newsfirstkannada.com

ಬೆಂಗಳೂರಲ್ಲಿ ವಿಧ್ವಂಸಕ ಕೃತ್ಯಕ್ಕೆ ಭಯಾನಕ ಸ್ಕೆಚ್‌; ಕಮಿಷನರ್‌ ಬಿಚ್ಚಿಟ್ರು ಶಂಕಿತ ಉಗ್ರರ ಸ್ಫೋಟಕ ಮಾಹಿತಿ

Share :

19-07-2023

    ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್‌ ಹಾಕಿದ್ದ ಐವರು ಶಂಕಿತ ಉಗ್ರರು

    ವಿದೇಶದಲ್ಲಿ ತಲೆಮರೆಸಿಕೊಂಡಿರೋ ಆರೋಪಿಗೆ ಹುಡುಕಾಟ

    ನಗರ ಪೊಲೀಸ್ ಆಯುಕ್ತ ಬಿ. ದಯಾನಂದ್ ಸುದ್ದಿಗೋಷ್ಟಿ

ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್‌ ಹಾಕಿದ್ದ ಐವರು ಶಂಕಿತ ಉಗ್ರರನ್ನ ಪೊಲೀಸರು ಬಂಧಿಸಿದ್ದಾರೆ. ಈ ಬಗ್ಗೆ ನಗರ ಪೊಲೀಸ್ ಆಯುಕ್ತ ದಯಾನಂದ್ ಅವರು ಸುದ್ದಿಗೋಷ್ಟಿ ನಡೆಸಿ ಸ್ಫೋಟಕ ಮಾಹಿತಿ ಹಂಚಿಕೊಂಡಿದ್ದಾರೆ. ಬೆಂಗಳೂರು ನಗರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸ್ಕೆಚ್ ಹಾಕಿದ್ದ ಸಮಾಜಘಾತುಕ ಶಕ್ತಿಗಳನ್ನು ಪತ್ತೆ ಮಾಡಲಾಗಿದೆ. ಸಿಸಿಬಿ ಪೊಲೀಸರ ಖಚಿತ ಮಾಹಿತಿ ಅಧರಿಸಿ ಈ ಶಂಕಿತ ಉಗ್ರರನ್ನ ಬಂಧಿಸಲಾಗಿದೆ. ಅವರ ವಿಧ್ವಂಸಕ ಕೃತ್ಯಗಳನ್ನ ವಿಫಲಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಹೆಬ್ಬಾಳ ಪೊಲೀಸ್ ಠಾಣಾ ವ್ಯಾಪ್ತಿ ಈ ಐವರು ಶಂಕಿತ ಉಗ್ರರು ವಾಸವಾಗಿದ್ದರು.

ಶಂಕಿತ ಉಗ್ರರ ಪ್ರಾಥಮಿಕ ವಿಚಾರಣೆಯಲ್ಲಿ ಬೆಂಗಳೂರು ನಗರದಲ್ಲಿ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದರು ಅನ್ನೋದು ಗೊತ್ತಾಗಿದೆ. ಆರೋಪಿಗಳು ಅದನ್ನ ಒಪ್ಪಿಕೊಂಡಿದ್ದಾರೆ. ಶಂಕಿತ ಉಗ್ರರಲ್ಲಿ ಜುನೈದ್ ಅಹಮದ್ ವಿದೇಶದಲ್ಲಿ ತಲೆಮರೆಸಿಕೊಂಡಿದ್ದು ಹುಡುಕಾಟ ನಡೆಸಲಾಗಿದೆ. ಜುನೈದ್ ಅಹಮದ್ & ನಾಸೀರ್ ಇಬ್ಬರು ಇವರಿಗೆ ಪ್ರಚೋದನೆ ನೀಡಿದ್ದರು. ಈ ಐದು ಮಂದಿಗೆ ಇವರು ಬ್ರೈನ್ ವಾಷ್ ಮಾಡಿದ್ದರು.

