newsfirstkannada.com

ಪರಪ್ಪನ ಅಗ್ರಹಾರ ಜೈಲಿನಿಂದಲೇ ದೊಡ್ಡ ಸ್ಕೆಚ್​ ಹಾಕಿದ್ದ; ಉಗ್ರ ನಾಸೀರ್​​ ಹಿಸ್ಟರಿ ನೋಡಿ ಬೆಚ್ಚಿಬಿದ್ದ ಸಿಸಿಬಿ

Share :

Published August 18, 2023 at 10:08pm

    ಉಗ್ರ ನಾಸೀರ್ ಹಿಸ್ಟರಿ ನೋಡಿ ಸಿಸಿಬಿಗೆ ಬಿಗ್ ಶಾಕ್!

    ಇಸ್ಲಾಂಗೆ ಮತಾಂತರಿಸಿ ಉಸ್ಮಾನ್ ಅಂತ ಹೆಸರಿಟ್ಟಿದ್ದ

    ಉಸ್ಮಾನ್​ನಿಂದ ವೆಪನ್ಸ್ ಸಾಗಾಟ ಮಾಡಿಸ್ತಿದ್ದ ನಾಸೀರ್

ಬೆಂಗಳೂರು: ಇತ್ತೀಚೆಗಷ್ಟೇ ಸಿಲಿಕಾನ್​ ಸಿಟಿಯಲ್ಲಿ ಐವರು ಶಂಕಿತ ಉಗ್ರರ ಬಂಧನವಾಗಿತ್ತು. ಗ್ರೆನೇಡ್‌ ಮತ್ತು ಪಿಸ್ತೂಲ್‌ಗಳು ಹಾಗೂ ಬಗೆ ಬಗೆಯ ಸಾಧನಗಳೂ ಸಿಕ್ಕಿದ್ದವು. ಇದೆಲ್ಲದರ ಆರೋಪಿ ನಾಜೀರ್‌ ಜೈಲಿನಲ್ಲಿರೋ ಉಗ್ರ ಅನ್ನೋದೂ ಬಯಲಾಗಿತ್ತು. ಈ ನಜೀರ್‌ ಬಗ್ಗೆ ಮತ್ತೊಂದು ಆಘಾತಕಾರಿ ವಿಷಯ ಸದ್ಯ ಬಯಲಾಗಿದೆ. ಜೈಲಿನಲ್ಲಿ ಆತ ಹಿಂದೂ ಯುವಕನೊಬ್ಬನನ್ನ ಇಸ್ಲಾಂಗೆ ಮತಾಂತರಿಸಿ ಭಯೋತ್ಪಾದನಾ ಕೃತ್ಯಕ್ಕೆ ಬಳಸಿದ್ದ ಅನ್ನೋ ಶಾಕಿಂಗ್‌ ಸಂಗತಿ ಗೊತ್ತಾಗಿದೆ.

ಶಂಕಿತ ಉಗ್ರ ಬಳಿ ಸಿಕ್ಕಿದ್ದ ಸ್ಫೋಟಕ ವಸ್ತುಗಳನ್ನ ನೋಡಿ ಸಿಸಿಬಿ ಪೊಲೀಸರೇ ಶಾಕ್ ಆಗಿದ್ದರು. 7 ಕಂಟ್ರಿ ಮೇಡ್ ಪಿಸ್ತೂಲ್, 42 ಜೀವಂತ ಗುಂಡುಗಳು, ಎರಡು ಸ್ಯಾಟಲೈಟ್ ಫೋನ್ ಮಾದರಿ ವಾಕಿಟಾಕಿ, ಅಲ್ಮೇರಾದಲ್ಲಿ ಇಟ್ಟಿದ್ದ 4 ಗ್ರೆನೇಡ್​​ಗಳೂ ಕೂಡ ಪತ್ತೆಯಾಗಿದ್ದವು. ಉಗ್ರ ನಾಸೀರ್ ಜೈಲಿನಲ್ಲಿದ್ದುಕೊಂಡೇ ರೂಪಿಸಿದ್ದ ಖತರ್ನಾಕ್ ಐಡಿಯಾಗಳು ಒಂದೊಂದೇ ಬೆಳಕಿಗೆ ಬರುತ್ತಿವೆ.

ಬಗೆದಷ್ಟೂ ಭಯಾನಕ ಶಂಕಿತ ಉಗ್ರನ ಜಾಲ!
ಜೈಲಿನಲ್ಲೇ ಸಂಚು.. ಜೈಲಿನಲ್ಲೇ ಮತಾಂತರ!

