ಪಕ್ಕದ ಮನೆ ಹುಡುಗನಿಂದಲೇ ಯುವತಿಗೆ ಮಹಾ ಮೋಸ ಆರೋಪ
ಮದುವೆಯಾಗು ಎಂದಿದ್ದಕ್ಕೆ ರಾತ್ರೋರಾತ್ರಿ ಪರಾರಿಯಾದ ಪ್ರಿಯತಮ
ಹುಡುಗಿ ಜೊತೆ ಚೆಲ್ಲಾಟವಾಡಿ ಈಗ ಮದುವೆ ಬೇಡ ಅಂದ್ರೆ ಹೇಗೆ?
ರಾಯಚೂರು: ಮದುವೆ ಆಗುತ್ತೇನೆ ಎಂದು ಯುವತಿಗೆ ನಂಬಿಸಿ ಯುವಕ ಎಸ್ಕೇಪ್ ಆಗಿರೋ ಆರೋಪ ಸಿರವಾರ ತಾಲೂಕಿನ ತೊಪ್ಪಲದೊಡ್ಡಿ ಗ್ರಾಮದಲ್ಲಿ ನಡೆದಿದೆ. ಪಕ್ಕದ ಮನೆಯ ಹುಡುಗ ಮಲ್ಲೇಶ್ ಎಂಬಾತ ಮೋನಮ್ಮ (20) ಎಂಬಾಕೆಯನ್ನು ಪ್ರೀತಿಸುತ್ತಿದ್ದರು. ಪ್ರಿಯಕರ ಮಲ್ಲೇಶ್, ಯುವತಿಯ ಜೊತೆಗೆ ಪ್ರೀತಿಯ ಹೆಸರಿನಲ್ಲಿ ಮೋಸ ಮಾಡಿದ್ದಾನೆ ಎನ್ನಲಾಗಿದೆ. ಆಕೆಯನ್ನ ಮದುವೆಯಾಗುವುದಾಗಿ ನಂಬಿಸಿ ಬಳಿಕ ಬಲವಂತವಾಗಿ ಲೈಂಗಿಕ ಕ್ರಿಯೆ ನಡೆಸಿದ್ದಾನೆ. ಈ ವಿಚಾರವನ್ನು ಯುವತಿಯು ಕುಟುಂಬಸ್ಥರಿಗೆ ತಿಳಿಸಿದ್ದಾಳೆ. ಈ ವಿಚಾರ ಕೇಳಿದ ಮನೆಯವರು ಕೊನೆಗೆ ಇಬ್ಬರಿಗೂ ಮದುವೆ ಮಾಡಲು ದಿನಾಂಕವನ್ನು ಫಿಕ್ಸ್ ಮಾಡಲು ಮುಂದಾಗಿದ್ದರು.
ಆದರೆ ಮದುವೆ ವಿಚಾರ ತಿಳಿಯುತ್ತಿದ್ದಂತೆ ಯುವಕ ರಾತ್ರೋರಾತ್ರಿ ಪರಾರಿಯಾಗಿದ್ದಾನೆ. ಪ್ರಿಯಕರ ಮಲ್ಲೇಶ್ ಪರಾರಿಯಾಗಿರೋ ಸುದ್ದಿ ಕೇಳುತ್ತಿದ್ದಂತೆ ಯುವತಿ ಮನನೊಂದು ಕ್ರಿಮಿನಾಶಕ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾಳೆ. ಸದ್ಯ ಮನನೊಂದ ಯುವತಿಯು ನ್ಯಾಯಕ್ಕಾಗಿ ಪೊಲೀಸ್ ಠಾಣೆಯಲ್ಲಿ ದೂರ ದಾಖಲು ಮಾಡಿದ್ದಾಳೆ. ಎಫ್ಐಆರ್ ದಾಖಲಿಸಿಕೊಂಡಿರೋ ಪೊಲೀಸರು ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲವೆಂದು ಯುವತಿ ಆರೋಪಿಸಿದ್ದಾಳೆ. ಯುವತಿಗೆ ನ್ಯಾಯ ಸಿಗುತ್ತಾ ಎಂದು ಕಾದು ನೋಡಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