3991 ಪುಟಗಳ ಚಾರ್ಜ್‌ಶೀಟ್‌ಗೆ ಆರೋಪಿ ದರ್ಶನ್ ಶಾಕ್!
ಸಾವಿರ ಅಲ್ಲ ಲಕ್ಷಾಂತರ ಪುಟಗಳಲ್ಲಿ ಚಾರ್ಜ್‌ಶೀಟ್ ಸಲ್ಲಿಕೆ
ಪೊಲೀಸರ ಚಾರ್ಜ್‌ಶೀಟ್ ಸಲ್ಲಿಕೆಯಾದ ನಂತರ ಮುಂದೇನು?
ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ತನಿಖೆ ಪೂರ್ಣಗೊಂಡಿದೆ. ದರ್ಶನ್ ಸೇರಿ 17 ಆರೋಪಿಗಳ ವಿರುದ್ಧ ಪೊಲೀಸರು 3991 ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿದ್ದಾರೆ. ಈ 3991 ಪುಟಗಳು ಆರೋಪಿ ದರ್ಶನ್‌ಗೆ ಶಾಕಿಂಗ್ ಸುದ್ದಿಯಾಗಿದ್ರೆ, ಇದು ಅತ್ಯಂತ ದೊಡ್ಡ ಕೇಸ್ ಅಲ್ಲ. ದೇಶದ ಇತಿಹಾಸದಲ್ಲಿ ಸಾವಿರಾರು ಅಲ್ಲ ಲಕ್ಷಾಂತರ ಪುಟಗಳ ಚಾರ್ಜ್‌ಶೀಟ್ ಸಲ್ಲಿಸಿರೋದನ್ನ ನಾವು ನೋಡಬಹುದು. ಲಕ್ಷ, ಲಕ್ಷ ಪುಟಗಳ ಚಾರ್ಜ್‌ಶೀಟ್ ಕೇಸ್‌ಗಳ ಪಟ್ಟಿ ನೋಡುವುದಕ್ಕೆ ಮೊದಲು ಚಾರ್ಜ್‌ಶೀಟ್ ಎಂದರೇನು ಅನ್ನೋ ಸಂಕ್ಷಿಪ್ತ ವಿವರಣೆ ಇಲ್ಲಿದೆ.
ಇದನ್ನೂ ಓದಿ: ಕಥೆ, ಚಿತ್ರಕಥೆ, ನಿರ್ದೇಶನ, ನಿರ್ಮಾಣ ಒನ್ ಅಂಡ್ ಓನ್ಲಿ ದರ್ಶನ್? ಕ್ಲೈಮ್ಯಾಕ್ಸ್‌ನಲ್ಲಿ ರೋಚಕ ಟ್ವಿಸ್ಟ್; ಏನದು?
ಚಾರ್ಜ್‌ಶೀಟ್ ಎಂದರೇನು?
ಚಾರ್ಜ್ ಶೀಟ್ ಅಂದ್ರೆ ಆರೋಪಿಗಳ ವಿರುದ್ಧ ದೋಷಾರೋಪಣೆ. ಅವರ ಕೃತ್ಯವನ್ನು ದೋಷದ ಸಾಕ್ಷಿ ಸಮೇತ ವರದಿಯನ್ನು CRPC 173 ಅಡಿ ಸಲ್ಲಿಕೆ ಮಾಡಲಾಗುತ್ತೆ. ಒಂದು ಪ್ರಕರಣವನ್ನು ತನಿಖೆ ಮಾಡಿದ ನಂತರ ಮುಂದಿನ ಮೊಕದ್ದಮೆ ವಿಚಾರಣೆಗಾಗಿ ಕ್ರಿಮಿನಲ್ ನ್ಯಾಯಾಲಯದಲ್ಲಿ ಅಪರಾಧದ ಸ್ವರೂಪ, ಆರೋಪವನ್ನು ಸಾಬೀತುಪಡಿಸಲು ತನಿಖಾ ಸಂಸ್ಥೆ ಅಥವಾ ಕಾನೂನು ಜಾರಿ ಸಂಸ್ಥೆ ಸಿದ್ಧಪಡಿಸಿದ ಅಂತಿಮ ವರದಿಯಾಗಿದೆ. ವರದಿಯನ್ನು ಸಾಮಾನ್ಯವಾಗಿ ಪೊಲೀಸ್ ಅಧಿಕಾರಿ ಕೋರ್ಟ್‌ಗೆ ಸಲ್ಲಿಸುತ್ತಾರೆ. ಇದು ಎಫ್‌ಐಆರ್ ದಾಖಲಿಸುವ ತನಿಖಾ ಪ್ರಕ್ರಿಯೆಯ ಪ್ರಾರಂಭದಿಂದ ತನಿಖೆಯನ್ನು ಪೂರ್ಣಗೊಳಿಸುವವರೆಗೆ ಮತ್ತು ಅಂತಿಮ ವರದಿಯನ್ನು ಸಿದ್ಧಪಡಿಸುವವರೆಗಿನ ಎಲ್ಲಾ ದಾಖಲೆಗಳನ್ನು ಒಳಗೊಂಡಿದೆ.
