newsfirstkannada.com

ರೇಣುಕಾಸ್ವಾಮಿ ಕೊಲೆ ಕೇಸ್‌.. ಜೈಲಲ್ಲಿ A5 ಭೇಟಿಯಾದ ಕುಟುಂಬಸ್ಥರಿಗೆ ಬಿಗ್ ಶಾಕ್‌; ಹೇಳಿದ್ದೇನು?

Share :

Published July 4, 2024 at 1:15pm

  ಜೈಲಿನಲ್ಲಿ A5 ನಂದೀಶ್ ಅವರನ್ನು ಭೇಟಿಯಾದ ಕುಟುಂಬಸ್ಥರು

  ನಂದೀಶ್ ಬಂಧನವಾದ ಬಳಿಕ ತಾಯಿ ಭಾಗ್ಯಮ್ಮ ಅಸ್ವಸ್ಥರಾಗಿದ್ದರು

  ದರ್ಶನ್ ಅವರೇ ನಮ್ಮ ನೆರವಿಗೆ ಬರ್ತಾರೆ ಅಂದುಕೊಂಡಿದ್ದೇವೆ

ಮಂಡ್ಯ: ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್ ಅಂಡ್ ಗ್ಯಾಂಗ್‌ ನ್ಯಾಯಾಂಗ ಬಂಧನದ ಅವಧಿ ಇಂದು ಅಂತ್ಯವಾಗಲಿದೆ. ಆರೋಪಿಗಳನ್ನು ಜೈಲಿನಲ್ಲೇ ಮತ್ತೆ ನ್ಯಾಯಾಧೀಶರ ಮುಂದೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸಲಾಗುತ್ತಿದೆ. ಕೋರ್ಟ್‌ ವಿಚಾರಣೆ ನಡೆಯುವ ವೇಳೆ ಆರೋಪಿಗಳ ಕುಟುಂಬಸ್ಥರು ವಕೀಲರನ್ನು ನೇಮಿಸಿಕೊಳ್ಳಲಾಗದೇ ಕಂಗಾಲಾಗಿದ್ದಾರೆ. ಜೈಲಿನಲ್ಲಿ A5 ನಂದೀಶ್ ಅವರನ್ನು ಭೇಟಿಯಾದ ಕುಟುಂಬಸ್ಥರು ತಮ್ಮ ನೋವು ಹಂಚಿಕೊಂಡಿದ್ದಾರೆ.

ಮಂಡ್ಯದ ಚಾಮಲಾಪುರದಲ್ಲಿ ನಂದೀಶ್ ಅಕ್ಕ ನಂದಿನಿ‌ ಅವರು ಜೈಲಿನಲ್ಲಿ ತಮ್ಮನನ್ನು ಭೇಟಿಯಾದ ಬಗ್ಗೆ ಮಾತನಾಡಿದ್ದಾರೆ. ನನ್ನ ತಮ್ಮನನ್ನು ಜೈಲಲ್ಲಿ ನೋಡಿ ತುಂಬಾ ನೋವಾಯಿತು. ಕೊಲೆ ಕೇಸ್‌ ಬಗ್ಗೆ ನಂದೀಶ್‌ ಅನ್ನು ನಾವು ಏನು ಕೇಳಿಲ್ಲ. ಅವನು ಅಪ್ಪ-ಅಮ್ಮನ ಆರೋಗ್ಯವನ್ನು ವಿಚಾರಿಸಿದ ಅಷ್ಟೇ. ನನ್ನ ಮಕ್ಕಳ ಜೊತೆ ಮಾತಾಡುವಾಗ ನಂದೀಶ್ ಕಣ್ಣೀರು ಹಾಕಿದ. ನಾವು ಅವನಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದೇವೆ ಎಂದಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನಲ್ಲಿರುವ A5 ನಂದೀಶ್ ಅವರನ್ನು ತಂದೆ, ತಾಯಿ, ಅಕ್ಕ ಹಾಗೂ ಅಕ್ಕನ ಮಕ್ಕಳು ಭೇಟಿ ಮಾಡಿದ್ದಾರೆ. ನಂದೀಶ್ ಬಂಧನವಾದ ಬಳಿಕ ತಾಯಿ ಭಾಗ್ಯಮ್ಮ ಆತಂಕಗೊಂಡು ಅಸ್ವಸ್ಥರಾಗಿದ್ದರು. ಇದೀಗ ನಂದೀಶ್ ಭೇಟಿ ಬಳಿಕ ತಾಯಿ ಭಾಗ್ಯಮ್ಮ ಆರೋಗ್ಯದಲ್ಲಿ ಅಲ್ಪ ಚೇತರಿಕೆ ಕಂಡಿದೆ.

