newsfirstkannada.com

ಮದುವೆಯಾಗಿ 2 ಮಕ್ಕಳಾದ ಮೇಲೆ ಎರಡನೇ ಹೆಂಡತಿ ಬೇಡವಂತೆ; ಪತ್ನಿಗೆ ಕಿರುಕುಳ, ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ

Share :

08-09-2023

    ಆಸ್ತಿಗಾಗಿ ಎರಡನೇ ಮದುವೆಯಾಗಿದ್ದ ಗಂಡ ಸುರೇಶ್

    ಮನೆ ಬಿಟ್ಟು ಹೋಗುವಂತೆ ಎರಡನೇ ಪತ್ನಿ ಜೊತೆ ಗಲಾಟೆ

    ದೂರು ದಾಖಲಿಸಿದರೂ ಪೊಲೀಸರಿಂದ ನಿರ್ಲಕ್ಷ್ಯ ಆರೋಪ!

ಬೆಂಗಳೂರು: ಎರಡನೇ ಹೆಂಡತಿಯ ಮೇಲೆ ಮೊದಲನೇ ಹೆಂಡತಿ ಮಗನಿಂದ ಹಲ್ಲೆ ನಡೆಸಿರೋ ಘಟನೆ ಕೊತ್ತನೂರು ಠಾಣಾ ವ್ಯಾಪ್ತಿಯ ಹನುಮಂತ ನಗರದಲ್ಲಿ ನಡೆದಿದೆ. ಸುರೇಶ್ ಎಂಬಾತ ಆರತಿ ಹಾಗೂ ಸರಸ್ವತಿ ಎಂಬುವರನ್ನ ಮದುವೆಯಾಗಿದ್ದ. ಆಸ್ತಿಗಾಗಿ ಸುರೇಶ್ ಎಂಬಾತ ಎರಡನೇ ಮದುವೆಯಾಗಿದ್ದ. ಎರಡು ಮದುವೆಯಾಗಿ ಒಂದು ಬಿಲ್ಡಿಂಗ್ ಬೇರೆ ಬೇರೆ ಮನೆಯಲ್ಲಿ ಜೀವನ ನಡೆಸುತ್ತಿದ್ದ.

ಇತ್ತೀಚೆಗೆ ಮನೆ ಬಿಟ್ಟೋಗುವಂತೆ ಎರಡನೇ ಹೆಂಡತಿಗೆ ವಿಪರೀತ ಕಿರುಕುಳ ನೀಡುತ್ತಿದ್ದನಂತೆ. ಇದೇ ವಿಚಾರಕ್ಕೆ ಪ್ರತಿದಿನ ಗಲಾಟೆ ಮಾಡುತ್ತಿದ್ದರಂತೆ. ಹೀಗೆ ಮೊದಲನೇ ಹೆಂಡತಿ ಹಾಗೂ ಮಕ್ಕಳಿಂದ ಕಿರಿಕ್ ಜಾಸ್ತಿಯಾಗಿದೆ. ಇದನ್ನ ಪ್ರಶ್ನಿಸಿದ್ದಕ್ಕೆ ಎರಡನೇ ಹೆಂಡತಿ ಸರಸ್ವತಿ ಮೇಲೆ ಮೊದಲನೇ ಹೆಂಡತಿ ಮಗ ವರ್ಷಿತ್ ಹಲ್ಲೆ ಮಾಡಿದ್ದಾನೆ ಎನ್ನಲಾಗಿದೆ.

ಈ ವೇಳೆ ಜಗಳ ಬಿಡಿಸಲು ಬಂದ ಚಿಕ್ಕಪ್ಪನ ಮೇಲೂ ರಾಡ್​ನಿಂದ ಹಲ್ಲೆ ನಡೆಸಿದ್ದಾನೆ. ಈ ಗಲಾಟೆಯ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಇನ್ನೂ, ಈ ಸಂಬಂಧ ದೂರು ದಾಖಲಿಸಿದ್ದರೂ ಕ್ರಮ ಕೈಗೊಳ್ಳದೇ ಕೊತ್ತನೂರು ಪೊಲೀಸರು ನಿರ್ಲಕ್ಷ ತೋರುತ್ತಿದ್ದಾರೆಂದು ಎಂದು ಸರಸ್ವತಿ ಆರೋಪಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮದುವೆಯಾಗಿ 2 ಮಕ್ಕಳಾದ ಮೇಲೆ ಎರಡನೇ ಹೆಂಡತಿ ಬೇಡವಂತೆ; ಪತ್ನಿಗೆ ಕಿರುಕುಳ, ಹಲ್ಲೆ ದೃಶ್ಯ ಸಿಸಿಟಿವಿಯಲ್ಲಿ ಸೆರೆ

https://newsfirstlive.com/wp-content/uploads/2023/09/bng-7.jpg

Load More