ಸತತ 3 ದಿನದಿಂದ ಟೀಮ್ ಇಂಡಿಯಾ ಬ್ಯುಸಿ
ಅಳಿವು-ಉಳಿವಿನ ಪ್ರಶ್ನೆ.. ಗೆಲುವೊಂದೇ ಗುರಿ
ಏಷ್ಯಾಕಪ್ ವೇಳಾಪಟ್ಟಿ ಅವ್ಯವಸ್ಥೆಗೆ ಹೊಣೆ ಯಾರು?
ಟೀಮ್ ಇಂಡಿಯಾ ಅಭಿಮಾನಿಗಳಿಗೆ ದಿಪಾವಳಿ ಬೇಗ ಬಂದಿದೆ. ಇದಕ್ಕೆ ಕಾರಣ ಏಷ್ಯನ್ ಕ್ರಿಕೆಟ್ ಕೌನ್ಸಿಲ್ ಅಧ್ಯಕ್ಷ ಜಯ್ ಶಾ, ಟೀಮ್ ಇಂಡಿಯಾಗೆ ಉಡುಗೊರೆವೊಂದನ್ನು ನೀಡಿದ್ದಾರೆ. ಆ ಒಂದು ಉಡುಗೊರೆ ಈಗ ಟೀಮ್ ಇಂಡಿಯಾಗೆ ಥ್ರೆಟ್ ಆಗಿ ಪರಿಣಮಿಸಿದ್ದರೂ ಅಚ್ಚರಿ ಇಲ್ಲ.
ಒನ್ ಡೇ ಗೇಮ್.. 50 ಓವರ್ಗಳ ಪಂದ್ಯ.. ಒಂದೇ ದಿನದಲ್ಲಿ ಮುಗಿಯೋ ಈ ಪಂದ್ಯ.. ಆದರೆ ಟೀಮ್ ಇಂಡಿಯಾ, ಸತತ ಮೂರು ದಿನಗಳಿಂದ ಆಡ್ತಾನೇ ಇದೆ. ಪಾಕ್ ವಿರುದ್ಧದ ಸೂಪರ್-4 ಪಂದ್ಯವನ್ನು 2 ದಿನಗಳ ಕಾಲ ಆಡಿದ್ದ ಟೀಮ್ ಇಂಡಿಯಾ, 3ನೇ ದಿನವಾದ ಇಂದು ಸಿಂಹಳೀಯರ ಬೇಟೆಗೆ ಸಜ್ಜಾಗಿದೆ. ಸೂಪರ್-4 ಹಂತದಿಂದ ಫೈನಲ್ಗೇರುವ ಲೆಕ್ಕಚಾರದಲ್ಲಿದೆ. ಆದ್ರೆ, ಇದು ಅಂದುಕೊಂಡಷ್ಟು ಸುಲಭದ್ದಾಗಿಲ್ಲ.
ಇಂದೇ ನಿರ್ಣಯವಾಗುತ್ತಾ ಟೀಮ್ ಇಂಡಿಯಾ ಭವಿಷ್ಯ..!
ಮಳೆಯಿಂದಾಗಿ ಟೀಮ್ ಇಂಡಿಯಾದ ಭವಿಷ್ಯ ಅತಂತ್ರಕ್ಕೆ ಸಿಲುಕಿದೆ. ಹೀಗಾಗಿ ಶ್ರೀಲಂಕಾ ವಿರುದ್ಧದ 2ನೇ ಸೂಪರ್-4 ಮ್ಯಾಚ್ನಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಸಿಲುಕಿರುವ ಟೀಮ್ ಇಂಡಿಯಾ, ಗೆಲುವಿನ ಮಂತ್ರವನ್ನು ಪಠಿಸುತ್ತಿದೆ. ಕಾರಣ, ಏಷ್ಯನ್ ಕೌನ್ಸಿಲ್ ಅಧ್ಯಕ್ಷ ಜಯ ಶಾ, ಟೀಮ್ ಇಂಡಿಯಾಗೆ ನೀಡಿರೋ ಗಿಫ್ಟ್ ಅನ್ನೋದನ್ನು ಬಿಡಿಸಿ ಹೇಳಬೇಕಿಲ್ಲ.
