newsfirstkannada.com

ವಿದ್ಯಾರ್ಥಿಗೆ ಜೀವ ಬೆದರಿಕೆ; ಲಕ್ಷಗಟ್ಟಲೇ ಹಣ ಸುಲಿಗೆ ಮಾಡಿದ ನಕಲಿ ಪೊಲೀಸರು!

Share :

25-07-2023

  ಸಿಲಿಕಾನ್​ ಸಿಟಿಯಲ್ಲಿ ಹೆಚ್ಚಾದ ನಕಲಿ ಪೊಲೀಸ್ರು

  ನಾವು ಪೊಲೀಸ್​ ಎಂದು ಹೇಳಿಕೊಂಡು ಸುಲಿಗೆ

  ವಿದ್ಯಾರ್ಥಿಯಿಂದ ಲಕ್ಷ ಲಕ್ಷ ಹಣ ಸುಲಿಗೆ ಮಾಡಿದ್ರು

ಬೆಂಗಳೂರು: ಹೊಲ ಮೇಯುವ ಜನರಿಗೆ ಬೇಲಿ ಕಾಯುವ ಕೆಲಸ ನೀಡಿದರೆ ಹೀಗೆ ಆಗುವುದು. ಪೊಲೀಸ್​​ ಇನ್ಫಾಮರ್ಸ್​ಗೆ ಕಳ್ಳರ ಬಗ್ಗೆ ಮಾಹಿತಿ ನೀಡಿ ಎಂದು ಅಧಿಕಾರಿ ಜವಾಬ್ದಾರಿ ನೀಡಿದ್ರೆ, ಇವರು ಮಾಹಿತಿ ನೀಡುತ್ತಲೇ ಅಮಾಯಕರನ್ನು ದೋಚುವ ಕೆಲಸ ಮಾಡಿದ್ದಾರೆ.

ವಿದ್ಯಾರ್ಥಿ ಸುಲಿಗೆ

ಪೊಲೀಸರ ತನಿಖೆ ವಿಚಾರಣೆ ಶೈಲಿಯನ್ನು ಸರಿಯಾಗಿ ತಿಳಿದುಕೊಂಡಿದ್ದ ಆರೋಪಿಗಳು, ಇದನ್ನೇ ಬಂಡವಾಳ ಮಾಡಿಕೊಂಡು ಪ್ಯಾರಾಮೆಡಿಕಲ್​ ವಿದ್ಯಾರ್ಥಿಯೋರ್ವನಿಂದ ಸುಲಿಗೆ ಮಾಡಿದ್ದಾರೆ. ತಾವು ಪೊಲೀಸರು ಎಂದು ಹೇಳಿಕೊಂಡು ವಿದ್ಯಾರ್ಥಿಯನ್ನು ಕಾರು ಹತ್ತಿಸಿಕೊಂಡು ಸುಲಿಗೆ ಮಾಡಿರೋ ಇವರು, ಬರೋಬ್ಬರಿ 1 ಲಕ್ಷದ 70 ಸಾವಿರ ಅಕೌಂಟ್​ಗೆ ಹಾಕಿಸಿಕೊಂಡಿದ್ದಾರೆ.

ಇನ್ನು, ವಿಚಾರ ಬಾಯಿಬಿಟ್ಟರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಸದ್ಯ ಆರೋಪಿಗಳನ್ನ ಸದಾಶಿವನಗರ ಪೊಲೀಸರು ಬಂಧಿಸಿದ್ದಾರೆ. ಯಶವಂತಪುರದಲ್ಲೂ ಇದೇ ರೀತಿ ಸುಲಿಗೆ ಮಾಡಿರೊದು ಬೆಳಕಿಗೆ ಬಂದಿದೆ. ಯಶವಂತಪುರ ಪೊಲೀಸರಿಗೆ ಸದಾಶಿವನಗರ ಪೊಲೀಸರು ಇದರ ಮಾಹಿತಿ ನೀಡಿದ್ದಾರೆ.

ನಾವು ಪೊಲೀಸರು. ಸ್ಟೇಷನ್​​ಗೆ ನಡೆಯಿರಿ ಎಂದು ಕಾರು ಹತ್ತಿಸಿಕೊಂಡು ಸುಲಿಗೆ ಮಾಡಿದ್ದಾರೆ ಎಂದು ಪೊಲೀಸ್​ ವಿಚಾರಣೆ ವೇಳೆ ಬಯಲಿಗೆ ಬಂದಿದೆ. ಹೀಗಾಗಿ ಜನ ನಕಲಿ ಪೊಲೀಸರ ಬಳಿ ಅಲರ್ಟ್​​ ಆಗಿರಬೇಕು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿದ್ಯಾರ್ಥಿಗೆ ಜೀವ ಬೆದರಿಕೆ; ಲಕ್ಷಗಟ್ಟಲೇ ಹಣ ಸುಲಿಗೆ ಮಾಡಿದ ನಕಲಿ ಪೊಲೀಸರು!

https://newsfirstlive.com/wp-content/uploads/2023/07/Crime.jpg

Load More