newsfirstkannada.com

ಅಬ್ಬಾ.. ಹೊಸ ಲುಕ್​ನಲ್ಲಿ ನೆಟ್ಟಿಗರ ಕಣ್ಮನ ಸೆಳೆದ ಖ್ಯಾತ ಪಾಪ್‌ ಸಿಂಗರ್; ಯಾರು ಈ ರಿಹಾನ್ನಾ?

Share :

Published June 15, 2024 at 6:11am

  ಅನಂತ್​ ಅಂಬಾನಿ ಪ್ರೀ ವೆಡ್ಡಿಂಗ್ ಕಾರ್ಯಕ್ರಮಕ್ಕೆ ಬಂದಿದ್ದ ಗಾಯಕಿ ರಿಹಾನ್ನಾ

  ಖ್ಯಾತ ಪಾಪ್‌ ಸಿಂಗರ್ ರಿಹಾನ್ನಾ ಹೊಸ ಲುಕ್​ಗೆ ಫ್ಯಾನ್ಸ್​ ಆದ್ರು ಫುಲ್​ ಫಿದಾ

  ಒಂದಲ್ಲಾ ಒಂದು ವಿಚಾರಕ್ಕೆ ಸುದ್ದಿಯಲ್ಲಿರೋ ರಿಹಾನ್ನಾ, ಹೇರ್​ ಕಟ್ ಮಾಡಿಸಿದ್ದೇಕೆ?

ಇತ್ತೀಚೆಗೆ ಗುಜುರಾತ್​ನ ಜಾಮ್‌ನಗರದಲ್ಲಿ ನಡೆದ ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್‌ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಮುಕೇಶ್ ಅಂಬಾನಿ ಮಗನ ಪ್ರೀ ವೆಡ್ಡಿಂಗ್ ಕಾರ್ಯಕ್ರಮ ನಡೆದಿತ್ತು. ಈ ಸಮಾರಂಭಕ್ಕೆ ಖ್ಯಾತ ಬಾರ್ಬಡಿಯನ್ ಗಾಯಕಿ ರಿಹಾನ್ನಾ ಅಥಿತಿಯಾಗಿ ಆಗಮಿಸಿದ್ದರು.

ಇದನ್ನೂ ಓದಿ: ದರ್ಶನ್​ ಭೇಟಿಯ ನೆಪ.. ಮನೆಯ ಆಧಾರಸ್ತಂಭವೇ ಈತ.. ರೇಣುಕಾಸ್ವಾಮಿ ಕೇಸ್​ನಲ್ಲಿ ಮತ್ತೊಬ್ಬ ಅಮಾಯಕ

ಮುಖೇಶ್​ ಅಂಬಾನಿ ಮಗ ಅನಂತ್​ ಅಂಬಾನಿ ಮದುವೆಯಲ್ಲಿ ಭಾಗವಹಿಸಿ ಹಾಡಿದ್ದರು. ಪೊಲೀಸ್​, ಪತ್ರಕರ್ತರು, ಶ್ರೀಸಾಮಾನ್ಯರೊಂದಿಗೆ ಬೆರೆಯುವ ಮೂಲಕ ಮನಗೆದ್ದಿದ್ದರು. ಬಳಿಕ ಪಾಪ್ ಸಿಂಗರ್ ಪಡೆದ ಸಂಭಾವನೆ ಸುದ್ದಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಪಾಪ್ ತಾರೆ, ನಟಿ ರಿಹಾನ್ನಾ ಅನಂತ್​ ಅಂಬಾನಿ ಮದುವೆಯಲ್ಲಿ ಶೋ ನೀಡಲು ಬರೋಬ್ಬರಿ 74 ಕೋಟಿ ಸಂಭಾವನೆ ಪಡೆದಿದ್ದರು ಎಂದು ವರದಿಯಾಗಿತ್ತು.

ಇದನ್ನೂ ಓದಿ: ರಿಹಾನ್ನಾ ಬಳಿಕ ಭಾರತಕ್ಕೆ ಬರೋ ಆಸೆ ವ್ಯಕ್ತಪಡಿಸಿದ ಹಾಲಿವುಡ್​ ಬ್ಯೂಟಿ.. ಹಂಗೆ ಬಂದು ಹಗ್​ ಮಾಡ್ತೀನಿ ಎಂದ ಚೆಲುವೆ