ಸಿಲಿಕಾನ್ ಸಿಟಿಯಲ್ಲಿ ಶಂಕಿತ ಉಗ್ರರ ಬಂಧನ ಪ್ರಕರಣದಲ್ಲಿ ಸಿಸಿಬಿ ತನಿಖೆ ಚುರುಕುಗೊಂಡಿದೆ. ಸದ್ಯ ಶಂಕಿತ ಉಗ್ರರೆಲ್ಲರೂ ಸಿಸಿಬಿ ಕಸ್ಟಡಿಯಲ್ಲಿದ್ದು ಶಂಕಿತ ಉಗ್ರರ ವೆಪನ್ಸ್​ ಮೂಲ ಪತ್ತೆ ಹಚ್ಚಲು ಮುಂದಾದ ಸಿಸಿಬಿಗೆ ಸ್ಫೋಟಕ ವಿಚಾರ ಬಯಲಾಗಿದೆ. ಸ್ಫೋಟಕ್ಕೆ ಬಳಸುವ ವೆಪನ್​ಗಳನ್ನು ಸಾಗಿಸಲು ಉಗ್ರ ನಾಸೀರ್ ಜೈಲಿನಲ್ಲೇ ಮಹಾ ಪ್ಲಾನ್ ರೂಪಿಸಿದ್ದ. ಜೈಲಿನಲ್ಲಿದ್ದುಕೊಂಡೇ ಓರ್ವ ಹಿಂದೂ ವ್ಯಕ್ತಿಯನ್ನ ತನ್ನ ಕೃತ್ಯಕ್ಕೆ ಬಳಸಿಕೊಂಡಿದ್ದ. ಹಿಂದೂ ವ್ಯಕ್ತಿಯ ಬ್ರೈನ್​ ವಾಶ್ ಮಾಡಿ ತನ್ನ ಧರ್ಮಕ್ಕೆ ಮತಾಂತರ ಕೂಡ ಮಾಡಿದ್ದ ಎಂಬ ವಿಚಾರ ಬಯಲಾಗಿದೆ.

ಬಿಹಾರ ಮೂಲದ ದಿಲೀಪ್ ಕುಮಾರ್​ ಎಂಬಾತನನ್ನ ಮತಾಂತರಿಸಿದ್ದ ನಾಸೀರ್ ಆತನಿಗೆ ಛೋಟಾ ಉಸ್ಮಾನ್ ಎಂದು ಹೆಸರಿಟ್ಟಿದ್ದ. ವೆಪನ್​​ ಟ್ರಾನ್ಸ್​​​​ಪೋರ್ಟ್​​ಗೆ ಉಸ್ಮಾನ್​​​ನನ್ನ ಬಳಸಿಕೊಂಡಿದ್ದ ಎನ್ನಲಾಗಿದೆ. ಉಗ್ರರಾದ ಉಸ್ಮಾನ್, ಮುದಾಸಿರ್, ಸಲ್ಮಾನ್​ರಿಂದ ವೆಪನ್ಸ್​​​ ಸಾಗಾಟ ನಡೆದಿದ್ದು ಟಿ ಬೇಗೂರು ಕಾಲೇಜು ಬಳಿ ಖಾಲಿ ಜಾಗದಲ್ಲಿ ವೆಪನ್ಸ್ ಸಿಕ್ಕಿತ್ತು. ಖಾಲಿ ಜಾಗದಲ್ಲಿ ವೆಪನ್ಸ್ ಇಟ್ಟು ಅನಾಮಿಕನೊಬ್ಬ ಮಾಹಿತಿ ತಿಳಿಸಿದ್ದ. ಮುದಾಸಿರ್​​ಗೆ ತಿಳಿಸಿ ವೆಪನ್ಸ್​ ಕಲೆಕ್ಟ್​ ಮಾಡಲು ಹೇಳಿದ್ದ, ಬಳಿಕ ಅಲ್ಲಿಂದ ವೆಪನ್ಸ್​ಗಳನ್ನ ಶಂಕಿತ ಉಗ್ರರು ಕಲೆಕ್ಟ್ ಮಾಡಿಕೊಂಡಿದ್ದರು ಎನ್ನಲಾಗಿದೆ.

ಒಟ್ಟಿನಲ್ಲಿ ಗುಪ್ತಚಾರ ಇಲಾಖೆ ಹಾಗೂ ಸಿಸಿಬಿ ಪೊಲೀಸರ ಜಂಟಿ ಕಾರ್ಯಾಚರಣೆಯಿಂದ ಉಗ್ರರ ದೊಡ್ಡ ಸಂಚು ಬಯಲಾಗಿತ್ತು. ಸದ್ಯ ವೆಪನ್​​ಗಳನ್ನ ತಂದಿಟ್ಟಿದ್ದ ಅನಾಮಿಕ ವ್ಯಕ್ತಿಗಳ ಪತ್ತೆಗೆ ಸಿಸಿಬಿ ಪೊಲೀಸರು ಮುಂದಾಗಿದ್ದಾರೆ. ಅನಾಮಿಕ ಯಾರು ಅಂತ ಪತ್ತೆಯಾದ್ರೆ ಮತ್ತಷ್ಟು ವಿಚಾರಗಳು ಬೆಳಕಿಗೆ ಬರಲಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪರಪ್ಪನ ಅಗ್ರಹಾರ ಜೈಲಿನಿಂದಲೇ ದೊಡ್ಡ ಸ್ಕೆಚ್​ ಹಾಕಿದ್ದ; ಉಗ್ರ ನಾಸೀರ್​​ ಹಿಸ್ಟರಿ ನೋಡಿ ಬೆಚ್ಚಿಬಿದ್ದ ಸಿಸಿಬಿ

https://newsfirstlive.com/wp-content/uploads/2023/08/bng-1-1.jpg

Load More