newsfirstkannada.com

ಉಲ್ಟಾ ಹೊಡೆಯೋ ಚಾನ್ಸೇ ಇಲ್ಲ.. ದರ್ಶನ್ ಗ್ಯಾಂಗ್‌ಗೆ ಬಿಗ್‌ ಶಾಕ್ ಕೊಟ್ಟ ಹೊಸ ಸಾಕ್ಷ್ಯಗಳು; ಸ್ಫೋಟಕ ಮಾಹಿತಿ!

Share :

Published July 5, 2024 at 9:44pm

    ಶೆಡ್​​ನ ಕೆಲಸಗಾರರಿಂದ ಹೇಳಿಕೆಯೇ ಕೊಲೆ ಕೇಸ್​ನ ಪ್ರಮುಖ ಸಾಕ್ಷಿ

    ದರ್ಶನ್​ ಅಂಡ್​ ಗ್ಯಾಂಗ್ ಬಳಸುತ್ತಿದ್ದ ನಕಲಿ ಸಿಮ್​ ರಹಸ್ಯ ಬಯಲು

    ಪವಿತ್ರಾ ಗೌಡ ಸ್ನೇಹಿತೆ ಸಮತಾಗೆ ಪೊಲೀಸರು ನೋಟಿಸ್ ಕೊಟ್ಟಿದ್ದೇಕೆ?

ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಕೇಸ್​​ನಲ್ಲಿ ದರ್ಶನ್ ಗ್ಯಾಂಗ್​​ ಪೊಲೀಸರ ಸಾಕ್ಷ್ಯವ್ಯೂಹದಲ್ಲಿ ಬಂಧಿಯಾಗಿದೆ. ಪಟ್ಟಣಗೆರೆ ಶೆಡ್​ನ ಇಬ್ಬರು ಕೆಲಸಗಾರರ ಹೇಳಿಕೆಯೇ ಪ್ರಮುಖ ಸಾಕ್ಷ್ಯವಾಗಿದೆ. ಪ್ರಕರಣದಲ್ಲಿ ಪವಿತ್ರಾ ಗೌಡ ಆಪ್ತ ಸ್ನೇಹಿತೆ ಸಮತಾ, ಮಾಜಿ ಕಾರ್ಪೋರೇಟರ್​ ಮೋಹನ್​ರಾಜ್​​​ಗೂ ಪೊಲೀಸರು ನೋಟಿಸ್ ನೀಡಿದ್ದಾರೆ. ದರ್ಶನ್ ಅಂಡ್ ಗ್ಯಾಂಗ್ ಬಳಸುತ್ತಿದ್ದ ನಕಲಿ ಸಿಮ್​ಗಳ ರಹಸ್ಯವನ್ನು ಪೊಲೀಸರು ಭೇದಿಸಿದ್ದಾರೆ.

ಇದನ್ನೂ ಓದಿ: ಮಣ್ಣಿನಡಿ ಬಚ್ಚಿಟ್ಟ ಸೂಟ್​​ಕೇಸ್​ ಹೊರ ತೆಗೆದ ರಶ್ಮಿಕಾ ಮಂದಣ್ಣ! ಕಂತೆ ಕಂತೆ ನೋಟು! ಇದು ಎಲ್ಲಿಂದ ಬಂತು?