ವಕೀಲರನ್ನು ನೇಮಿಸಲು ಪರದಾಟ!
A5 ನಂದೀಶ್ ಪರ ವಾದಿಸಲು ವಕೀಲರನ್ನು ನೇಮಕ ಮಾಡಿಲ್ಲ ಕುಟುಂಬಸ್ಥರು ಪರದಾಡುತ್ತಿದ್ದಾರೆ. ನಮಗೆ ಹಣಕಾಸು ಸೌಲಭ್ಯವಿಲ್ಲ. ಸಾಲ ಮಾಡಿಕೊಂಡು ವಕೀಲರ ನೇಮಕ ಮಾಡಬೇಕು. ನಟ ದರ್ಶನ್ ಅವರೇ ನಮ್ಮ ನೆರವಿಗೆ ಬರ್ತಾರೆ ಅಂದುಕೊಂಡಿದ್ದೇವೆ. ಇದುವರೆಗೆ ದರ್ಶನ್ ಕಡೆಯವರು ಯಾರು ಬಂದಿಲ್ಲ. ನಾವು ಈಗಲೂ ಕೂಲಿ ಮಾಡಿಕೊಂಡೇ ಜೀವನ ಮಾಡುತ್ತಾ ಇದ್ದೀವಿ. ನಂದೀಶ್ ಜೈಲಿನಿಂದ ಬರುವವರೆಗೆ ಕೂಲಿ ಮಾಡಿಕೊಂಡು ಜೀವನ ಮಾಡುತ್ತೇವೆ ಎಂದು ಕುಟುಂಬಸ್ಥರು ಹೇಳಿದ್ದಾರೆ.

ಇದನ್ನೂ ಓದಿ: ನಟ ದರ್ಶನ್​​, ಪವಿತ್ರಾ ಸ್ನೇಹಿತೆ ಜತೆ ಸುಮಾರು 15 ನಿಮಿಷ ಮಾತುಕತೆ; ಜೈಲಲ್ಲಿ ನಡೆದಿದ್ದೇ ಬೇರೆ..! 

ಬೇರೆಯವರ ಜಮೀನಲ್ಲಿ ಕೆಲಸ ಮಾಡಿಕೊಂಡು ಜೀವನ ಮಾಡುತ್ತಿದ್ದೇವೆ. ಜೈಲಿಗೆ ಹೋದಾಗ ಏನಾಯ್ತು ಅಂತ ಕೇಳಿದಾಗ ನಂದೀಶ್ ಏನು ಮಾತಾಡಿಲ್ಲ. ನಮ್ಮ ಅಮ್ಮನ ಆರೋಗ್ಯ ಸರಿ‌ ಇಲ್ಲ. ಅಮ್ಮನನ್ನು ಸಮಾಧಾನ ಮಾಡುವ ಕೆಲಸ ಮಾಡಿದ್ದಾನೆ. ದರ್ಶನ್ ಕಡೆಯವರು ಏನು ಮಾಡುತ್ತಾ ಇದ್ದಾರೆ ಅಂತಾ ಗೊತ್ತಿಲ್ಲ. ಅವರು ಸಹಾಯ ಮಾಡುತ್ತಾರೆ ಎಂಬ ನಿರೀಕ್ಷೆ ಇದೆ. ನಮಗೆ ಬೇರೆ ಏನು ಬೇಡ ನಂದೀಶ್‌ ಅನ್ನು ಮನೆಗೆ ಕಳಿಸಿದರೆ ಸಾಕು ಎಂದು ಸಹೋದರಿ ನಂದಿನಿ ಬೇಡಿಕೊಂಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ರೇಣುಕಾಸ್ವಾಮಿ ಕೊಲೆ ಕೇಸ್‌.. ಜೈಲಲ್ಲಿ A5 ಭೇಟಿಯಾದ ಕುಟುಂಬಸ್ಥರಿಗೆ ಬಿಗ್ ಶಾಕ್‌; ಹೇಳಿದ್ದೇನು?

https://newsfirstlive.com/wp-content/uploads/2024/06/darshan-nandish.jpg

Load More