/newsfirstlive-kannada/media/post_attachments/wp-content/uploads/2024/03/Bigg-Boss-Winner.jpg)
ಭಾರತದ ಕೆಲವು ರಿಯಾಲಿಟಿ ಶೋಗಳ ಪೈಕಿ ಬಿಗ್​ ಬಾಸ್ ಶೋ ಕೂಡ ಒಂದು. ಈ ಕಾರ್ಯಕ್ರಮ ತನ್ನದೇ ಆದ ಛಾಪು ಮೂಡಿಸಿದೆ. ಆಯಾಯ ಭಾಷೆಯಲ್ಲಿ ಖ್ಯಾತ ನಟರುಗಳು ಈ ಕಾರ್ಯಕ್ರಮವನ್ನು ಹೋಸ್ಟ್ ಮಾಡುತ್ತಾ ಬಂದಿದ್ದಾರೆ. ಆದರೆ ಈ ಬಾರಿ ತಮಿಳಿನಲ್ಲಿ ಬಿಗ್​ ಬಾಸ್​ ಕಾರ್ಯಕ್ರಮ ಪ್ರಾರಂಭಿಸಲು ಸಕಲ ಸಿದ್ಧತೆಗಳು ನಡೆಯುತ್ತಿವೆ. ಆದರೆ ಅದಕ್ಕೂ ಮುನ್ನ​​ ಶಾಕಿಂಗ್​ ಸುದ್ದಿ ಹೊರಬಿದ್ದಿದೆ.
ತಮಿಳಿನಲ್ಲಿ ಬಿಗ್​ ಬಾಸ್​​ ಕಾರ್ಯಕ್ರಮ 2017ರಿಂದ ಪ್ರಾರಂಭವಾಯಿತು. ಖ್ಯಾತ ನಟ ಕಮಲ್​ ಹಾಸನ್​ ಈ ಕಾರ್ಯಕ್ರಮವನ್ನು ಹೋಸ್ಟ್​ ಮಾಡುತ್ತಾ ಬಂದಿದ್ದಾರೆ. ಸತತ ಏಳು ವರ್ಷದಿಂದ ಕಾರ್ಯಕ್ರಮವನ್ನು ಮುನ್ನಡೆಸುತ್ತಾ ಬಮದಿದ್ದಾರೆ. ಆದರೆ ಈ ಬಾರಿ ಮಾತ್ರ ನಟ ಸಣ್ಣ ವಿರಾಮ ತೆಗೆದುಕೊಳ್ಳುವುದಾಗಿ ಹೇಳಿಕೊಂಡಿದ್ದಾರೆ.
/newsfirstlive-kannada/media/post_attachments/wp-content/uploads/2024/02/kamal-hasan.jpg)
ಇದನ್ನೂ ಓದಿ: ಬಾಂಗ್ಲಾದೇಶದ ಚುಕ್ಕಾಣಿ ಹಿಡಿದ ನೊಬೆಲ್ ಪುರಸ್ಕೃತ.. ಮುಹಮ್ಮದ್ ಯೂನಸ್ ಹಿನ್ನೆಲೆ ಗೊತ್ತಾ?
ತಮಿಳು ಬಿಗ್​ ಬಾಸ್​ 8ನೇ ಆವೃತ್ತಿಯನ್ನು ಹೋಸ್ಟ್​ ಮಾಡಲು ಸಾಧ್ಯವಾಗುವುದಿಲ್ಲ ಎಂದು ಕಮಲ್​ ಹಾಸನ್​ ಎಕ್ಸ್​ ಖಾತೆಯ ಮೂಲಕ ಸ್ಪಷ್ಟತೆ ನೀಡಿದ್ದಾರೆ.
என்றும் உங்கள் நான்.@vijaytelevisionpic.twitter.com/q6v0ynDaLr
— Kamal Haasan (@ikamalhaasan)
என்றும் உங்கள் நான்.@vijaytelevisionpic.twitter.com/q6v0ynDaLr
— Kamal Haasan (@ikamalhaasan) August 6, 2024
">August 6, 2024
''ನಿಮ್ಮ ಮನೆಗಳಲ್ಲಿ ನಿಮ್ಮನ್ನು ತಲುಪುವ ಸೌಭಾಗ್ಯ ನನಗೆ ಸಿಕ್ಕಿದೆ. ನಿಮ್ಮ ಪ್ರೀತಿ ಮತ್ತು ವಾತ್ಸಲ್ಯವನ್ನು ನೀವು ನನಗೆ ಧಾರೆ ಎರೆದಿದ್ದೀರಿ, ಅದಕ್ಕಾಗಿ ನಿಮಗೆ ನನ್ನ ಶಾಶ್ವತ ಕೃತಜ್ಞತೆ ಇದೆ. ವೈಯಕ್ತಿಕವಾಗಿ, ನಿಮ್ಮ ಆತಿಥೇಯರಾಗಿರುವುದೇ ಒಂದು ಶ್ರೀಮಂತ ಸಂಘವಾಗಿದೆ. ಅಲ್ಲಿ ನಾನು ನನ್ನ ಕಲಿಕೆಯನ್ನು ಪ್ರಾಮಾಣಿಕವಾಗಿ ಹಂಚಿಕೊಂಡಿದ್ದೇನೆ. ಈ ಕಲಿಕೆಯ ಅನುಭವಕ್ಕಾಗಿ ನಾನು ಯಾವಾಗಲೂ ಕೃತಜ್ಞನಾಗಿರುತ್ತೇನೆ. ನಿಮ್ಮಲ್ಲಿ ಪ್ರತಿಯೊಬ್ಬರಿಗೂ ಮತ್ತು ಕಾರ್ಯಕ್ರಮದಲ್ಲಿರುವ ಸ್ಪರ್ಧಿಗಳಿಗೆ ನಾನು ಪ್ರಾಮಾಣಿಕವಾಗಿ ಧನ್ಯವಾದ ಹೇಳುತ್ತೇನೆ’’ ಎಂದು ಎಕ್ಸ್​ನಲ್ಲಿ ಹೇಳಿದ್ದಾರೆ.
ಕಮಲ್​ ಹಾಸನ್​ ಬಿಗ್​ ಬಾಸ್​ ಕಾರ್ಯಕ್ರಮದ ನಿರೂಪಣೆಯಿಂದ ಹೊರಬರಲು ನಿಜವಾದ ಕಾರಣವೇನು ಎಂದು ತಿಳಿದುಬಂದಿಲ್ಲ. ಆದರೆ ಹರಿದಾಡುತ್ತಿರುವ ಮಾಹಿತಿ ಪ್ರಕಾರ, ಸಿನಿಮಾ ವಿಚಾರವಾಗಿ ನಟ ಬಿಗ್​ ಬಾಸ್​ ಹೋಸ್ಟ್​ನಿಂದ ಹೊರಬಂದಿದ್ದಾರೆ ಎಂಬ ವಿಚಾರ ಒಂದೆಡೆಯಾದರೆ, ಮತ್ತೊಂದೆಡೆ ಅವರ ಸಂಭಾವನೆ ಏರಿಕೆ ವಿಚಾರವಾಗಿ ಕಾರ್ಯಕ್ರಮ ತೊರೆಯಲು ಬಯಸಿದರು ಎಂದು ಹೇಳಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us