ರೇಣುಕಾಸ್ವಾಮಿ ಕೊಲೆ ಕೇಸ್​​​ನಲ್ಲಿ ದರ್ಶನ್‌ ಮತ್ತು ತಂಡದ ವಿರುದ್ಧ ಪೊಲೀಸರು ಪ್ರಬಲ ಸಾಕ್ಷ್ಯ ಸಂಗ್ರಹಿಸಿದ್ದಾರೆ. ಹೇಳಿ ಕೇಳಿ ದರ್ಶನ್ ಸೆಲೆಬ್ರಿಟಿ ಜೊತೆ ಪ್ರಭಾವಿ. ಹೀಗಾಗಿ ದರ್ಶನ್ ಗ್ಯಾಂಗ್​​​ ಭೇದಿಸಲಾಗದಂತ ಸಾಕ್ಷ್ಯಗಳ ಚಕ್ರವ್ಯೂಹ ರಚಿಸಿದ್ದಾರೆ. ಪಟ್ಟಣಗೆರೆ ಶೆಡ್​​ನಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕೆಲಸಗಾರರೂ ಪ್ರಮುಖ ಸಾಕ್ಷಿಗಳಾಗಿದ್ದಾರೆ. ಈಗಾಗಲೇ ಸಾಕ್ಷಿಗಳಿಬ್ಬರನ್ನೂ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ 164 ವಿಧಿಯಡಿ ಹೇಳಿಕೆ ದಾಖಲಿಸಲಾಗಿದೆ. ನ್ಯಾಯಾಧೀಶರ ಮುಂದೆ ನೀಡಿದ ಹೇಳಿಕೆಗಳನ್ನು ಬದಲಿಸಲು ಸಾಧ್ಯವಿಲ್ಲ. ಉಲ್ಟಾ ಹೊಡೆಯಲು ಸಾಧ್ಯವಿಲ್ಲ. ಹೀಗಾಗಿ 10ಕ್ಕೂ ಹೆಚ್ಚು ಸಾಕ್ಷಿಗಳ ಹೇಳಿಕೆಗಳು ಪೊಲೀಸರಿಗೆ ಮೇಜರ್ ಅಸ್ತ್ರವಾದಂತಾಗಿದೆ.

ಮತ್ತೊಂದೆಡೆ ಆರೋಪಿ ಪವಿತ್ರಾ ಗೌಡ ಆಪ್ತ ಗೆಳತಿಯಾಗಿರೋ ಸಮತಾಳನ್ನೂ ಪ್ರಕರಣದಲ್ಲಿ ಸಾಕ್ಷಿ ಮಾಡಲು ಪೊಲೀಸರು ಮುಂದಾಗಿದ್ದಾರೆ. ಹೀಗಾಗಿ ಸಮತಾಗೆ ಪೊಲೀಸರು ನೋಟಿಸ್ ನೀಡಿ ವಿಚಾರಣೆಗೆ ಕರೆದಿದ್ದಾರೆ. ಪವಿತ್ರಾಗೆ ಬರ್ತಿದ್ದ ಕಾಮೆಂಟ್​ಗಳಿಗೆ ರಿಪ್ಲೇ ಮಾಡ್ತಿದ್ದ ಸಮತಾ, ಪವಿತ್ರಾಳ ಎಲ್ಲಾ ಕೆಲಸದಲ್ಲಿಯೂ ಸಾಥ್ ನೀಡುತ್ತಿದ್ದರು ಎನ್ನಲಾಗಿದೆ. ಇತ್ತೀಚೆಗೆ ಜೈಲಿನಲ್ಲಿ ನಟ ದರ್ಶನ್ ಭೇಟಿಯಾಗಿಯೂ ಮಾತುಕತೆ ನಡೆಸಿದ್ದಾಳೆ. ಪ್ರಕರಣದ ಆರೋಪಿಯೊಬ್ಬನಿಗೆ ಹಣಕಾಸಿನ ನೆರವು ನೀಡಿರುವ ವಿಚಾರವೂ ಹೊರಬಂದಿದೆ. ಇನ್ನು, ಪ್ರಕರಣದಲ್ಲಿ ಬಿಬಿಎಂಪಿ ಮಾಜಿ ಉಪಮೇಯರ್ ಮೋಹನ್ ರಾಜ್ ಸೇರಿ ಮೂವರಿಗೆ ಪೊಲೀಸರು ನೋಟಿಸ್ ನೀಡಿದ್ದಾರೆ. ಬಸವೇಶ್ವರನಗರ ಪೊಲೀಸ್ ಠಾಣೆಗೆ ಖುದ್ದು ಹಾಜರಾಗುವಂತೆ‌ ಸೂಚಿಸಿದ್ದಾರೆ. ಮೋಹನ್ ರಾಜ್​​ನಿಂದ 40 ಲಕ್ಷ ಹಣ ಪಡೆದ ಬಗ್ಗೆ ವಿಚಾರಣೆ ವೇಳೆ ನಟ ದರ್ಶನ್ ಬಾಯ್ಬಿಟ್ಟಿದ್ದರು.

