newsfirstkannada.com

ಪವನ್ ಕಲ್ಯಾಣ್‌ ಎದುರಾಳಿ.. ಪೀಠಾಪುರಂ ಕ್ಷೇತ್ರದಲ್ಲಿ ಸೋತವರಿಗೆ ಇನ್ನೂ ತಪ್ಪದ ಸಂಕಷ್ಟ; ಫ್ಯಾನ್ಸ್ ಮಾಡಿದ್ದೇನು?

Share :

Published June 23, 2024 at 5:24pm

Update June 23, 2024 at 5:26pm

  ಪೀಠಾಪುರಂ ಗೆದ್ದ ಪವನ್ ಕಲ್ಯಾಣ್​ ಈಗ ಆಂಧ್ರದ ಉಪಮುಖ್ಯಮಂತ್ರಿ

  ಜನಸೇನಾ ಪಕ್ಷಕ್ಕೆ ಈ ಬಾರಿಯೂ ಪಕ್ಕಾ ಸೋಲೇ ಆಗುತ್ತೆ ಎಂದಿದ್ದರು

  ಪವನ್ ಕಲ್ಯಾಣ್ ಅಂಡ್ ಟೀಂನ ರಣತಂತ್ರಕ್ಕೆ ಪದ್ಮನಾಭ ಹೀನಾಯ ಸೋಲು

ಟಾಲಿವುಡ್​​ನ ಪವರ್​ ಸ್ಟಾರ್ ಪವನ್ ಕಲ್ಯಾಣ್​ ಅವರು ಈಗ ಆಂಧ್ರಪ್ರದೇಶದ ಉಪಮುಖ್ಯಮಂತ್ರಿ. ಸತತ ಸೋಲಿನ ರುಚಿಯನ್ನೇ ಕಂಡಿದ್ದ ಪವನ್ ಕಲ್ಯಾಣ್, ನಿರಂತರ ಪ್ರಯತ್ನಗಳಿಂದ 2024ರ ಆಂಧ್ರಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಗೆದ್ದಿದ್ದಾರೆ. ಜನಸೇನಾ ಪಾರ್ಟಿ ಅಭ್ಯರ್ಥಿಗಳು ದೇಶದೆಲ್ಲೇ ಮೊದಲ ಬಾರಿಗೆ ಒಂದು ಪಕ್ಷ ಸ್ಪರ್ಧಿಸಿದ್ದ ಟೈಂ 100 ಔಟ್ ಆಫ್ 100 ರಿಸಲ್ಟ್ ತಂದು ಕೊಂಡಿದ್ದಾರೆ.

ಇದನ್ನೂ ಓದಿ: VIDEO: ‘ಪವನ್ ಅಲ್ಲ ಇವ್ರು ಬಿರುಗಾಳಿ’- ಪವನ್ ಕಲ್ಯಾಣ್ ಹೊಗಳಿದ ಮೋದಿ; NDA ಸಭೆಯಲ್ಲಿ ಆಗಿದ್ದೇನು? 

ಪವನ್ ಕಲ್ಯಾಣ್ ಜನಸೇನಾ ಪಕ್ಷಕ್ಕೆ ಈ ಬಾರಿಯೂ ಪಕ್ಕಾ ಸೋಲೇ ಆಗುತ್ತೆ ಅಂತ ಎದುರಾಳಿಗಳು ಕಾಯುತ್ತಾ ಇದ್ದರು. ಆದ್ರೆ ಮಿಂಚಿನ ವೇಗದಂತೆ ಪವನ್ ಕಲ್ಯಾಣ್ ಅಂಡ್ ಟೀಂನ ರಣತಂತ್ರಕ್ಕೆ ಪ್ರತಿಸ್ಪರ್ಧಿಗಳು ದಿಗ್ಬ್ರಮೆಯಾಗುವಂತೆ ಗೆದ್ದು ತೋರಿಸಿದ್ದಾರೆ.

ಇದನ್ನೂ ಓದಿ:‘ರೇಣುಕಾಸ್ವಾಮಿ ನನಗೂ ಆ ಫೋಟೋ ಕಳುಹಿಸಿದ್ದ’- ಸಾಕ್ಷಿ ಸಮೇತ ಶಾಕಿಂಗ್ ವಿಷ್ಯ ಬಿಚ್ಚಿಟ್ಟ ನಟಿ ಚಿತ್ರಾಲ್! 

