newsfirstkannada.com

ಎಲ್ಲರಿಗೂ ಅಪ್ಪುವೇ ಸ್ಫೂರ್ತಿ; ಕೇವಲ 2 ವರ್ಷದಲ್ಲಿ ಲಕ್ಷ ಲಕ್ಷ ಜನರಿಂದ ನೇತ್ರದಾನ

Share :

30-08-2023

    ಯುವರತ್ನನ ನಡೆಯಿಂದ ನೇತ್ರದಾನ ಮಾಡಲು ಮುಂದೆ ಬರ್ತಿರೋ ಜನ

    20-30 ವರ್ಷದ ಯುವಜನರಿಂದಲೇ ಹೆಚ್ಚಿನ ಸಂಖ್ಯೆಯಲ್ಲಿ ನೇತ್ರದಾನ..!

    2023ರ ಆಗಸ್ಟ್ ತನಕ ನೋಂದಣಿ ಮಾಡ್ಕೊಂಡವರ ಸಂಖ್ಯೆ 1,27,924

ಬೆಂಗಳೂರು: ಚಂದವನದ ಅಂದ ಹೆಚ್ಚಿಸಿದ್ದ ಅಪ್ಪು ನಮ್ನನ್ನಗಲಿ ಒಂದೂವರೆ ವರ್ಷ ಕಳೆದುಹೋಗಿದೆ. ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಆದರ್ಶವಾಗಿ ಬದುಕಿದ್ದ ಅಪ್ಪು, ಸಾವಿನಲ್ಲೂ ಸಾರ್ಥಕತೆ ಮೆರೆದವರು. ಮಣ್ಣಾಗುವ ಮುನ್ನ ನೇತ್ರದಾನ ಮಾಡಿ ನಾಲ್ವರ ಬದುಕಿಗೆ ಕಣ್ಣಾದವರು. ಯುವರತ್ನನ ನೇತ್ರದಾನ ಯುವಜನರಿಗೆ ಸ್ಪೂರ್ತಿ ತುಂಬಿದ ಪರಿಣಾಮ ಕಳದೆರಡು ವರ್ಷದಲ್ಲಿ ನೇತ್ರದಾನ ಮಾಡೋರ ಸಂಖ್ಯೆ ದಿಢೀರ್ ಏರಿಕೆಯಾಗಿದೆ.

ತಂದೆಗೆ ತಕ್ಕ ಮಗನಾಗಿದ್ದ ದೊಡ್ಮನೆಯ ಕುಡಿ, ಡಾ. ರಾಜ್​ಕುಮಾರ್​ರಂತೆ ನೇತ್ರದಾನ ಮಾಡಿರುವ ವಿಚಾರ ನಿಮಗೆಲ್ಲಾ ಗೊತ್ತೆ ಇರುತ್ತೆ. ಇದೀಗ ಅಪ್ಪು ನೇತ್ರದಾನ ಮಾಡಿದ ಕೇವಲ ಎರಡು ವರ್ಷದಲ್ಲಿ ಹೊಸ ಚರಿತ್ರೆ ಸೃಷ್ಟಿಯಾಗಿದೆ.

ಕಣ್ತೆರೆಸಿದ ‘ಅರಸು’

ಯುವರತ್ನನ ನಡೆಯಿಂದ ನೇತ್ರದಾನ ಮಾಡಲು ಯುವಜನರು ಸ್ವಯಂ ಪ್ರೇರಿತರಾಗಿ ಮುಂದೆ ಬರ್ತಿದ್ದಾರೆ. 20 ರಿಂದ 30 ವರ್ಷದ ಯುವಜನರೇ ಹೆಚ್ಚಿನ ಸಂಖ್ಯೆಯಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡ್ತಿದ್ದಾರೆ. 1993 ರಿಂದ 2021ರ ಆಗಸ್ಟ್ ತನಕ‌ ನಾರಾಯಣ ನೇತ್ರಾಲಯದಲ್ಲಿ ನೇತ್ರದಾನಕ್ಕೆ ನೋಂದಣಿ ಮಾಡ್ಕೊಂಡವರ ಸಂಖ್ಯೆ 75,000. ಆದ್ರೆ, ಅಪ್ಪು ಅಗಲಿದ 2021ರ ಅಕ್ಟೋಬರ್ ನಿಂದ 2023ರ ಆಗಸ್ಟ್ ಮೂರನೇ ವಾರದ ತನಕ ನೋಂದಣಿ ಮಾಡ್ಕೊಂಡವರ ಸಂಖ್ಯೆ ಬರೋಬ್ಬರಿ 1,27,924ಕ್ಕೂ ಅಧಿಕ. ಆನ್ ಲೈನ್ ಮೂಲಕ 1 ಲಕ್ಚದ 10 ಸಾವಿರ ಜನರು ನೋಂದಣಿ ಮಾಡಿದ್ರೆ, ಆಸ್ಪತ್ರೆಗೆ ಭೇಟಿ ಕೊಟ್ಟು 17,924 ಜನರು ನೋಂದಣಿ ಮಾಡಿದ್ದಾರೆ. ಇನ್ನೂ ನಾರಾಯಣ ನೇತ್ರಾಲಯದಲ್ಲಿ 2 ವರ್ಷದಲ್ಲಿ 3,989 ಮಂದಿ ಈಗಾಗಲೇ ನೇತ್ರದಾನ ಮಾಡಿದ್ದಾರೆ‌.

ಒಟ್ಟಿನಲ್ಲಿ ಅಪ್ಪು ನಮ್ಮನ್ನಗಲಿದ್ರೂ ಅವರು ಮಾಡಿರುವ ಸಮಾಜಮುಖಿ ಕೆಲಸಗಳು , ಒಳ್ಳೆಯತನ ಇನ್ನೂ ಇದೇ ಮಣ್ಣಿನಲ್ಲಿ ಉಸಿರಾಡ್ತಿದೆ ಅನ್ನೋದಕ್ಕೆ ಇದು ಮತ್ತೊಂದು ಉದಾಹರಣೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಲ್ಲರಿಗೂ ಅಪ್ಪುವೇ ಸ್ಫೂರ್ತಿ; ಕೇವಲ 2 ವರ್ಷದಲ್ಲಿ ಲಕ್ಷ ಲಕ್ಷ ಜನರಿಂದ ನೇತ್ರದಾನ

https://newsfirstlive.com/wp-content/uploads/2023/07/Puneeth-Rajkumar-1.jpg

Load More