3ನೇ ದಿನವೂ ಕಾಡಲಿದೆ ಟೀಮ್ ಇಂಡಿಯಾಗೆ ಮಳೆ
ಟೀಮ್ ಇಂಡಿಯಾ, ಏಷ್ಯಾಕಪ್ನ ಫೈನಲ್‌ಗೆ ಏರಾಬೇಕಾದ್ರೆ ಇಂದು ಗೆಲುವು ಅನಿವಾರ್ಯ. ಅಕಸ್ಮಾತ್ ಮತ್ತೆ ಮಳೆರಾಯನ ಅವಕೃಪೆಗೆ ತುತ್ತಾದ್ರೆ, ಟೀಮ್ ಇಂಡಿಯಾ ಫೈನಲ್ಗೇರುವ ಕನಸು ಮಳೆಯಲ್ಲೇ ಕೊಚ್ಚಿ ಹೋಗೋದ್ರಲ್ಲಿ ಅನುಮಾನ ಇಲ್ಲ. ಇದಕ್ಕೆ ಕಾರಣ ಈಗಾಗಲೇ ಲಂಕಾ ಹಾಗೂ ಪಾಕ್ ತಂಡಗಳು, ಸೂಪರ್-4ನಲ್ಲಿ ಗೆಲುವಿನ ಶುಭಾರಂಭ ಕಂಡಿರುವುದೇ ಆಗಿದೆ.
ಬಲಿಷ್ಠ ಭಾರತಕ್ಕೆ ಸಿಂಹಳೀಯರ ಬೇಟೆ ಸಲಭವಲ್ಲ
ಗೆಲುವಿನ ಲಯದಲ್ಲಿ ಮುಂದುವರಿಯುತ್ತಿರೋ ಶನಕ ಪಡೆಯನ್ನು ಬಗ್ಗುಬಡೆಯೋದು ಸುಲಭದ ಮಾತೇ ಅಲ್ಲ. ಇನ್ಫ್ಯಾಕ್ಟ್ ಪ್ರಮುಖ ಆಟಗಾರರು ಇಂಜುರಿಯಿಂದ ಗೈರಾಗಿದ್ರೂ, ತವರಿನ ಲಾಭ.. ಗೆಲುವಿನ ಹಸಿವು, ಸಂಘಟಿತ ಆಟ ಗೆಲ್ಲುವ ಫೇವರಿಟ್ ಆಗಿಸಿದೆ.
ಸತತ 3ನೇ ದಿನವೂ ಪಂದ್ಯ.. ಭಾರತಕ್ಕೆ ಆಗುತ್ತಾ ಹಿನ್ನಡೆ..?
50 ಓವರ್ಗಳ ಪಂದ್ಯದ ನಂತರ, ಆಟಗಾರರ ಚೇತರಿಕೆಗೆ ಕನಿಷ್ಠ 2 ದಿನ ಬೇಕು. ಆದ್ರೆ ಪ್ರಸಾರಕರ ಲಾಭಕ್ಕಾಗಿ ಇಂಡೋ-ಪಾಕ್ ಪಂದ್ಯಕ್ಕೆ ರಿಸರ್ವ್ ಡೇ ನಿಗದಿಪಡಿಸಲಾಯ್ತು. ಪ್ರಯಾಣಿಸಿ ಪ್ರಯಾಣಿಸಿ ಸುಸ್ತಾಗುವ ಆಟಗಾರರು, ಚೇತರಿಸಿಕೊಳ್ಳುವ ಮುಂಚೆಯೇ ಲಂಕಾ ಪಂದ್ಯಕ್ಕೆ ಆಣಿಯಾಗ್ತಿದ್ದಾರೆ. ಈ ಪಂದ್ಯದ ಮುಗಿದ 72 ಗಂಟೆಗಳ ಬಳಿಕ ಟೀಮ್ ಇಂಡಿಯಾ, ಬಾಂಗ್ಲಾವನ್ನ ಎದುರಿಸಲಿದೆ. ಒಂದು ವೇಳೆ ಫೈನಲ್‌ಗೆ ಅರ್ಹತೆ ಪಡೆದರೆ 48 ಗಂಟೆಗಳ ಅವಧಿಯಲ್ಲಿ ಮತ್ತೊಂದು ಪಂದ್ಯ ಆಡಬೇಕಾದ ಇಕ್ಕಟ್ಟಿಗೆ ಸಿಲುಕಲಿದೆ. ಎಲ್ಲಕ್ಕೂ ಮಿಗಿಲಾಗಿ ತಂಡದ ಪ್ರಮುಖ ಆಟಗಾರರಾದ ಕೆ.