newsfirstkannada.com

ನಾಲಿಗೆಯಲ್ಲಿ ಅರಳಿದ ವಿರಾಟ ರೂಪ; ಕೊಹ್ಲಿ ಫ್ಯಾನ್ಸ್‌ ಮಿಸ್ ಮಾಡ್ದೇ ಈ ವಿಡಿಯೋ ನೋಡಿ

Share :

11-09-2023

    ವರ್ಲ್ಡ್​ ವೈಡ್ ಡೈ ಹಾರ್ಡ್​ ಫ್ಯಾನ್ಸ್ ಹೊಂದಿರುವ ಕಿಂಗ್ ಕೊಹ್ಲಿ

    ಈ ಅಭಿಮಾನಿ ಬಿಡಿಸಿರುವ ಚಿತ್ರ ನೋಡಿದ್ರೆ ನೀವು ಶಾಕ್ ಆಗ್ತೀರಾ ​

    ವಿರಾಟ್ ಕೊಹ್ಲಿ ಬ್ಯಾಟಿಂಗ್​ಗೆ ಕ್ಲಾಸ್​, ಮಾಸ್​ ಫ್ಯಾನ್ಸ್​ಗಳಿದ್ದಾರೆ

ಕೊಹ್ಲಿ ಕ್ರಿಕೆಟ್​​ನಲ್ಲಿ ಮಾಡಿದ ಸಾಧನೆ ಅಗಾಧವಾಗಿದ್ದು ಈ ಚಕ್ರವರ್ತಿಯ ಆಟಕ್ಕೆ ಇಡೀ ವಿಶ್ವವೇ ಮನ ಸೋತಿದೆ. ವಿರಾಟ್ ಕೊಹ್ಲಿ ಎನ್ನುವ ಹೆಸರು ಒಂದು ಬ್ರ್ಯಾಂಡ್ ಆಗಿದ್ದು ಆ ಹೆಸರು ವಿಶ್ವದ ಪ್ರತಿಯೊಬ್ಬರಿಗೂ ಚಿರಪರಿಚಿತ ಇದ್ದೇ ಇರುತ್ತದೆ. ಕೊಹ್ಲಿ ಅವರ ಬ್ಯಾಟಿಂಗ್​ ಕ್ಲಾಸ್​​, ಮಾಸ್​ ಫ್ಯಾನ್ಸ್​ಗೂ ಸಖತ್ ಇಷ್ಟವಾಗುತ್ತೆ. ಸದ್ಯ ಅಭಿಮಾನಿಯೊಬ್ಬ ತನ್ನ ನಾಲಿಗೆ ಮೂಲಕ ಕಿಂಗ್​ ಕೊಹ್ಲಿಯ ಭಾವಚಿತ್ರವನ್ನ ಬಿಡಿಸಿ ಬೆರಗುಗೊಳಿಸಿದ್ದಾರೆ.

ವಿರಾಟ್ ಕೊಹ್ಲಿ ಚಿತ್ರ ಬಿಡಿಸಿದ ಆಭಿಮಾನಿ

ಕ್ರಿಕೆಟ್​ ಲೋಕದ ಸಾಮ್ರಾಟ್​ ವಿರಾಟ್​ ಕೊಹ್ಲಿಗೆ​ ವರ್ಲ್ಡ್​ ವೈಡ್ ಡೈ ಹಾರ್ಡ್​ ಫ್ಯಾನ್ಸ್ ಇದ್ದಾರೆ ಎನ್ನುವುದಕ್ಕೆ ಇದೇ ಸಾಕ್ಷಿ ಎನ್ನಬಹುದು. ಈ ಅಭಿಮಾನಿ ಮೊದಲು ತನ್ನ ನಾಲಿಗೆಗೆ ಕಪ್ಪು ಬಣ್ಣದ ಪೇಂಟ್​ ಹಚ್ಚಿಕೊಂಡು ಡ್ರಾಯಿಂಗ್ ಬೋರ್ಡ್ ಮೇಲೆ ಕೊಹ್ಲಿ ಭಾವಚಿತ್ರವನ್ನು ಬಿಡಿಸಿದ್ದಾರೆ. ಸೇಮ್​ ಟು ಸೇಮ್ ವಿರಾಟ್​ನಂತೆ ಬಿಡಿಸಿರುವುದು ನೋಡಿದರೆ ಇದೊಂದು ವಿಶೇಷ ಸಾಧನೆ ಎನಿಸುತ್ತದೆ. ಏಕೆಂದರೆ ಇಷ್ಟು ದಿನ ಕಾಲು, ಕೈ, ಬಾಯಲ್ಲಿ ಫೋಟೋ ಬಿಡಿಸಿರೋದು ನೋಡಿದ್ದೇವೆ. ಆದ್ರೆ ನಾಲಿಗೆಯಿಂದ ಈ ರೀತಿ ಬಿಡಿಸಿರುವುದು ಇದೇ ಮೊದಲು ಎಂದು ಹೇಳಬಹುದು.

ಇನ್ನು ಎಷ್ಟೋ ಅಭಿಮಾನಿಗಳು ಕಿಂಗ್ ಕೊಹ್ಲಿ ಹೆಸರು, ಭಾವಚಿತ್ರವನ್ನ ತಮ್ಮ ದೇಹದ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಅಭಿಮಾನಿ ನಾಲಿಗೆಯಲ್ಲಿ ಕೊಹ್ಲಿಯ ಚಿತ್ರ ಬಿಡಿಸುವ ಮೂಲಕ ಕೊಹ್ಲಿ ಮೇಲಿನ ತನ್ನ ಅಭಿಮಾನ ತೋರಿದ್ದಾರೆ. ಅದ್ಭುತವಾದ ಚಿತ್ರವನ್ನ ಬಿಡಿಸಿರುವ ಅಭಿಮಾನಿಯ ಪ್ರಯತ್ನಕ್ಕೆ ನೆಟ್ಟಿಗರಿಂದ ಭಾರೀ ಪ್ರಶಂಸೆ ವ್ಯಕ್ತವಾಗುತ್ತಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ನಾಲಿಗೆಯಲ್ಲಿ ಅರಳಿದ ವಿರಾಟ ರೂಪ; ಕೊಹ್ಲಿ ಫ್ಯಾನ್ಸ್‌ ಮಿಸ್ ಮಾಡ್ದೇ ಈ ವಿಡಿಯೋ ನೋಡಿ

https://newsfirstlive.com/wp-content/uploads/2023/09/VIRAT_KOHLI_PHOTO.jpg

Load More