ಇದನ್ನೂ ಓದಿ: ಪ್ಯಾಂಟ್ ಬಿಚ್ಚಿಸಿ ಖಾಸಗಿ ಅಂಗ ತುಳಿದ ದರ್ಶನ್? ಪಟ್ಟಣಗೆರೆ ಶೆಡ್‌ನ 7 ಕರಾಳ ಮುಖಗಳು ಬೆಚ್ಚಿ ಬೀಳಿಸುತ್ತೆ!
ಆರೋಪಿ ಬಂದನಕ್ಕೆ ಒಳಗಾದ ಬಳಿಕ ಆರೋಪಿಯ ಹೆಸರು, ಆರೋಪದ ಸ್ವರೂಪ ಮತ್ತು ಆರೋಪಿಗಳ ಗುರುತನ್ನು ತೋರಿಸುವ ಔಪಚಾರಿಕ ಪೊಲೀಸ್ ದಾಖಲೆಯ ಉಲ್ಲೇಖವಿರುತ್ತದೆ. ಯಾವುದೇ ಮಾಹಿತಿದಾರರು ಸಂಭವಿಸಿದ ಯಾವುದೇ ಅಪರಾಧದ ಬಗ್ಗೆ ಪೊಲೀಸರಿಗೆ ತಿಳಿಸಿದಾಗ, ಪೊಲೀಸರು ಪ್ರಕರಣವನ್ನು ಪರಿಶೀಲಿಸಿ, ಎಫ್‌ಐಆರ್ ದಾಖಲಿಸಿ, ತನಿಖೆ, ಬಂಧನ ಇತ್ಯಾದಿ ಪ್ರಕ್ರಿಯೆ ಪೂರೈಸುತ್ತಾರೆ. ತನಿಖೆ ಮುಗಿದ ನಂತರ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸುತ್ತಾರೆ. ಇದನ್ನು ಚಾರ್ಜ್ ಶೀಟ್ ಎಂದು ಕರೆಯಲಾಗುತ್ತದೆ, ಇದೇ ಮುಂದಿನ ಕ್ರಿಮಿನಲ್ ವಿಚಾರಣೆಗೆ ಆಧಾರವಾಗಿರುತ್ತದೆ. ಚಾರ್ಜ್‌ಶೀಟ್ ಸಲ್ಲಿಸಲು 90 ದಿನಗಳವರೆಗೆ ಕಾಲಾವಕಾಶವಿರುತ್ತದೆ. ಚಾರ್ಜ್‌ಶೀಟ್ ಇಲ್ಲದೇ ಯಾವುದೇ ಕ್ರಿಮಿನಲ್ ವಿಚಾರಣೆ ಆರಂಭವಾಗುವುದಿಲ್ಲ.
ಚಾರ್ಜ್ ಶೀಟ್ ಪ್ರಥಮ ಮಾಹಿತಿ ವರದಿಗಿಂತ ಭಿನ್ನವಾಗಿರುತ್ತದೆ. ಇದು ಎಸಗಿದ ಅಪರಾಧವನ್ನು ವಿವರಿಸುವ ಪ್ರಮುಖ ದಾಖಲೆಯಾಗಿದೆ. ಇದು ಸಾಮಾನ್ಯವಾಗಿ ಒಂದು ಅಥವಾ ಹೆಚ್ಚಿನ ಎಫ್‌ಐಆರ್ ಉಲ್ಲೇಖವಿರುತ್ತದೆ. ಒಮ್ಮೆ ಚಾರ್ಜ್ ಶೀಟ್ ಅನ್ನು ನ್ಯಾಯಾಲಯಕ್ಕೆ ಸಲ್ಲಿಸಿದ ನಂತರ, ಆರೋಪಿಗಳ ವಿರುದ್ಧ ಪ್ರಾಸಿಕ್ಯೂಷನ್ ಪ್ರಕ್ರಿಯೆಗಳು ನ್ಯಾಯಾಂಗ ವ್ಯವಸ್ಥೆಯಲ್ಲಿ ಪ್ರಾರಂಭವಾಗುತ್ತವೆ. ಪ್ರಕರಣಕ್ಕೆ ಅನುಗುಣವಾಗಿ ಚಾರ್ಜ್ ಶೀಟ್ ಅನ್ನು ಸಲ್ಲಿಸಲಾಗುತ್ತದೆ.
ಇದನ್ನೂ ಓದಿ: ಬಳ್ಳಾರಿ ಜೈಲಲ್ಲಿ ದಾಸನಿಗೆ ಭಯ.. ಫೋನ್ ಮೂಲಕ ಪತ್ನಿ ವಿಜಯಲಕ್ಷ್ಮಿ ಜೊತೆ 5 ನಿಮಿಷ ಮಾತಾಡಿದ ದರ್ಶನ್!
ಅತಿ ಹೆಚ್ಚು ಪುಟಗಳ ಚಾರ್ಜ್‌ಶೀಟ್ ಕೇಸ್!
ವಿಶೇಷ ವರದಿ: ವಿಶ್ವನಾಥ್ ಜಿ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