೋಹನ್ ಕುಮಾರ್​ಗೆ ಫಾರ್ವರ್ಡ್​ ಕೂಡ ಮಾಡಿತ್ತು ಎಂಬ ವಿಚಾರವೂ ಬಯಲಾಗಿದೆ.

ವಿಡಿಯೋ ಮಾಡಿದ್ದ ಗ್ಯಾಂಗ್‌
ರೇಣುಕಾಸ್ವಾಮಿ ಹತ್ಯೆಯನ್ನ ವಿಡಿಯೋ ಮಾಡಿದ್ದ ದರ್ಶನ್ ಗ್ಯಾಂಗ್
ಶೆಡ್‌ನ ಮ್ಯಾನೇಜರ್‌​​ ಮೋಹನ್‌ಕುಮಾರ್‌​ಗೆ ದೃಶ್ಯ ಫಾರ್ವರ್ಡ್

ಪೊಲೀಸರ ವಿಚಾರಣೆ ವೇಳೆ ಈ ಬಗ್ಗೆ ಬಾಯ್ಬಿಟ್ಟಿರುವ ಮೋಹನ್
ಮೋಹನ್ ಕುಮಾರ್‌ನನ್ನ ಸಾಕ್ಷಿಯಾಗಿ ಪರಿಗಣಿಸಿರುವ ಪೊಲೀಸರು

ಹತ್ಯೆ ಕೇಸ್​​​ನಲ್ಲಿ ದರ್ಶನ್ ಗ್ಯಾಂಗ್​​ಗೆ ಮತ್ತೆ 14 ದಿನ ನ್ಯಾಯಾಂಗ ಬಂಧನ ವಿಧಿಸಿದ್ದು ಮತ್ತಷ್ಟು ದಿನ ಪರಪ್ಪನ ಅಗ್ರಹಾರ ಜೈಲುವಾಸ ಅನುಭವಿಸಬೇಕಿದೆ. ಕುರಿ ಬಲಿ ಕೊಡುವ ಮುನ್ನ ಕುರಿಗೆ ಮೇವು ಹಾಕಿ ನೀರು ಕುಡಿಸಿದಂತೆ ರೇಣುಕಾಸ್ವಾಮಿಗೆ ಹೊಟ್ಟೆ ತುಂಬಾ ಊಟ ಹಾಕಿ ನಂತರ ಕೊಲೆ ಮಾಡಿರುವುದು ಕೃತ್ಯದ ಬಗ್ಗೆ ಬೇರೆಯದ್ದೇ ಕಥೆ ಹೇಳುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅನ್ನ ತಿನ್ನಿಸಿ ಹತ್ಯೆ.. ವಿಡಿಯೋ ಮಾಡಿ ವಿಕೃತಿ; ಬೆಚ್ಚಿ ಬೀಳಿಸಿದ ರೇಣುಕಾಸ್ವಾಮಿ ಕೊಲೆಯ ಸ್ಫೋಟಕ ಸತ್ಯಗಳು

https://newsfirstlive.com/wp-content/uploads/2024/06/Darshan-Arrest.jpg

Load More