ಪವನ್ ಕಲ್ಯಾಣ್ ಅವರು ಪೀಠಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಿದ್ದರು. ಈ ಕ್ಷೇತ್ರದಲ್ಲಿ ಪವನ್ ಕಲ್ಯಾಣ್ ಅವರಿಗೆ ಎದುರಾಳಿಯಾಗಿದ್ದು, ವೈಎಸ್‌ಆರ್‌ ಕಾಂಗ್ರೆಸ್​​ನ ಹಿರಿಯ ನಾಯಕ ಮುದ್ರಗಡ ಪದ್ಮನಾಭಂ ಅವರು. ಪದ್ಮನಾಭಂ ಅವರು ಚುನಾವಣೆಯಲ್ಲಿ ಪವನ್ ಕಲ್ಯಾಣ್ ಗೆದ್ರೆ ನನ್ನ ಹೆಸರನ್ನೇ ಚೇಂಜ್ ಮಾಡಿಕೊಳ್ತೀನಿ ಅಂತ ಸವಾಲು ಹಾಕಿದ್ದರು. ಆ ಸವಾಲಿನಂತೆ ವೈಎಸ್‌ಆರ್‌ ಕಾಂಗ್ರೆಸ್​​ನ ಹಿರಿಯ ನಾಯಕ ಮುದ್ರಗಡ ಪದ್ಮನಾಭಂ ಈಗ ತಮ್ಮ ಹೆಸರನ್ನೇ ಬದಲಿಸಿಕೊಳ್ಳಲು ಒತ್ತಡ ಹಾಕಲಾಗಿದೆ.

ಹೆಸರು ಬದಲಾಯಿಸಿಕೊಂಡ ಕಾಪು ನಾಯಕ!
ಪವನ್ ಕಲ್ಯಾಣ್ ಅವರು ಪೀಠಾಪುರಂ ಕ್ಷೇತ್ರದಲ್ಲಿ ಸ್ಪರ್ಧೆ ಮಾಡ್ತಾರೆ ಅಂತ ಯಾವಾಗ ಘೋಷಣೆಯಾಯ್ತೋ, ಆಗಿನಿಂದಲೇ ಮಾತಿನ ಯುದ್ಧವೇ ಶುರುವಾಗಿತ್ತು. ಪವನ್ ಕಲ್ಯಾಣ್ ಅವರ ಕಾಪು ಸಮುದಾಯ ಮುಖಂಡ ಹಾಗೂ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಪಕ್ಷದ ಮುದ್ರಗಡ ಪದ್ಮನಾಭಂ ವಾಕ್ ಪ್ರಹಾರವೇ ಮಾಡ್ತಿದ್ರು. ಜೊತೆಗೆ ಪೀಠಾಪುರಂ ವಿಧಾನಸಭಾ ಕ್ಷೇತ್ರದಲ್ಲಿ ಪವನ್ ಕಲ್ಯಾಣ್ ಗೆದ್ರೆ, ನನ್ನ ಹೆಸರನ್ನು ತೆಗೆದು, ರೆಡ್ಡಿ ಅಂತ ಬದಲಾವಣೆ ಮಾಡಿಕೊಳ್ತೀನಿ ಅಂತ ಸವಾಲು ಹಾಕಿದ್ದರು.

ವಿಧಾನಸಭಾ ಚುನಾವಣೆ ವೇಳೆ ಪದ್ಮನಾಭಂ​ ಅವರಿಗೆ ಆಘಾತ ಎದುರಾಗಿತ್ತು. ಪವನ್ ಕಲ್ಯಾಣ್ ವಿರುದ್ಧ ವಾಗ್ದಾಳಿ ನಡೆಸಿದ್ದ ಪದ್ಮನಾಭಂ ಅವರ ಸ್ವಂತ ಮಗಳೇ ಪವನ್‌ಗೆ ಬೆಂಬಲ ಕೊಟ್ಟು, ತಂದೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸುತ್ತಾ ಇದ್ದರು. ಅಲ್ಲದೇ ಜನಸೇನಾ ಪಕ್ಷದ ಪ್ರಚಾರ ಸಭೆಗಳಲ್ಲೂ ಭಾಗಿಯಾಗಿ ಪವನ್ ಕಲ್ಯಾಣ್ ಅವರಿಗೆ ಗೆಲುವು ಖಚಿತ ಅಂತ ಮಗಳೇ ಘೋಷಣೆ ಮಾಡಿದ್ದರು.

