Advertisment

10ನೇ ಕ್ಲಾಸ್ 3 ಸಲ ಡುಮ್ಕಿ.. 3 ವರ್ಷ ಪೊಲೀಸರಿಗೆ ಯಾಮಾರಿಸಿದ್ದ ಹುಡುಗಿಯಿಂದ ₹13 ಲಕ್ಷ ವಂಚನೆ!

author-image
admin
Updated On
10ನೇ ಕ್ಲಾಸ್ 3 ಸಲ ಡುಮ್ಕಿ.. 3 ವರ್ಷ ಪೊಲೀಸರಿಗೆ ಯಾಮಾರಿಸಿದ್ದ ಹುಡುಗಿಯಿಂದ ₹13 ಲಕ್ಷ ವಂಚನೆ!
Advertisment
  • 10ನೇ ಕ್ಲಾಸ್​​ನಲ್ಲಿ 3 ಸಲ ಡುಮ್ಕಿ, ಆದ್ರೂ ಸಬ್​​ಇನ್ಸ್​ಪೆಕ್ಟರ್​ ಸೋಗು
  • ಲಕ್ಷ, ಲಕ್ಷ ರೂಪಾಯಿ ವಂಚಿಸಿದ ಫೇಕ್ ಪೊಲೀಸ್ ಅಧಿಕಾರಿ ಬಂಧನ
  • 3 ವರ್ಷ ಡೆಲ್ಲಿ ಪೊಲೀಸರಿಗೆ ಮಂಕು ಬೂದಿ ಎರಚಿದ್ದಳು ಈ ಯುವತಿ

ಟಿಪ್​ ಟಾಪ್ ಆಗಿ ಪೊಲೀಸ್​ ಡ್ರೆಸ್​​ ಹಾಕಿಕೊಂಡು ಓಡಾಡುತ್ತಿದ್ದಳು ಯುವತಿ. ನಿರುದ್ಯೋಗಿಗಳು ಸಿಕ್ಕರೆ ಕೆಲಸ ಕೊಡಿಸ್ತೀನಿ ಅಂತ ವಂಚಿಸುತ್ತಿದ್ದಳು. ಮೂರು ವರ್ಷ ಕಾಲ ದೆಹಲಿ ಪೊಲೀಸರಿಗೂ ಮಂಕು ಬೂದಿ ಎರಚಿದ್ದಾಳೆ. ಲಕ್ಷಾಂತರ ರೂಪಾಯಿ ಕಳೆದುಕೊಂಡವರು ಸತ್ಯ ತಿಳಿದು ಇಂಗು ತಿಂದವರಂತಾಗಿದ್ದಾರೆ.

Advertisment

10ನೇ ಕ್ಲಾಸ್​ 3 ಸಲ ಡುಮ್ಕಿ ಹೊಡೆದ ಯುವತಿ ಇನ್ಸ್​ಪೆಕ್ಟರ್!
ರಾಜಸ್ಥಾನದ ಅಂಜು ಶರ್ಮಾ ಅನ್ನೋ ಯುವತಿ ಪೊಲೀಸರ ಅತಿಥಿಯಾಗಿದ್ದಾಳೆ ಸತತ ಮೂರು ಸಲ ಹತ್ತನೇ ಕ್ಲಾಸ್​​ನಲ್ಲಿ ಫೇಲ್ ಆಗಿದ್ರೂ ತಾನು ಪೊಲೀಸ್ ಇನ್ಸ್​ಪೆಕ್ಟರ್​ ಅಂತ ಹೇಳಿಕೊಂಡು ಓಡಾಡುತ್ತಿದ್ದಳು. ಯುನಿಫಾರ್ಮ್​​ನಲ್ಲೇ ಕಾಣಿಸಿಕೊಳ್ಳುತ್ತಿದ್ದ ಅಂಜು ಶರ್ಮಾಳನ್ನ ಕಂಡು ನಿಜವಾದ ಪೊಲೀಸ್ ಇರಬೇಕು ಅಂತ ಜನ ನಂಬಿದ್ದರು. ಸರ್ಕಾರಿ ಕೆಲಸ ಕೊಡಿಸ್ತೀನಿ ಅಂತ ಸಾಕಷ್ಟು ಮಂದಿಯನ್ನು ವಂಚಿಸಿದ್ದಾಳೆ.

ಇದನ್ನೂ ಓದಿ: 3 ದಿನ ಮನೆಯಲ್ಲಿ ಮಗ ಸತ್ತಿದ್ದೂ ಗೊತ್ತಾಗಲಿಲ್ಲ.. ತುತ್ತು ಅನ್ನ ತಿಂದಿಲ್ಲ; ಅಂಧ ಅಪ್ಪ, ಅಮ್ಮನ ಕರುಣಾಜನಕ ಕಥೆ! 

13 ಲಕ್ಷ ವಂಚನೆ, ಫೇಕ್ ಪೊಲೀಸ್​ ಪವರ್​ನಿಂದ್ಲೇ ಲಾಭ!
ದೆಹಲಿ ಪೊಲೀಸ್​ ಇಲಾಖೆಯಲ್ಲಿ ಇನ್ಸ್​ಪೆಕ್ಟರ್​ ಆಗಿದ್ದೀನಿ ಅಂತ ಫೇಕ್​ ಐಡಿ ಕಾರ್ಡ್ ತೋರಿಸಿಕೊಂಡೇ ಅಂಜು ಶರ್ಮಾ 13 ಲಕ್ಷ ರೂಪಾಯಿಗಳನ್ನು ವಂಚಿಸಿದ್ದಾಳೆ. ಬಹುಪಾಲು ಮಂದಿ ಪೊಲೀಸ್ ನೇಮಕಾತಿಯಲ್ಲಿ ಗೋಲ್​ಮಾಲ್ ಮಾಡಿಯಾದ್ರೂ ಸರ್ಕಾರಿ ಕೆಲಸ ಕೊಡಿಸುತ್ತಾಳೆ ಅಂತಲೇ ಅಂಜು ಟೋಪಿಗೆ ತಲೆ ಬಾಗಿಸಿದ್ದಾರೆ. ವಿಪರ್ಯಾಸ ಅಂದ್ರೆ ಇದೇ ಫೇಕ್ ಪೊಲೀಸ್​​ ಪವರ್​ನಿಂದಲೇ ಟೋಲ್​ಗೇಟ್​​, ದೇವಾಲಯ ಹಾಗೂ ಪಾರ್ಕಿಂಗ್ ಸೌಕರ್ಯಗಳನ್ನೂ ಅಂಜು ಶರ್ಮಾ ಪಡೆದುಕೊಂಡಿದ್ದಾಳೆ. ಸದ್ಯ, ರಾಜಸ್ಥಾನದ ಚುರು ಪೊಲೀಸರು ಈಕೆಯನ್ನು ಬಂಧಿಸಿ, 6 ದಿನ ಕಸ್ಟಡಿಗೆ ತೆಗೆದುಕೊಂಡಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment