newsfirstkannada.com

×

20 ನಿಮಿಷ.. ₹10 ಲಕ್ಷ ಕೊಟ್ರೆ ವೀಸಾ ರೆಡಿ; ಖತರ್ನಾಕ್ ಗ್ಯಾಂಗ್ ಪ್ಲಾನ್‌ಗೆ ಬೆಚ್ಚಿ ಬಿದ್ದ ದೆಹಲಿ ಪೊಲೀಸರು!

Share :

Published September 16, 2024 at 5:46pm

    ಇಟಲಿಯ ರೋಮ್​ಗೆ ಹಾರಲು ಕನಸು ಕಾಣುತ್ತಿದ್ದವ ಹೋಗಿದ್ದು ದೆಹಲಿ ಜೈಲಿಗೆ

    ಜಸ್ಟ್ 10 ಲಕ್ಷದಲ್ಲಿ ಸಿಗುತ್ತೆ ನಿಮಗೆ ಯುರೋಪ್​ ದೇಶಗಳನ್ನು ಸುತ್ತಾಡಲು ವೀಸಾ

    ದೆಹಲಿ ಪೊಲೀಸರು ಭೇದಿಸಿದ ನಕಲಿ ಪಾಸ್​ಪೋರ್ಟ್​, ವೀಸಾ ಗ್ಯಾಂಗ್​ ರಹಸ್ಯವೇನು?

ನವದೆಹಲಿ: ಕೆಲವೇ ಕ್ಷಣಗಳು ಬಾಕಿ ಇದ್ದವು. ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಎಲ್ಲಾ ಕ್ಲಿಯರೆನ್ಸ್ ಮಾಡಿಕೊಂಡು ಆತ ರೋಮ್​ಗೆ ಹಾರುವವನಿದ್ದ. ಆದ್ರೆ ಅವನ ವೀಸಾವನ್ನು ಸರಿಯಾಗಿ ಪರಿಶೀಲಿಸಿ ನೋಡಿದಾಗ ಅಲ್ಲಿಯ ಸಿಬ್ಬಂದಿ ಬೆಚ್ಚಿ ಬಿದ್ದಿದ್ದರು. ಇಟಲಿಯ ರೋಮ್​ಗೆ ಹಾರಲು ಸಜ್ಜಾಗಿದ್ದ ಸಂದೀಪ್ ಎಂಬ ವ್ಯಕ್ತಿಯನ್ನು ಬಂಧಿಸಿ ವಿಚಾರಣೆ ಮಾಡಿದ ಪೊಲೀಸರಿಗೂ ಕೂಡ ದೊಡ್ಡ ಶಾಕ್ ಕಾದಿತ್ತು. ಆತ ಕೇವಲ 10 ಲಕ್ಷ ರೂಪಾಯಿ ನೀಡಿ ಯುರೋಪ್​ ರಾಷ್ಟ್ರ ಪ್ರವಾಸಕ್ಕೆ ಅಣಿಯಾಗಿದ್ದ.

ಇದನ್ನೂ ಓದಿ: Narendra Modi: ನಾಳೆ ಪ್ರಧಾನಿ ಮೋದಿಗೆ 74ನೇ ಹುಟ್ಟುಹಬ್ಬ; ಕೇಂದ್ರ ಸರ್ಕಾರದ ಮೆಗಾ ಪ್ಲಾನ್‌ ಏನು?

ಪೊಲೀಸರು ನೀಡಿದ ಮಾಹಿತಿ ಪ್ರಕಾರ ಸೆಪ್ಟೆಂಬರ್ 2ರಂದು ಈತ ಇಂದಿರಾಗಾಂಧಿ ವಿಮಾನ ನಿಲ್ದಾಣದಿಂದ ರೋಮ್​ಗೆ ಹೊರಟಿರುವ ವೇಳೆ ಸಿಕ್ಕಾಕಿಕೊಂಡಿದ್ದ ಅವನನ್ನು ವಿಚಾರಣೆ ಮಾಡಿದಾಗ, ಆತ ಆಸೀಫ್ ಅಲಿ ಅನ್ನೋ ಏಜೆಂಟ್​ ಒಬ್ಬನನ್ನು ಭೇಟಿಯಾಗಿದ್ದ. ಅವನು ಈತನಿಗೆ ಕೇವಲ 10 ಲಕ್ಷ ರೂಪಾಯಿಯಲ್ಲಿ ಯುರೋಪ್​ ಪ್ರವಾಸವನ್ನು ಮಾಡಿಸುವುದಾಗಿ ಹೇಳಿದ್ದ ಆಸೀಫ್ ಅಲಿ ಜೊತೆ ಜೊತೆಗೆ ನವೀನ್ ರಾಣಾ ಹಾಗೂ ಶಿವಾ ಗೌತಮ್ ಅನ್ನುವವರು ಸೇರಿ ದೇಶಿ ಪಾಸ್​ಪೋರ್ಟ್ ಹಾಗೂ ವೀಸಾ ರೆಡಿ ಮಾಡಿ ಸಂದೀಪ್ ಕೈಗಿಟ್ಟಿದ್ದರು.