ಪದ್ಮನಾಭಂ ಅವರು ಪವನ್ ಕಲ್ಯಾಣ್ ಅವರನ್ನು ಸೋಲಿಸೋದೇ ನನ್ನ ಗುರಿ ಅಂತ ಸುದ್ದಿಗೋಷ್ಟಿಯಲ್ಲಿ ಅಬ್ಬರದಲ್ಲೇ ಮಾತನಾಡಿದ್ದರು. ಆದರೆ ಚುನಾವಣೆಯ ಫಲಿತಾಂಶದಲ್ಲಿ ಪವನ್ ಕಲ್ಯಾಣ್ ಅವರು 70 ಸಾವಿರ ಮತಗಳ ಅಂತರದಿಂದ ಗೆದ್ದು ಬೀಗಿದ್ದರು.

ಇದನ್ನೂ ಓದಿ: 50 ವರ್ಷದ ವಿವಾಹಿತ ಪುರುಷನ ಪ್ರೀತಿಸಿದ್ದ ಕಾಲೇಜು ವಿದ್ಯಾರ್ಥಿನಿ ಆತ್ಮಹತ್ಯೆ; ಅಸಲಿಗೆ ಆಗಿದ್ದೇನು? 

ಪದ್ಮನಾಭಂ ಅವರು ಪವನ್ ಕಲ್ಯಾಣ್​​ಗೆ ಚಾಲೆಂಜ್ ಹಾಕಿದ್ದ ಬಗ್ಗೆ ಅಭಿಮಾನಿಗಳು ಸೋಷಿಯಲ್ ಮೀಡಿಯಾಗಳಲ್ಲಿ ಭಾರೀ ಟ್ರೋಲ್ ಮಾಡ್ತಿದ್ರು. ಪವನ್ ಗೆದ್ದರೆ ಮುದ್ರಗಡ ಪದ್ಮನಾಭಂ ಅನ್ನೋ ಹೆಸರು ಬದಲು, ಪದ್ಮನಾಭ ರೆಡ್ಡಿ ಅಂತಾ ಹೆಸರು ಇಟ್ಟುಕೊಳ್ಳಲು ಒತ್ತಾಯಿಸಿದ್ದರು. ಪವನ್ ಕಲ್ಯಾಣ್ ಫ್ಯಾನ್ಸ್ ಒತ್ತಾಯದಂತೆ ಪದ್ಮನಾಭಂ ಅವರು ಕೊನೆಗೆ ತಮ್ಮ ಹೆಸರನ್ನು ಚೇಂಜ್ ಮಾಡಿಕೊಂಡಿದ್ದಾರೆ. ಎಲ್ಲಾ ಕಾನೂನು ಪ್ರಕ್ರಿಯೆಗಳನ್ನು ಮುಗಿಸಿ ಗೆಜೆಟ್ ದಾಖಲೆಗಳನ್ನು ಬಿಡುಗಡೆ ಮಾಡಿ ಪದ್ಮನಾಭ ರೆಡ್ಡಿ ಅವರು ಅಚ್ಚರಿ ಮೂಡಿಸಿದ್ದಾರೆ. ಇಷ್ಟಾದ್ರೂ ಪದ್ಮನಾಭ ರೆಡ್ಡಿ ವಿರುದ್ಧ ಪವನ್ ಕಲ್ಯಾಣ್ ಫ್ಯಾನ್ಸ್‌ ಆಕ್ರೋಶ ತಣ್ಣಗಾಗಿಲ್ಲ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪವನ್ ಕಲ್ಯಾಣ್‌ ಎದುರಾಳಿ.. ಪೀಠಾಪುರಂ ಕ್ಷೇತ್ರದಲ್ಲಿ ಸೋತವರಿಗೆ ಇನ್ನೂ ತಪ್ಪದ ಸಂಕಷ್ಟ; ಫ್ಯಾನ್ಸ್ ಮಾಡಿದ್ದೇನು?

https://newsfirstlive.com/wp-content/uploads/2024/06/Pavan-Kalyan-Andhra-Politics.jpg

Load More