ಎಲ್.ರಾಹುಲ್, ಶ್ರೇಯಸ್ ಅಯ್ಯರ್, ಜಸ್ಪ್ರೀತ್ ಬೂಮ್ರಾ ಇಂಜುರಿಯಿಂದ ವಾಪಸ್ ಆಗಿದ್ದಾರೆ. ಇಂಥ ಪರಿಸ್ಥಿತಿಯಲ್ಲಿ ಹೆಚ್ಚುವರಿ ವರ್ಕ್ಲೋಡ್ನಿಂದ ಮತ್ತೊಮ್ಮೆ ಗಾಯಗೊಂಡರೆ, ಟೀಮ್ ಇಂಡಿಯಾ ಮತ್ತಷ್ಟು ಸಂಕಷ್ಟಕ್ಕೆ ಸಿಲುಕೋದು ಗ್ಯಾರಂಟಿ.

ರಾಜತಾಂತ್ರಿಕ ಕಾರಣಗಳಿಂದಾಗಿ ಪಾಕ್ಗೆ, ಪ್ರಯಾಣಿಸಲು ನಿರಾಕರಿಸಿದೆ. ಪಾಕ್ನಲ್ಲಿನ ಅವ್ಯವಸ್ಥೆ ಇದಕ್ಕೆಲ್ಲಾ ಕಾರಣ ಅನ್ನೋದನ್ನ ಬಿಡಿಸಿ ಹೇಳಬೇಕಿಲ್ಲ. ಸೆಪ್ಟೆಂಬರ್‌ನಲ್ಲಿ ಶ್ರೀಲಂಕಾವನ್ನು ಆಯ್ಕೆ ಮಾಡಿರೋದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ. 10 ದಿನಗಳ ಮುನ್ನವೇ ಕೊಲಂಬೊದ ಹವಾಮಾನ ಬಗ್ಗೆ ಗೊತ್ತಿದ್ದರೂ, ಪ್ರತಿಕೂಲ ಹವಾಮಾನ ಹೊಂದಿದ್ದ ಹಂಬಂಟೋಟಾಕ್ಕೆ ಪಂದ್ಯಗಳನ್ನ ಶಿಫ್ಟ್ ಮಾಡಬಹುದಿತ್ತು. ಏಷ್ಯನ್ ಕೌನ್ಸಿಲ್ ಅಧ್ಯಕ್ಷ ಜಯ ಶಾ, ಈ ಬಗ್ಗೆ ಮನಸ್ಸೂ ಮಾಡದ್ದು ನಿಜಕ್ಕೂ ದುರಾದೃಷ್ಟವೇ ಸರಿ. ಒಂದ್ಕಡೆ ಮಳೆರಾಯ ಟೀಮ್ ಇಂಡಿಯಾಗೆ ಕನಸಿಗೆ ಕೊಳ್ಳಿ ಇಡ್ತಿದ್ರೆ, ಮತ್ತೊಂದೆಡೆ ಜಯ ಶಾರ ಬೇಕಾಬಿಟ್ಟಿ ಶೆಡ್ಯೂಲಿಂಗ್, ಟೀಮ್ ಇಂಡಿಯಾಗೆ ಆಪತ್ತಿಗೆ ದೂಡುವಂತೆ ಮಾಡ್ತಿರೋದು ಸುಳ್ಳಲ್ಲ.
ವಿಶೇಷ ವರದಿ: ಸಂತೋಷ್
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್