ಇದನ್ನೂ ಓದಿ: ಧ್ರುವ ಸರ್ಜಾ ಅವರ ಜಿಮ್ ಟ್ರೈನರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್.. ಅಸಲಿ ವಿಚಾರ ಬಯಲು..!

ಹೀಗಾಗಿ ಯಾವ ಕಾರಣಕ್ಕಾಗಿ ದರ್ಶನ್​ಗೆ ಹಣ ನೀಡಲಾಗಿತ್ತು ಎಂಬುದನ್ನು ತಿಳಿಸಲು ನೋಟಿಸ್ ಜಾರಿ ಮಾಡಿದ್ದಾರೆ ಎನ್ನಲಾಗಿದೆ. ಅದರಂತೆ ಮೋಹನ್‌ ರಾಜ್‌ ಇವತ್ತು ಪೊಲೀಸರ ಮುಂದೆ ಹಾಜರಾಗಿ ವಿಚಾರಣೆ ಎದುರಿಸಿದ್ದಾರೆ. ಇನ್ನು ಆರೋಪಿ ಧನರಾಜ್​​ಗೆ ಸಮತಾ ಹಣ ಕೊಟ್ಟಿದ್ದರು ಎನ್ನಲಾಗಿದ್ದು ಅದೇ ದುಡ್ಡಲ್ಲಿ ಎಲೆಕ್ಟ್ರಿಕಲ್ ಮೆಗ್ಗರ್ ಖರೀದಿಸಿದ್ದ ಎನ್ನಲಾಗಿದೆ. 9ನೇ ಆರೋಪಿ ಧನರಾಜ್​ಗೆ ಶವ ಸಾಗಿಸಲು ಕಾರು ನೀಡಿದ್ದ ಕಾರ್ತಿಕ್ ಸದ್ಯ ಪರಾರಿಯಾಗಿದ್ದು ಆತನಿಗೂ ಪೊಲೀಸರು ನೋಟಿಸ್ ನೀಡಿದ್ದಾರೆ. ಇನ್ನು ನಿರ್ದೇಶಕ ಮಿಲನ ಪ್ರಕಾಶ್​, ಪಬ್​ ಕೆಲಸಗಾರ ಪವನ್​​​, ದರ್ಶನ್​ ಮನೆಯ ಕೆಲಸಗಾರರಿಗೆ ಪೊಲೀಸರಿಂದ ನೋಟಿಸ್​ ನೀಡಿದ್ದು ಕೃತ್ಯದ ಬಗ್ಗೆ ಇವರಿಗೆ ಗೊತ್ತಿತ್ತು ಎಂಬ ಶಂಕೆ ಮೇಲೆ ವಿಚಾರಣೆ ನಡೆಯಲಿದೆ. ರೇಣುಕಾಸ್ವಾಮಿ ಕೊಲೆ ಕೇಸ್ ಆರೋಪಿಗಳೆಲ್ಲರೂ ಬಳಸ್ತಾ ಇದ್ದಿದ್ದು ಫೇಕ್​ ಸಿಮ್​​ ಅನ್ನೋದು ಬೆಳಕಿಗೆ ಬಂದಿದೆ. ಎ1 ಪವಿತ್ರಾಗೌಡ, ಎ2 ದರ್ಶನ್, ಎ14 ಪ್ರದೂಶ್ ಸೇರಿ ಸೇರಿ ಆರೋಪಿಗಳು ಬೇರೆಯವರ ಹೆಸರಲ್ಲಿ ಸಿಮ್ ಖರೀದಿಸಿ ಬಳಸುತ್ತಿದ್ದ ವಿಚಾರಣೆ ಬಯಲಾಗಿದ್ದು ಸಿಮ್ ಮಾಲೀಕರಿಗೂ ಪೊಲೀಸರು ನೋಟಿಸ್ ನೀಡಿದ್ದಾರೆ.

