newsfirstkannada.com

ಬೆಂಗಳೂರು IT ಕಂಪನಿಗೆ ಬಾಂಬ್ ಬೆದರಿಕೆ ಕರೆ.. ಹೊರಗೆ ಓಡೋಡಿ ಬಂದ ಟೆಕ್ಕಿಗಳು; ಆಮೇಲೆ ಆಗಿದ್ದೇನು?

Share :

14-11-2023

    ಎದ್ನೋ, ಬಿದ್ನೋ ಅಂತಾ ಆಫೀಸ್‌ನಿಂದ ಓಡೋಡಿ ಬಂದ ಟೆಕ್ಕಿಗಳು

    ಎಲೆಕ್ಟ್ರಾನಿಕ್ ಸಿಟಿ ಟಿ.ಸಿ.ಎಸ್ ಕಂಪನಿಯಲಿ ಆತಂಕದ ವಾತಾವರಣ

    ಬಿ ಬ್ಲಾಕ್‌ನಲ್ಲಿ ಬಾಂಬ್ ಇದೆ ಅಂತ ಕ್ಯಾಬ್‌ ಚಾಲಕನಿಗೆ ಬೆದರಿಕೆ ಕರೆ

ಬೆಂಗಳೂರು: ಇವತ್ತು ಬೆಳ್ಳಂಬೆಳಗ್ಗೆ ಎಲೆಕ್ಟ್ರಾನಿಕ್ ಸಿಟಿ ಟಿ.ಸಿ.ಎಸ್ ಕಂಪನಿಯ ಟೆಕ್ಕಿಗಳು ಇದ್ದಕ್ಕಿದ್ದಂತೆ ಎದ್ನೋ, ಬಿದ್ನೋ ಅಂತಾ ಆಫೀಸ್‌ನಿಂದ ಹೊರಗೆ ಓಡಿ ಬಂದಿದ್ದಾರೆ. ಕೆಲ ಕಾಲ ಹುಸಿ ಬಾಂಬ್ ಬೆದರಿಕೆ ಕಂಪನಿಯಲ್ಲಿದ್ದ ಎಲ್ಲರಿಗೂ ಭಯದ ವಾತಾವರಣ ಸೃಷ್ಟಿಸಿತ್ತು. ಆಮೇಲೆ ಹುಸಿ ಬಾಂಬ್ ಕರೆ ಮಾಡಿದ್ದು ಯಾರು ಅನ್ನೋ ಅಸಲಿ ವಿಷಯ ಬಹಿರಂಗವಾಗಿದೆ.

ಎಲೆಕ್ಟ್ರಾನಿಕ್ ಸಿಟಿ ಟಿ.ಸಿ.ಎಸ್ ಕಂಪನಿಯ B ಬ್ಲಾಕ್‌ನಲ್ಲಿ ಬಾಂಬ್ ಇರುವುದಾಗಿ ಬೆದರಿಕೆ ಕರೆ ಮಾಡಲಾಗಿದೆ. ಈ ಕರೆ ಬರುತ್ತಿದ್ದಂತೆ ಕಂಪನಿಯಲ್ಲಿ ಉದ್ಯೋಗಿಗಳು ಹೊರಗಡೆ ಬಂದಿದ್ದಾರೆ. ಕೂಡಲೇ ಪರಪ್ಪನ ಅಗ್ರಹಾರ ಪೊಲೀಸರು, ಬಾಂಬ್ ನಿಷ್ಕ್ರಿಯದಳದ ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದಾರೆ.

ಟಿ.ಸಿ.ಎಸ್ ಕಂಪನಿ ಬಿ ಬ್ಲಾಕ್ ಅನ್ನು ಸಂಪೂರ್ಣ ಪರಿಶೀಲನೆ ನಡೆಸಿದಾಗ ಇದೊಂದು ಹುಸಿ ಬಾಂಬ್ ಬೆದರಿಕೆ ಅನ್ನೋದು ಖಚಿತವಾಯಿತು. ಕೊನೆಗೆ ಬಾಂಬ್ ಬೆದರಿಕೆ ಕರೆ ಮಾಡಿದ್ದು ಯಾರು ಅನ್ನೋದನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಹುಸಿ ಬಾಂಬ್ ಕರೆ 

ಟಿ.ಸಿ.ಎಸ್ ಕಂಪನಿ ಅವರು ಯುವತಿಯನ್ನು ಕೆಲಸದಿಂದ ತೆಗೆದು ಹಾಕಿದ್ದಕ್ಕೆ ಹುಸಿ ಬಾಂಬ್ ಕರೆ ಮಾಡಿದ್ದಾರೆ. ಬೆಳಗಾವಿ ಮೂಲದ ಯುವತಿಯೇ ಹುಸಿ ಬಾಂಬ್‌ ಕರೆ ಮಾಡಿರುವ ಮಾಹಿತಿ ಲಭ್ಯವಾಗಿದೆ. ಬೆದರಿಕೆ ಕರೆ ಮಾಡಿದ ಯುವತಿಯು ಅದೇ ಕಂಪನಿಯ ಚಾಲಕನೊಬ್ಬನಿಗೆ ಕರೆ ಮಾಡಿ ಬಾಂಬೆ ಇಟ್ಟಿರುವುದಾಗಿ ಹೇಳಿದ್ದಾರೆ.

ಕಂಪನಿಯ ಬಿ ಬ್ಲಾಕ್‌ನಲ್ಲಿ ಬಾಂಬ್ ಇದೆ ಎಂದು ಅದೇ ಕಂಪನಿಯಲ್ಲಿ ಉದ್ಯೋಗಿಯಾಗಿದ್ದ ಕ್ಯಾಬ್‌ ಚಾಲಕನಿಗೆ ಕರೆ ಮಾಡಲಾಗಿದೆ. ಆ ಯುವತಿಯು ಕುಡಿದ ಮತ್ತಿನಲ್ಲಿ ಪರಿಚಯ ಇದ್ದ ಕ್ಯಾಬ್ ಚಾಲಕನಿಗೆ ಕರೆ ಮಾಡಿರುವುದು ಪೊಲೀಸರ ತಪಾಸಣೆ ವೇಳೆ ಗೊತ್ತಾಗಿದೆ. ಸದ್ಯ ಖಚಿತ ಮಾಹಿತಿ ಕಲೆ ಹಾಕಿರುವ ಪೊಲೀಸರು ಬೆಳಗಾವಿಯಲ್ಲಿ ಯುವತಿಯನ್ನ ವಶಕ್ಕೆ ಪಡೆಯಲು ಸಿದ್ಧತೆ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬೆಂಗಳೂರು IT ಕಂಪನಿಗೆ ಬಾಂಬ್ ಬೆದರಿಕೆ ಕರೆ.. ಹೊರಗೆ ಓಡೋಡಿ ಬಂದ ಟೆಕ್ಕಿಗಳು; ಆಮೇಲೆ ಆಗಿದ್ದೇನು?

https://newsfirstlive.com/wp-content/uploads/2023/11/bomb.jpg

Load More