ಇದೀಗ ಖ್ಯಾತ ಪಾಪ್ ಸಿಂಗರ್​ ರಿಹಾನ್ನಾ ಹೊಸ ಲುಕ್​ನಲ್ಲಿ ಕಾಣಿಸಿಕೊಂಡಿದ್ದಾರೆ. ಪಾಪ್ ಸಿಂಗರ್​ ರಿಹಾನ್ನಾ ನೂತನ ಲುಕ್​ಗೆ ನೆಟ್ಟಿಗರು ಫಿದಾ ಆಗಿದ್ದಾರೆ. ಕಳೆದ ಮಾರ್ಚ್​ನಲ್ಲಿ ಉದ್ದನೆಯ ಕೂದಲಿನಲ್ಲಿ ಕಾಣಿಸಿಕೊಂಡಿದ್ದ ರಿಹಾನ್ನಾ ಈಗ ಹೇರ್ ಕಟಿಂಗ್ ಮಾಡಿಸಿಕೊಂಡು ಕ್ಯಾಮೆರಾಗೆ ಪೋಸ್​​ ಕೊಟ್ಟಿದ್ದಾರೆ. ರಿಹಾನ್ನಾ ಅವರು ಶಾರ್ಟ್​ ಹೇರ್ ಕಟಿಂಗ್ ಮಾಡಿಸಿಕೊಳ್ಳುವುದಕ್ಕೂ ಮುಖ್ಯ ಕಾರಣವೊಂದಿದೆ. ಕೂದಲು ಉದುರುವಿಕೆಯಿಂದ ಬೇಸತ್ತು ಈ ನಿರ್ಧಾರಕ್ಕೆ ಬಂದಿದ್ದಾರಂತೆ. ಇದರ ಜೊತೆಗೆ ರಿಹಾನ್ನಾ ಫೋಟೋದಲ್ಲಿ LAನಲ್ಲಿ ಫೆಂಟಿ ಹೇರ್ ಲಾಂಚ್​ನಲ್ಲಿ ಭಾಗಿಯಾಗಿದ್ದರು. ಈ ವೇಳೆ ರಿಹಾನ್ನಾ 18 ಕ್ಯಾರೆಟ್ ಚಿನ್ನದಲ್ಲಿ ರಚಿಸಲಾದ ಮತ್ತು ವಜ್ರಗಳಲ್ಲಿ ಸುತ್ತುವರಿಯಲ್ಪಟ್ಟ ಕಸ್ಟಮ್-ಕಟ್​ ನೆಕ್ಲೇಸ್ ಧರಿಸಿ ಸಖತ್​ ಸುದ್ದಿಯಾಗಿದ್ದಾರೆ.

View this post on Instagram

A post shared by RIHANNA🌶️ (@rihannachilly)

ರಿಹಾನ್ನಾ ವಿಶ್ವದ ಶ್ರೀಮಂತ ಮಹಿಳಾ ಸಂಗೀತಗಾರ್ತಿಯಾಗಿದ್ದು, ಐಷಾರಾಮಿ ಉತ್ಪನ್ನಗಳ ತಯಾರಕ ಕಂಪನಿ LVMH ಪಾಲುದಾರಿಕೆಯನ್ನು ಹೊಂದಿದ್ದು, ಜೊತೆಗೆ ಉದ್ಯಮಿಯೂ ಆಗಿದ್ದಾರೆ. ತಮ್ಮ ವೃತ್ತಿಜೀವನದ ಅವಧಿಯಲ್ಲಿ, ರಿಹಾನ್ನಾ ಅವರು 9 ಗ್ರ್ಯಾಮಿ ಪ್ರಶಸ್ತಿಗಳು, 12 ಬಿಲ್ಬೋರ್ಡ್ ಸಂಗೀತ ಪ್ರಶಸ್ತಿಗಳು, 13 ಅಮೇರಿಕನ್ ಸಂಗೀತ ಪ್ರಶಸ್ತಿಗಳು ಮತ್ತು 8 ಪೀಪಲ್ಸ್ ಚಾಯ್ಸ್ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳನ್ನು ಪಡೆದಿದ್ದು ಆರು ಗಿನ್ನಿಸ್ ವಿಶ್ವ ದಾಖಲೆಯನ್ನು ಮಾಡಿದ್ದಾರೆ. ಸದ್ಯ ರಿಹಾನ್ನಾ ತಮ್ಮ ಇನ್​ಸ್ಟಾಗ್ರಾಮ್​ ಖಾತೆಯಲ್ಲಿ ಈ ಹೊಸ ಫೋಟೋಗಳನ್ನು ಶೇರ್ ಮಾಡಿಕೊಂಡಿದ್ದಾರೆ. ಇದೇ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿವೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಬ್ಬಾ.. ಹೊಸ ಲುಕ್​ನಲ್ಲಿ ನೆಟ್ಟಿಗರ ಕಣ್ಮನ ಸೆಳೆದ ಖ್ಯಾತ ಪಾಪ್‌ ಸಿಂಗರ್; ಯಾರು ಈ ರಿಹಾನ್ನಾ?

https://newsfirstlive.com/wp-content/uploads/2024/06/Sans-titre.jpg

Load More