newsfirstkannada.com

2.50 ಲಕ್ಷ ರೂಪಾಯಿ ಬೆಲೆಯ ಫೈಟರ್ ರಾಕಿ ಟಗರು ಕಾಣೆ! ರಾತ್ರೋ ರಾತ್ರಿ ಕದ್ದೊಯ್ದ ಕಳ್ಳರು

Share :

29-08-2023

    ಟಗರು ಕಾಳಗ ಸ್ಪರ್ಧೆಯಲ್ಲಿ ಬಹುಮಾನ ಗೆಲ್ಲುತ್ತಿದ್ದ ಫೈಟರ್ ರಾಕಿ

    ಅಜ್ಜಪ್ಪ ಅವ್ವಣ್ಣ ಕಣಿಲ್ದಾರ ಎಂಬುವರಿಗೆ ಸೇರಿದ್ದ ಟಗರು

    ಮನೆಯಲ್ಲಿ ಕಟ್ಟಿ ಹಾಕಿದ್ದ ವೇಳೆ ಕಳ್ಳತನ ಮಾಡಿದ ದುರುಳರು

ಬೆಳಗಾವಿ: ಗೋಕಾಕ್ ಭಾಗದ ಫೈಟರ್ ರಾಕಿ ಎಂದು ಹೆಸರು ಪಡೆದಿದ್ದ ಟಗರು‌ ಕಣ್ಮರೆಯಾದ ಘಟನೆ ತಳಕಟನಾಳದಲ್ಲಿ ನಡೆದಿದೆ. ಪ್ರತಿಯೊಂದು ಟಗರು ಕಾಳಗ ಸ್ಪರ್ಧೆಯಲ್ಲಿ ಬಹುಮಾನ ಗೆಲ್ಲುತ್ತಿದ್ದ ಟಗರನ್ನು ದುಷ್ಟರು ಕಳ್ಳತನ ಮಾಡಿದ್ದಾರೆ.

ಸುಮಾರು 2.50 ಲಕ್ಷ ರೂಪಾಯಿ ಬೆಲೆ ಬಾಳುವ ಫೈಟರ್ ರಾಕಿ ಟಗರು ಕದ್ದುಕೊಂಡು ಹೋಗಿದ್ದಾರೆ. ಈ ಟಗರು ಅಜ್ಜಪ್ಪ ಅವ್ವಣ್ಣ ಕಣಿಲ್ದಾರ ಎಂಬುವರಿಗೆ ಸೇರಿದ್ದಾಗಿತ್ತು. ಮನೆಯಲ್ಲಿ ಕಟ್ಟಿ ಹಾಕಿದ್ದಾಗ ರಾತ್ರಿವೇಳೆ ದುರುಳರು ಕಳ್ಳತನ ಮಾಡಿಕೊಂಡು ಹೋಗಿದ್ದಾರೆ.

ಕಳೆದ ನಾಲ್ಕು ದಿನಗಳ ಹಿಂದ 2.50 ಲಕ್ಷ ರೂಪಾಯಿಗೆ ಫೈಟರ್ ರಾಕಿ ಟಗರು ಮೇಲೆ ಬೇಡಿಕೆ ಇಟ್ಟಿದ್ದರು. ಆದರೆ ಮಾಲೀಕ ಅಜ್ಜಪ್ಪ ಟಗರು ಮಾರಾಟ ಮಾಡಲು ನಿರಾಕರಿಸಿದ್ದನು. ಆದರೀಗ ಫೈಟರ್​ ಟಗರನ್ನು ಕಳ್ಳರು ಕದ್ದಿದ್ದಾರೆ. ಈ ಬಗ್ಗೆ ಕೂಲಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2.50 ಲಕ್ಷ ರೂಪಾಯಿ ಬೆಲೆಯ ಫೈಟರ್ ರಾಕಿ ಟಗರು ಕಾಣೆ! ರಾತ್ರೋ ರಾತ್ರಿ ಕದ್ದೊಯ್ದ ಕಳ್ಳರು

https://newsfirstlive.com/wp-content/uploads/2023/08/Fighter-Rocky.jpg

Load More