newsfirstkannada.com

3 ವರ್ಷ ಹುಡುಕಿದ್ರೂ ಸುಳಿವೇ ಸಿಗಲಿಲ್ಲ.. ಕಳೆದು ಹೋಗಿದ್ದ ಮುದ್ದಿನ ಶ್ವಾನ ಮರಳಿ ಮನೆಗೆ ಬಂದಿದ್ದು ಹೇಗೆ ಗೊತ್ತಾ?

Share :

13-08-2023

    ಪ್ರೀತಿಯ ಶ್ವಾನಕ್ಕಾಗಿ ಈ ದಂಪತಿ ಊರೂರು ಅಲೆದಾಟ

    3 ವರ್ಷದ ಬಳಿಕ ಶ್ವಾನ ಪಿಟ್ ಬುಲ್‌ ಸಿಕ್ಕಿದ್ದೇ ರೋಚಕ

    ಶ್ವಾನ ಪ್ರಿಯರೇ ನೀವೆಲ್ಲಾ ಓದಲೇಬೇಕಾದ ಸ್ಟೋರಿ ಇದು

ನಿಷ್ಠೆ ಪ್ರಾಮಾಣಿಕತೆಗೆ ಮತ್ತೊಂದು ಹೆಸರೇ ಶ್ವಾನ. ಸಾಕು ಪ್ರಾಣಿಗಳೆಂದರೆ ಯಾರಿಗೆ ತಾನೇ ಇಷ್ಟ ಇಲ್ಲ ಹೇಳಿ. ಬೆಕ್ಕು, ನಾಯಿ, ಮೊಲ, ಕುರಿ, ಹಸು ಹೀಗೆ ಹತ್ತು ಹಲವು ಪ್ರಾಣಿಗಳನ್ನು ಇತ್ತೀಚಿನ ದಿನಗಳಲ್ಲಿ ಜನರು ತಮ್ಮ ತಮ್ಮ ಮನೆಯಲ್ಲಿ ಸಾಕುವುದುಂಟು. ಅದರಲ್ಲೂ ಸಾಕು ಪ್ರಾಣಿಗಳಲ್ಲಿ ಖ್ಯಾತಿ ಪಡೆದಿರೋ ಸಾಕು ನಾಯಿಗಳನ್ನು ಮನೆ ಮಾಲೀಕರು ಖರೀದಿ ಮಾಡುತ್ತಾರೆ.  ಖರೀದಿ ಮಾಡಿ ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಾರೆ. ಮನೆಗೊಂದು ಮರ ಊರಿಗೊಂದು ವನ ಎಂಬ ಗಾದೆ ಮಾತಿನಂತೆ ಎಲ್ಲರ ಮನೆಯಲ್ಲೂ ನಾಯಿ. ಒಂದು ತುತ್ತು ಅನ್ನ ಹಾಕಿದರೆ ಸಾಕು ಇಡೀ ಜನ್ಮಪೂರ್ತಿ ನಮ್ಮ ಜೊತೆ ಇರೋ ಏಕೈಕ ಪ್ರಾಣಿ ಎಂದರೆ ಅದು ಶ್ವಾನ. ಇದಕ್ಕೆ ಸಾಕ್ಷಿ ಎಂಬಂತೆ ಕಳೆದುಹೋದ ಶ್ವಾನವೊಂದು 3 ವರ್ಷಗಳ ಬಳಿಕ ಮಾಲೀಕನಿಗೆ ಸಿಕ್ಕಿದ್ದೇ ಸಖತ್ ಇಂಟ್ರೆಸ್ಟಿಂಗ್ ಆಗಿದೆ.
ರೆಕ್ಸ್ ಮತ್ತು ಬ್ರಿಟ್ನಿ ಸ್ಮಿತ್ ದಂಪತಿಯು ಜ್ಯಾಕ್ ಮತ್ತು ಜಿಲ್ ಪಿಟ್ ಬುಲ್‌ಗಳನ್ನು ಸಾಕಿದ್ದರು. ಆದರೆ ಜುಲೈ 2020ರಲ್ಲಿ ಈ ಎರಡು ನಾಯಿಗಳು ನಾಪತ್ತೆಯಾಗಿದ್ದವು. ಜ್ಯಾಕ್ ಹಾಗೂ ಜಿಲ್​​ ಎಂಬ ಹೆಸರಿನ ಎರಡು ಪ್ರೀತಿಯ 5 ವರ್ಷ ವಯಸ್ಸಿನ ನಾಯಿಗಳನ್ನು ಕಳೆದುಕೊಂಡ ದಂಪತಿಯು ಅತಿಯಾದ ದುಃಖವನ್ನು ಪಟ್ಟಿದ್ದರು. ದಂಪತಿಗಳು ತಮ್ಮ ಪ್ರೀತಿಯ ನಾಯಿಗಳನ್ನು ಎಲ್ಲ ಕಡೆ ಹುಡುಕಲು ಶುರು ಮಾಡಿದರು. ನೆರೆಹೊರೆಯಲ್ಲಿ ಮನೆ ಮನೆಗೆ ಹೋಗಿ ಕೇಳುವುದು, ಪೋಸ್ಟರ್‌ಗಳನ್ನು ಅಂಟಿಸುವುದು, ಪ್ರಾಣಿಗಳ ಆಶ್ರಯ ಮತ್ತು ವೆಟ್ಸ್ ಕಚೇರಿಗಳಿಗೆ ವಿಷಯ ಮುಟ್ಟಿಸಿದ್ದರು. ಜೊತೆಗೆ ಸೋಷಿಯಲ್​ ಮಿಡಿಯಾದಲ್ಲಿ ಈ ಬಗ್ಗೆ ಮಾಹಿತಿ ಹಂಚಿಕೊಂಡಿದ್ದರು. ಆದರೆ ಅದು ಯಾವುದೇ ಪ್ರಯೋಜನಕ್ಕೆ ಬಾರಲೇ ಇಲ್ಲ. ಇನ್ನು ನಮ್ಮ ನಾಯಿಗಳು ಸಿಗುವುದಿಲ್ಲ ಎಂದು ತಿಳಿದ ದಂಪತಿ ಹುಡುಕುವ ಪ್ರಯತ್ನವನ್ನೇ ಕೈ ಬಿಟ್ಟರು.
ಬಳಿಕ ದಂಪತಿಯು ಟೆಕ್ಸಾಸ್‌ನ ಮೆಕಿನ್ನೆಗೆ ತಮ್ಮ ಮನೆಯನ್ನು ಸ್ಥಳಾಂತರಿಸಬೇಕಾಯಿತು. ಆದರೆ ವಿಶೇಷ ಎಂದರೆ ದಂಪತಿಯು ನಾಯಿ ಚಿಕ್ಕ ವಯಸ್ಸಿನಲ್ಲಿದ್ದಾಗ ಅದಕ್ಕೆ ಮೈಕ್ರೋಚಿಪ್‌ಗಳನ್ನು ಅಳವಡಿಸಿದ್ದರು. ಜುಲೈ 2020ರಲ್ಲಿ ಕಳೆದು ಹೋಗಿದ್ದ ಒಂದು ನಾಯಿಯು 3 ವರ್ಷಗಳ ನಂತರ ಪತ್ತೆಯಾಗಿದ್ದು ಕೇವಲ ಈ ಮೈಕ್ರೋಚಿಪ್‌​ನಿಂದ. ಮೈಕ್ರೋ ಚಿಪ್‌ನ ಸಹಾಯದಿಂದ ಮತ್ತು ಎಲ್ಲಾ ಸಾಕುಪ್ರಾಣಿಗಳ ಕೇಂದ್ರೀಕೃತ ಡೇಟಾಬೇಸ್ ಅನ್ನು ರಚಿಸುವ ಮೂಲಕ ಮಾಲೀಕರು ತಮ್ಮ ಸಾಕುಪ್ರಾಣಿಗಳನ್ನು ಕಳ್ಳರಿಂದ ಅಥವಾ ಕಳೆದು ಹೋದರೆ ಅದನ್ನು ಕಂಡು ಹಿಡಿಯಬಹುದಾಗಿದೆ. ಇದೇ ಮೈಕ್ರೊಚಿಪ್‌ನಿಂದ ದಂಪತಿಯ ನಾಯಿ ಪತ್ತೆಯಾಗಿದೆ. ನಾಯಿ ಕಳೆದ ದಿನ ದಂಪತಿಯು ಪೊಲೀಸ್​ ಠಾಣೆಗೆ ದೂರನ್ನು ನೀಡಿದ್ದರು. 3 ವರ್ಷಗಳ ನಂತರ ಈ ನಾಯಿ ಪತ್ತೆಯಾಗಿದೆ. ಈ ವಿಷಯ ತಿಳಿಯುತ್ತಿದ್ದಂತೆ ದಂಪತಿ ಫುಲ್​ ಖುಷ್​ ಆಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

3 ವರ್ಷ ಹುಡುಕಿದ್ರೂ ಸುಳಿವೇ ಸಿಗಲಿಲ್ಲ.. ಕಳೆದು ಹೋಗಿದ್ದ ಮುದ್ದಿನ ಶ್ವಾನ ಮರಳಿ ಮನೆಗೆ ಬಂದಿದ್ದು ಹೇಗೆ ಗೊತ್ತಾ?

https://newsfirstlive.com/wp-content/uploads/2023/08/dog-1.jpg

Load More