ಘಟನಾ ಸ್ಥಳಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭೇಟಿ
50,000 ನೀಡಿ, ಸರ್ಕಾರದಿಂದ ಪರಿಹಾರದ ಭರವಸೆ
ಕಟ್ಟಡ ಮಾಲೀಕ, ಅಧಿಕಾರಿಗಳು ಸ್ಥಳಕ್ಕೆ ಬರುವಂತೆ ಪಟ್ಟು
ಬೆಳಗಾವಿ: ವಿದ್ಯುತ್ ತಂತಿ ಸ್ಪರ್ಶಿಸಿ ಒಂದೇ ಕುಟುಂಬದ ಮೂವರು ಸಾವನ್ನಪ್ಪಿರುವ ದಾರುಣ ಘಟನೆ ಶಾಹುನಗರದ ಮೊದಲನೇ ಕ್ರಾಸ್‌ನಲ್ಲಿ ನಡೆದಿದೆ. ಈರಪ್ಪ ಗಂಗಪ್ಪ ರಾಥೋಡ (55) ಶಾಂತವ್ವ ಈರಪ್ಪ ರಾಥೋಢ 50) ಅನ್ನಪೂರ್ಣ ಹೊನ್ನಪ್ಪ ಲಮಾಣಿ (8) ವಿದ್ಯುತ್ ಶಾಕ್ ತಗುಲಿ ಸಾವನ್ನಪ್ಪಿದ್ದಾರೆ.
ಮೃತರು ಬೆಳಗಾವಿ ಜಿಲ್ಲೆಯ ರಾಮದುರ್ಗ ತಾಲೂಕಿನ ಅರಗಂಚಿ ತಾಂಡಾದ ನಿವಾಸಿಗಳಾಗಿದ್ದರು. ನಿರ್ಮಾಣ ಹಂತದ ಕಟ್ಟದ ಬೋರ್ವೆಲ್ಗೆ ಅಳವಡಿಸಲು ಎಳೆದಿದ್ದ ವಿದ್ಯುತ್ ಲೈನ್ನಿಂದ ಶಾಕ್ ತಗುಲಿ ಸಾವನ್ನಪ್ಪಿದ್ದಾರೆ. ಮೃತ ದಂಪತಿ, ನಿರ್ಮಾಣ ಹಂತದ ಮನೆಗೆ ಕಾವಲುಗಾರರಾಗಿ ಕೆಲಸ ಮಾಡುತ್ತಿತ್ತು. ಇನ್ನು ಮೊಮ್ಮಗಳಾದ ಅನ್ನಪೂರ್ಣರನ್ನು ಸ್ಕೂಲಿಗೆ ಕಳುಹಿಸಲು ತಮ್ಮ ಬಳಿಯೇ ಇಟ್ಟುಕೊಂಡು ನೋಡಿಕೊಳ್ಳುತ್ತಿದ್ದರು.
ವಿಷಯ ತಿಳಿಯುತ್ತಿದ್ದಂತೆಯೇ ಘಟನಾ ಸ್ಥಳಕ್ಕೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ ಭೇಟಿ ನೀಡಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದರು. ಈ ವೇಳೆ ಮಾಜಿ ಶಾಸಕ ಅನಿಲ ಬೆನಕೆ ಕೂಡ ಇದ್ದರು. ಹೆಬ್ಬಾಳ್ಕರ್, ಮೃತರ ಕುಟುಂಬಕ್ಕೆ ತಲಾ 50 ಸಾವಿರ ರೂಪಾಯಿ ಹಣವನ್ನು ನೀಡಿದರು. ಬಳಿಕ ಮಾತನಾಡಿದ ಹೆಬ್ಬಾಳ್ಕರ್, ಇದೊಂದು ದೊಡ್ಡ ದುರ್ಘಟನೆ, ಕಷ್ಟಪಟ್ಟು ದುಡಿದು ತಿನ್ನುತ್ತಿದ್ದರು. ದೇವರು ಕೂಡ ಒಮ್ಮೊಮ್ಮೆ ಬಹಳ ಹೃದಯಹೀನ ಆಗಿಬಿಡ್ತಾನೆ. ಸರ್ಕಾರದಿಂದ ಪರಿಹಾರ ಕೊಡಿಸುವ ಪ್ರಯತ್ನ ಮಾಡ್ತೀನಿ ಎಂದರು.
ಪಟ್ಟು ಹಿಡಿದ ಕುಟುಂಬಸ್ಥರು
ದುರ್ಘಟನಾ ಸ್ಥಳಕ್ಕೆ ಕಟ್ಟಡದ ಮಾಲೀಕ, ಇಂಜಿನಿಯರ್ ಬರುವಂತೆ ಕುಟುಂಬಸ್ಥರ ಪಟ್ಟು ಹಿಡಿದು ಕೂತಿದ್ದಾರೆ. ಮಾತ್ರವಲ್ಲ, ಸ್ಥಳದಲ್ಲೇ ಪರಿಹಾರ ನೀಡುವಂತೆಯೂ ಒತ್ತಾಯ ಮಾಡಿದ್ದಾರೆ. ಅಲ್ಲಿವರೆಗೂ ಮೃತದೇಹವನ್ನು ತೆಗೆದುಕೊಂಡು ಹೋಗುವುದಿಲ್ಲ ಎಂದು ಪಟ್ಟು ಹಿಡಿದಿದ್ದಾರೆ. ಈ ವೇಳೆ ನೂಕಾಟ-ತಳ್ಳಾಟ ಕೂಡ ನಡೆಯಿತು. ಇದರ ಮಧ್ಯೆ ಪೊಲೀಸರು ಅವರನ್ನು ಮನವೊಲಿಸುವ ಪ್ರಯತ್ನ ಮಾಡುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