ಬೆಂಗಳೂರು ನಗರದಲ್ಲಿ ವಿಧ್ವಂಸಕ ಕೃತ್ಯ ಮಾಡೋದಕ್ಕೆ ಪ್ಲಾನ್ ಮಾಡಿದ್ದ ವ್ಯಕ್ತಿಗಳನ್ನ ಸಿಸಿಬಿ ಪೊಲೀಸರು ಪತ್ತೆ ಮಾಡಿದ್ದಾರೆ. ಬಂಧಿತ ಶಂಕಿತ ಉಗ್ರರಿಂದ ಏಳು ಪಿಸ್ತೂಲ್, ಹಲವು ಜೀವಂತ ಗುಂಡುಗಳು, ವಾಕಿಟಾಕಿ ಸೇರಿದಂತೆ ಪ್ರಮುಖ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಐವರೂ ಕೂಡ ಬೆಂಗಳೂರು ನಗರದಲ್ಲಿ ವಿಧ್ವಂಸಕ ಕೃತ್ಯ ಎಸಗಲು ಪ್ಲಾನ್ ಮಾಡಿದ್ರು ಎಂದು ನಗರ ಪೊಲೀಸ್ ಆಯುಕ್ತ ದಯಾನಂದ್ ಹೇಳಿದ್ದಾರೆ.

2008ರ ಸರಣಿ ಬಾಂಬ್ ಬ್ಲಾಸ್ಟ್ ರುವಾರಿ ನಾಸಿರ್ ಮತ್ತು 2017ರ ಕೇಸ್‌ನ ಮುಖ್ಯ ಆರೋಪಿ ಈ ಐದು ಜನರಿಗೆ ಟ್ರೈನಿಂಗ್ ಕೊಟ್ಟಿದ್ದಾರೆ. ಮುಖ್ಯ ಆರೋಪಿ ವಿದೇಶಕ್ಕೆ ಎಸ್ಕೇಪ್ ಆಗಿದ್ದಾನೆ. ಆರೋಪಿಗಳನ್ನ 15 ದಿನ ಕಸ್ಟಡಿಗೆ ಪಡೆದಿರುವ ಪೊಲೀಸರು ವಿಧ್ವಂಸಕ ಕೃತ್ಯ ಎಸಗೋಕೆ ಇವ್ರು ಏನೆಲ್ಲಾ ಪ್ಲಾನ್ ಮಾಡಿದ್ರು ಅನ್ನೋದನ್ನು ತನಿಖೆ ಮಾಡಲಾಗುತ್ತಿದೆ.

ಶಂಕಿತ ಉಗ್ರರ ಈ ಕೃತ್ಯಕ್ಕೆ ಹಣ ಬೇರೆ, ಬೇರೆ ದೇಶಗಳಿಂದ ಬಂದಿದೆ. ವಿದೇಶದಿಂದ ಇವರಿಗೆ ಹಣ ಫಡಿಂಗ್ ಬಂದಿದ್ದು, ಅದರ ಬಗ್ಗೆಯೂ ತನಿಖೆ ನಡೆಸಲ್ತಾಗಿದೆ. ಟಿ. ನಾಸಿರ್ ಲಷ್ಕರ್-ಇ-ತೊಯ್ಬಾ ಸಂಘಟನೆಯ ಸಕ್ರಿಯ ಸದಸ್ಯನಾಗಿದ್ದ. ಇವರು ಎಲ್ಇಟಿ ಸಂಘಟನೆಯ ಲಿಂಕ್ ಹೊಂದಿದ್ದಾರೆ. ಟಿ‌. ನಾಸೀರ್‌ನ ವಶಕ್ಕೆ ಪಡೆದು ವಿಚಾರಣೆ ಮಾಡಲಾಗುವುದು ಎಂದು ಕಮಿಷನರ್ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರಲ್ಲಿ ವಿಧ್ವಂಸಕ ಕೃತ್ಯಕ್ಕೆ ಭಯಾನಕ ಸ್ಕೆಚ್‌; ಕಮಿಷನರ್‌ ಬಿಚ್ಚಿಟ್ರು ಶಂಕಿತ ಉಗ್ರರ ಸ್ಫೋಟಕ ಮಾಹಿತಿ

https://newsfirstlive.com/wp-content/uploads/2023/07/BNG_IPS_POLICE_DAYANANDA_2.jpg

Load More