ಇದನ್ನೂ ಓದಿ: ಸ್ನಾನ ಮಾಡದ ಗಂಡನಿಗೆ ಡಿವೋರ್ಸ್‌.. 40 ದಿನದ ನವವಿವಾಹಿತೆ ನಿರ್ಧಾರಕ್ಕೆ ಎಲ್ರೂ ಶಾಕ್‌; ಅಸಲಿಗೆ ಆಗಿದ್ದೇನು?

ಏಜೆಂಟ್ ಆಸೀಫ್ ಅಲಿ ಜೊತೆಗೆ ನವೀನ್ ಹಾಗೂ ಶಿವಾನನ್ನು ಬಂಧಿಸಿ ವಿಚಾರಣೆ ಮಾಡಲಾಗಿದೆ. ಈ ವೇಳೆ ಅವರು ಮತ್ತೊಬ್ಬನ ಹೆಸರು ಬಾಯಿಬಿಟ್ಟಿದ್ದಾರೆ. 65 ವರ್ಷದ ಬಲ್​ಬೀರ್​ ಸಿಂಗ್ ಕೂಡ ಈ ಅಕ್ರಮ ಪಾಸ್​ಪೋರ್ಟ್​ ವೀಸಾ ಸೃಷ್ಟಿಸುವ ಗ್ಯಾಂಗ್​ನಲ್ಲಿ ಇರುವ ಬಗ್ಗೆ ಹಾಗೂ ಭಾಗಶಃ ಅವನೇ ಇದನ್ನೆಲ್ಲವನ್ನನು ನೋಡಿಕೊಳ್ಳುವ ಬಗ್ಗೆ ಬಾಯಿಬಿಟ್ಟಿದ್ದಾರೆ ಆರೋಪಿಗಳು. ಅವನನ್ನು ಬಂಧಿಸಿ ಕರೆತಂದು ವಿಚಾರಿಸಿದಾಗ ಅವನು ಮತ್ತೊಬ್ಬನ ಹೆಸರು ಬಾಯಿಬಿಟ್ಟಿದ್ದಾನೆ. ಆತನ ಹೆಸರು ಜಸ್ವಿಂದರ್​ ಸಿಂಗ್​ ಜಸ್ವಿಂದರ್​ನನ್ನು ಬಂಧನ ಮಾಡಿ ವಿಚಾರ ಮಾಡಿದಾಗ ಅವನ ಬಾಯಿಂದ ಬಂದ ಮತ್ತೊಂದು ಹೆಸರು ಮನೋಜ್ ಮೋಂಗಾ. ಈ ಇಡೀ ವ್ಯವಸ್ಥೆಯನ್ನು ನೋಡಿಕೊಳ್ಳುವುದೇ ಅವನು. ಅವನ ಕೈಯಲ್ಲಿಯೇ ಈ ರೀತಿಯ ಡುಪ್ಲಿಕೇಟ್ ಪಾಸ್​ಪೋರ್ಟ್ ಹಾಗೂ ವಿಸಾಗಳು ಸಿದ್ಧಗೊಳ್ಳುತ್ತವೆ. ಈ ಗ್ಯಾಂಗ್ ಕೇವಲ 20 ನಿಮಿಷದಲ್ಲಿ ಫೇಕ್‌ ವೀಸಾ ಸ್ಟಿಕ್ಕರ್ ತಯಾರಿಸುತ್ತಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

20 ನಿಮಿಷ.. ₹10 ಲಕ್ಷ ಕೊಟ್ರೆ ವೀಸಾ ರೆಡಿ; ಖತರ್ನಾಕ್ ಗ್ಯಾಂಗ್ ಪ್ಲಾನ್‌ಗೆ ಬೆಚ್ಚಿ ಬಿದ್ದ ದೆಹಲಿ ಪೊಲೀಸರು!

https://newsfirstlive.com/wp-content/uploads/2024/09/India-Fake-Visa-Passport.jpg

Load More