ಸಿಮ್ ಸೀಕ್ರೆಟ್!

ಪ್ರಕಾಶ ನಗರದ ಹೇಮಂತ್ ಎಂಬಾತನ ಹೆಸರಲ್ಲಿ ನಟ ದರ್ಶನ್ ಸಿಮ್ ಖರೀದಿಸಿ ಬಳಸುತ್ತಿದ್ದರು ಎಂಬ ವಿಚಾರ ಬಯಲಾಗಿದೆ. ನರಸಿಂಹಲು ಹೆಸರಲ್ಲಿ ಎ2 ಪವಿತ್ರಾಗೌಡ ಸಿಮ್ ಯೂಸ್ ಮಾಡುತ್ತಿದ್ದರಂತೆ, ಇವರ ಜೊತೆಗೆ ಆರೋಪಿಗಳಾದ ಪ್ರದೂಶ್, ಕಾರ್ತಿಕ್, ನಂದೀಶ್, ನಿಖಿಲ್ ಕೂಡ ಬೇರೆಯವರ ಸಿಮ್ ಬಳಸುತ್ತಿದ್ದರು ಎನ್ನಲಾಗಿದೆ. ಬೇರೆ ಬೇರೆ ವ್ಯಕ್ತಿಗಳ ಅಡ್ರೆಸ್ ಪ್ರೂಫ್ ಕೊಟ್ಟು ಸಿಮ್ ಖರೀದಿಸಿದ್ದರು ಎನ್ನಲಾಗಿದೆ. ಸಿಮ್​ನ ಎಲ್ಲಾ ಒರಿಜಿನಲ್ ಮಾಲೀಕರಿಗೆ ಪೊಲೀಸರು ನೋಟಿಸ್ ನೀಡಿದ್ದು ಸಿಮ್ ಮಾಲೀಕರನ್ನು ಸಾಕ್ಷಿ ಮಾಡಲು ಸಜ್ಜಾಗಿದ್ದಾರೆ. ಸದ್ಯ ದರ್ಶನ್, ಪವಿತ್ರಾ ಸೇರಿ ಎಲ್ಲಾ ಆರೋಪಿಗಳ ಮೊಬೈಲ್​ಗಳನ್ನು ವಶಕ್ಕೆ ಪಡೆದಿದ್ದು ಹೈದ್ರಾಬಾದ್​​ನ ಎಫ್ಎಸ್​ಎಲ್​ಗೆ ಕಳುಹಿಸಲಾಗಿದೆ. ಎಫ್​ಎಸ್​ಎಲ್ ವರದಿ ಬಂದ ಮೇಲೆ ಮತ್ತಷ್ಟು ಸತ್ಯಗಳು ಬಹಿರಂಗ ಅಗುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಉಲ್ಟಾ ಹೊಡೆಯೋ ಚಾನ್ಸೇ ಇಲ್ಲ.. ದರ್ಶನ್ ಗ್ಯಾಂಗ್‌ಗೆ ಬಿಗ್‌ ಶಾಕ್ ಕೊಟ್ಟ ಹೊಸ ಸಾಕ್ಷ್ಯಗಳು; ಸ್ಫೋಟಕ ಮಾಹಿತಿ!

https://newsfirstlive.com/wp-content/uploads/2024/07/darshan64.jpg

Load More