newsfirstkannada.com

‘ಟೈಗರ್​ 3’ಪ್ರದರ್ಶನ ವೇಳೆ ಪಟಾಕಿ ಸಿಡಿಸಿದ ಫ್ಯಾನ್ಸ್​; ಘಟನೆ ಬೆನ್ನಲ್ಲೇ ಅಭಿಮಾನಿಗಳ ಬಳಿ ವಿನಂತಿಸಿಕೊಂಡ ಸಲ್ಮಾನ್​ ಖಾನ್​

Share :

14-11-2023

    ಸಲ್ಮಾನ್​ ಖಾನ್​ ನಟನೆಯ ‘ಟೈಗರ್​​ 3’ ಚಿತ್ರ

    ಸ್ಕ್ರೀನಿಂಗ್​ ವೇಳೆ ಪಟಾಕಿ ಸಿಡಿಸಿದ ಅಭಿಮಾನಿಗಳು

    ಮಹಾರಾಷ್ಟ್ರದ ಘಟನೆ ಬೆಳಕಿಗೆ ಬಂದಂತೆ ಸಲ್ಲು ಪ್ರತಿಕ್ರಿಯೆ

ಬಾಲಿವುಡ್​​ ಸೂಪರ್​ ಸ್ಟಾರ್​​ ಸಲ್ಮಾನ್​ ಖಾನ್​ ಅವರ ಬಹುನಿರೀಕ್ಷಿತ ‘ಟೈಗರ್​​ 3’ ಚಿತ್ರದ ಸ್ಕ್ರೀನಿಂಗ್​ ವೇಳೆ ಅಭಿಮಾನಿಗಳು ಚಿತ್ರಮಂದಿರದಲ್ಲಿ ಪಟಾಕಿ ಸಿಡಿಸಿದಕ್ಕೆ ಸಲ್ಮಾನ್​​ ಖಾನ್​​ ಪ್ರತಿಕ್ರಿಯಿಸಿದ್ದಾರೆ.

ಮಹಾರಾಷ್ಟ್ರದ ಮಲೆಗಾಂವ್​​ ಚಿತ್ರಮಂದಿರಲ್ಲಿ ಸಲ್ಮಾನ್​ ಖಾನ್​ ಅಭಿಮಾನಿಗಳು ಥಿಯೇಟರ್​ನಲ್ಲಿ ಪಟಾಕಿ ಸಿಡಿಸಿ ಅವಾಂತರ ಸೃಷ್ಟಿಸಿದ್ದರು, ಈ ಘಟನೆ ಬಗ್ಗೆ ಪ್ರತಿಕ್ರಿಯಿಸಿರುವ ಸಲ್ಮಾನ್​​ ಖಾನ್​, ‘ಪ್ರದರ್ಶನದ ವೇಳೆ ಥಿಯೇಟರ್‌ಗಳಲ್ಲಿ ಪಟಾಕಿಗಳನ್ನು ಸಿಡಿಸಬೇಡಿ. ಇತರರಿಗೆ ತೊಂದರೆಯಾಗದಂತೆ ಚಿತ್ರವನ್ನು ಆನಂದಿಸಿ ಮತ್ತು ಸುರಕ್ಷಿತವಾಗಿರಿ ಎಂದು ಸೋಶಿಯಲ್​ ಮಿಡಿಯಾ ಮೂಲಕ ತಮ್ಮ ಫ್ಯಾನ್ಸ್​​​ಗಳಿಗೆ ವಿನಂತಿಸಿಕೊಂಡಿದ್ದಾರೆ.

ಇನ್ನು ಈ ಘಟನೆ ಕುರಿತು ಕ್ರಮ ಕೈಗೊಂಡಿರುವ ಸ್ಥಳೀಯ ಪೊಲೀಸರು ಘಟನೆಗೆ ಕಾರಣದವರ ವಿರುದ್ಧ ಎಫ್‌ಐಆರ್ ದಾಖಲಿಸಿಕೊಂಡಿದ್ದಾರೆ.

ಟೈಗರ್​ 3 ಸಿನಿಮಾ ನವೆಂಬರ್​ 12ರಂದು ಬಹುಭಾಷೆಯಲ್ಲಿ ತೆರೆಕಂಡಿದೆ. ಮೊದಲ ದಿನವೇ 44 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿದೆ. ಅಂದಹಾಗೆಯೇ ನಿರ್ದೇಶಕ ಮನೀಶ್​ ಶರ್ಮಾ ನಿರ್ದೇಶನದಲ್ಲಿ ಈ ಸಿನಿಮಾ ಮೂಡಿಬಂದಿದೆ. 300 ಕೋಟಿ ಬಜೆಟ್​ನಲ್ಲಿ ಸಿನಿಮಾ ನಿರ್ಮಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಟೈಗರ್​ 3’ಪ್ರದರ್ಶನ ವೇಳೆ ಪಟಾಕಿ ಸಿಡಿಸಿದ ಫ್ಯಾನ್ಸ್​; ಘಟನೆ ಬೆನ್ನಲ್ಲೇ ಅಭಿಮಾನಿಗಳ ಬಳಿ ವಿನಂತಿಸಿಕೊಂಡ ಸಲ್ಮಾನ್​ ಖಾನ್​

https://newsfirstlive.com/wp-content/uploads/2023/11/Tiger-3-1-1.jpg

Load More