newsfirstkannada.com

ಚಂದನ್, ಯುವ ಬೆನ್ನಲ್ಲೇ ದುನಿಯಾ ವಿಜಯ್‌ ಡಿವೋರ್ಸ್ ಸದ್ದು.. ಕೋರ್ಟ್‌ನಿಂದ ಬಿಗ್‌ ಶಾಕ್‌!

Share :

Published June 13, 2024 at 4:20pm

Update June 13, 2024 at 4:29pm

  ನಾಗರತ್ನ ವಿರುದ್ಧ ಗಂಭೀರ ಆರೋಪ ಮಾಡಿದ್ದ ದುನಿಯಾ ವಿಜಯ್

  ವಿಚ್ಛೇದನಾ ಕೋರಿ ಫ್ಯಾಮಿಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದ ನಟ

  ದುನಿಯಾ ವಿಜಯ್ ಡಿವೋರ್ಸ್‌ ಕೇಸ್‌ಗೆ ಫ್ಯಾಮಿಲಿ ಕೋರ್ಟ್ ತೀರ್ಪು

ಬೆಂಗಳೂರು: ಸ್ಯಾಂಡಲ್‌ವುಡ್‌ನಲ್ಲಿ ಅದ್ಯಾಕೋ ಬರೀ ಡಿವೋರ್ಸ್‌ ಕೇಸ್‌ಗಳೇ ಸದ್ದು ಮಾಡ್ತಿದೆ. ನಟ ಚಂದನ್ ಶೆಟ್ಟಿ, ನಿವೇದಿತಾ ಗೌಡ ವಿಚ್ಛೇದನ ಪಡೆದಿದ್ದಾಯ್ತು. ದೊಡ್ಮನೆ ಮಗ ಯುವ ರಾಜ್‌ಕುಮಾರ್‌ ಅವರು ಕೂಡ ಡಿವೋರ್ಸ್‌ಗೆ ಕೋರ್ಟ್‌ ಮೆಟ್ಟಿಲೇರಿದ್ದಾರೆ. ಇದೀಗ ನಟ ದುನಿಯಾ ವಿಜಯ್ ಅವರಿಗೆ ನ್ಯಾಯಾಲಯ ಬಿಗ್ ಶಾಕ್ ಕೊಟ್ಟಿದೆ.

ಪತ್ನಿ ನಾಗರತ್ನ ಅವರ ವಿರುದ್ಧ ಗಂಭೀರ ಆರೋಪ ಮಾಡಿದ್ದ ದುನಿಯಾ ವಿಜಯ್ ಅವರು ವಿಚ್ಛೇದನಾ ಕೋರಿ ಫ್ಯಾಮಿಲಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಆದರೆ ಆರೋಪ ಸಾಬೀತು ಮಾಡಲು ವಿಜಯ್ ಅವರು ವಿಫಲ ಆಗಿದ್ದಾರೆ.

ಆರೋಪ ಸಾಬೀತಾಗುವಲ್ಲಿ ವಿಫಲವಾದ ಹಿನ್ನೆಲೆಯಲ್ಲಿ ನಟ ದುನಿಯಾ ವಿಜಯ್ ಅವರ ಡಿವೋರ್ಸ್ ಅರ್ಜಿಯನ್ನು ನ್ಯಾಯಾಲಯ ವಜಾ ಮಾಡಿದೆ. ಹಲವಾರು ವರ್ಷಗಳಿಂದ ನಡೆಯುತ್ತಿದ್ದ ಈ ಅರ್ಜಿ ವಿಚಾರಣೆಯಲ್ಲಿ ಇಂದು ನ್ಯಾಯಾಲಯ ದುನಿಯಾ ವಿಜಯ್ ಅವರ ಅರ್ಜಿಯನ್ನು ವಜಾ ಮಾಡಿ ಆದೇಶ ನೀಡಿದೆ.

ಇದನ್ನೂ ಓದಿ: VIDEO: ಪವಿತ್ರಾ ಇಂಥಾ ಚಿಲ್ಲರೆ ಕೆಲ್ಸ ಮಾಡಲ್ಲ.. ರೇಣುಕಾಸ್ವಾಮಿ ಹತ್ಯೆ ಬಗ್ಗೆ ಮಾಜಿ ಪತಿ ಸಂಜಯ್​ ಪ್ರತಿಕ್ರಿಯೆ ​ 

ಫ್ಯಾಮಿಲಿ ಕೋರ್ಟ್ ತೀರ್ಪು ನೀಡಿದ ಹಿನ್ನೆಲೆಯಲ್ಲಿ ದುನಿಯಾ ವಿಜಯ್ ಪರ ವಕೀಲರು ಪ್ರತಿಕ್ರಿಯೆ ನೀಡಿದ್ದಾರೆ. ದುನಿಯಾ ವಿಜಯ್ ಅವರು ಸದ್ಯ ಸಿನಿಮಾ ಶೂಟಿಂಗ್‌ನಲ್ಲಿದ್ದಾರೆ. ನ್ಯಾಯಾಲಯದ ಇಂದಿನ ತೀರ್ಪು ಅಂತ್ಯವಲ್ಲ. ದುನಿಯಾ ವಿಜಯ್ ಅವರ ಜೊತೆ ಮಾತನಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಸ್ಪಷ್ಪಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದನ್, ಯುವ ಬೆನ್ನಲ್ಲೇ ದುನಿಯಾ ವಿಜಯ್‌ ಡಿವೋರ್ಸ್ ಸದ್ದು.. ಕೋರ್ಟ್‌ನಿಂದ ಬಿಗ್‌ ಶಾಕ್‌!

https://newsfirstlive.com/wp-content/uploads/2024/01/DUNIYA_VIJAY-2.jpg

Load More