newsfirstkannada.com

ಬರೋಬ್ಬರಿ 4 ವರ್ಷಗಳ ಬಳಿಕ ಡಾಲಿ ಬರ್ತ್​​ಡೇ; ಗ್ರ್ಯಾಂಡ್​ ಸೆಲೆಬ್ರೇಷನ್​ಗೆ ಫ್ಯಾನ್ಸ್​ ರೆಡಿ

Share :

30-07-2023

  ನಟ ಡಾಲಿ ಧನಂಜಯ್ ಹುಟ್ಟುಹಬ್ಬಕ್ಕೆ ದಿನಗಣನೆ

  ನೆಚ್ಚಿನ ನಟನ ಹುಟ್ಟುಹಬ್ಬ ಆಚರಣೆಗೆ ಫ್ಯಾನ್ಸ್​​ ಪ್ಲಾನ್​​

  ಜೆಪಿ ನಗರದ ಗ್ರೌಂಡ್‌ನಲ್ಲಿ ನಡೆಯಲಿದೆ ಡಾಲಿ ಬರ್ತ್​ ಡೇ!

ಸ್ಯಾಂಡಲ್‌ವುಡ್ ಖ್ಯಾತ ನಟ ಡಾಲಿ ಧನಂಜಯ್ ಅವರ ಹುಟ್ಟುಹಬ್ಬಕ್ಕೆ ದಿನಗಣನೆ ಶುರುವಾಗಿದೆ. ನಟ ಡಾಲಿ ಧನಂಜಯ್​ ಅವರಿಗೆ ಅಪಾರ ಸಂಖ್ಯೆಯ ಅಭಿಮಾನಿ ಬಳಗವನ್ನು ಹೊಂದಿದ್ದಾರೆ. ಈ ಬಾರಿ ನೆಚ್ಚಿನ ನಟನ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಬೇಕೆಂದು ಎಲ್ಲಾ ರೀತಿಯ ತಯಾರಿ ನಡೆಸುತ್ತಿದ್ದಾರೆ. ತನ್ನ ಬರ್ತ ಡೇ ದಿನ ಅಭಿಮಾನಿಗಳ ಜೊತೆ ಸಮಯ ಕಳೆಯಲು ನಿರ್ಧರಿಸಿದ್ದಾರೆ ಡಾಲಿ ಧನಂಜಯ್​.

ಆಗಸ್ಟ್ 23ಕ್ಕೆ ನಟ ಡಾಲಿ ಧನಂಜಯ್ ಹುಟ್ಟುಹಬ್ಬವಿದ್ದು, ಹೀಗಾಗಿ ಸಾಕಷ್ಟು ಪ್ರಮಾಣದಲ್ಲಿ ಅಭಿಮಾನಿಗಳು ಈಗಲೇ ಸಜ್ಜಾಗಿ ನಿಂತಿದ್ದಾರೆ. ಇನ್ನು ಡಾಲಿ ಧನಂಜಯ್​​​ ಫೋಟೋವನ್ನು ಶೇರ್ ಮಾಡಿ ಸಂಭ್ರಮಿಸುತ್ತಿದ್ದಾರೆ ಅಭಿಮಾನಿಗಳು. ನಟ ಧನಂಜಯ್ ಅವರ ಬರ್ತ್​ ಡೇ ಸೆಲೆಬ್ರೇಷನ್ ಜೆಪಿ ನಗರದ ಗ್ರೌಂಡ್‌ನಲ್ಲಿ ನಡೆಯಲಿದೆ ಎಂಬ ಮಾಹಿತಿ ತಿಳಿದು ಬಂದಿದೆ.

ದೊಡ್ಡ ಗ್ರೌಂಡ್‌ನಲ್ಲಿ ಬರ್ತ್​ ಡೇಯನ್ನು ಮಾಡಲು ನಟ ಧನಂಜಯ್ ನಿರ್ಧರಿಸಿದ್ದಾರಂತೆ. ಆಗಸ್ಟ್ 22ರ ರಾತ್ರಿಯಿಂದನೇ ಸೆಲೆಬ್ರೇಷನ್ ಶುರುವಾಗಲಿದೆ. 23ರಂದು ಜಿಪಿ ನಗರದ ಗ್ರೌಂಡ್‌ನಲ್ಲಿ ನಟ ಧನಂಜಯ್ ಎಲ್ಲಾ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ. ಇನ್ನು ಇದರ ಜೊತೆಗೆ ಊಟದ ವ್ಯವಸ್ಥೆ ಕೂಡ ಇರಲಿದೆ ಎನ್ನಲಾಗಿದೆ.

ವಿಶೇಷ ಸೂಚನೆ: ಸಿನಿಮಾ ಲೋಕದ ಸ್ಪೆಷಲ್ ಸುದ್ದಿಗಳಿಗಾಗಿ ಪ್ರತಿದಿನ ಸಂಜೆ 6.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ಫಿಲ್ಮಿ ಫಸ್ಟ್’ ವೀಕ್ಷಿಸಿ

ಬರೋಬ್ಬರಿ 4 ವರ್ಷಗಳ ಬಳಿಕ ಡಾಲಿ ಬರ್ತ್​​ಡೇ; ಗ್ರ್ಯಾಂಡ್​ ಸೆಲೆಬ್ರೇಷನ್​ಗೆ ಫ್ಯಾನ್ಸ್​ ರೆಡಿ

https://newsfirstlive.com/wp-content/uploads/2023/07/dalli.jpg

Load More