newsfirstkannada.com

×

ಅಯ್ಯೋ ಇದೇನಾಯ್ತು.. ಶ್ರೀರಸ್ತು ಶುಭಮಸ್ತು ಸೀರಿಯಲ್​ ನೋಡೋದನ್ನೇ ಬಿಡ್ತೀವಿ ಅನ್ನುತ್ತಿರೋ ವೀಕ್ಷಕರು; ಕಾರಣವೇನು?

Share :

Published September 14, 2024 at 1:26pm

    ಫ್ಯಾನ್ಸ್​​ಗೆ ಗುಡ್​ನ್ಯೂಸ್​ ಕೊಡಲು ಹೋಗಿ ಎಡವಟ್ಟು ಮಾಡಿ ಬಿಡ್ತಾ ತಂಡ

    ಹೊಸ ರೂಪದಲ್ಲಿ ಮನರಂಜನೆ ನೀಡಲು ರೆಡಿಯಾದ ಶ್ರೀರಸ್ತು ಶುಭಮಸ್ತು

    ದಿನದಿಂದ ದಿನಕ್ಕೆ ಹೊಸ ಟ್ವಿಸ್ಟ್ ಪಡೆದುಕೊಳ್ಳುತ್ತಿದೆ ಜನ ಮೆಚ್ಚಿದ ಸೀರಿಯಲ್​

ದಿನದಿಂದ ದಿನಕ್ಕೆ ಶ್ರೀರಸ್ತು ಶುಭಮಸ್ತು ಹೊಸ ಟ್ವಿಸ್ಟ್​ ಪಡೆದುಕೊಳ್ಳುತ್ತಿದೆ. ಒಂದು ಕಡೆ ಸಮರ್ಥ್​​ಗೆ ಅಭಿ ಹಾಗೂ ಅವಿನಾಶ್ ಮನೆಯಲ್ಲಿ ತನ್ನ ಅಮ್ಮನನ್ನು ಬಿಡಲು ಇಷ್ಟವಿಲ್ಲ. ಮತ್ತೊಂದು ಕಡೆ ತುಳಸಿ ಮಾಧವ ಅವರ ಕುಟುಂಬಸ್ಥರನ್ನು ಬಿಟ್ಟು ಎಲ್ಲಿಗೂ ಬರೋದಲ್ಲೂ ಆಗುತ್ತಿಲ್ಲ. ಆದರೆ ಇದರ ಮಧ್ಯೆ ಶ್ರೀರಸ್ತು ಶುಭಮಸ್ತು ಧಾರಾವಾಹಿಯಲ್ಲಿ ಒಂದು ರೋಚಕ ಟ್ವಿಸ್ಟ್ ಪಡೆದುಕೊಂಡಿದೆ.

ಇದನ್ನೂ ಓದಿ: ಯಾರೂ ಊಹಿಸಲಾಗದ ಟ್ವಿಸ್ಟ್​ ಪಡೆದುಕೊಂಡ ಶ್ರೀರಸ್ತು ಶುಭಮಸ್ತು; ಆ ಸುದ್ದಿ ಕೇಳಿ ಬೆಚ್ಚಿಬಿದ್ದ ವೀಕ್ಷಕರು

ಹೌದು, ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುವ ಜನಪ್ರಿಯ ಧಾರಾವಾಹಿಗಳಲ್ಲಿ ಶ್ರೀರಸ್ತು ಶುಭಮಸ್ತು ಸಹ ಒಂದು. ಈ ಸೀರಿಯಲ್ ಹಿರಿಯ ಕಲಾವಿದರ ಬಳಗವೇ ಇದೆ. ವಿಭಿನ್ನ ಕಥಾಹಂದರ ಹೊಂದಿರುವ ಈ ಧಾರಾವಾಹಿ ಪ್ರೇಕ್ಷಕರ ನೆಚ್ಚಿನ ಸೀರಿಯಲ್​ ಎಂದರೇ ತಪ್ಪಾಗುವುದಿಲ್ಲ. ಸೀರಿಯಲ್​ ಶುರುವಾದ ದಿನದಿಂದ ಇಂದಿನವರೆಗೂ ವೀಕ್ಷಕರು ನೋಡಿಕೊಂಡು ಬಂದಿದ್ದಾರೆ.

ತುಳಸಿ ಹಾಗೂ ಮಾಧವನ ಒಳ್ಳೆತನಕ್ಕೆ ವೀಕ್ಷಕರು ಫಿದಾ ಆಗಿದ್ದಾರೆ. ಜೊತೆಗೆ ತುಳಸಿ-ಮಾಧವ ಜೀವನದಲ್ಲಿ ಕೋಲಾಹಲ ಸೃಷ್ಟಿಯಾಗಿದ್ದು ಬಳಿಕ ಅವರಿಬ್ಬರು ಮದುವೆಯಾಗಿದ್ದು ಎಲ್ಲರಿಗೂ ಗೊತ್ತೆ ಇದೆ. ಆದರೆ ಇದೀಗ ತುಳಸಿ ಗರ್ಭಿಣಿ ಎನ್ನುವಂತೆ ಕತೆ ಮಾಡಲಾಗಿದೆ. ಇದಕ್ಕೆ ವೀಕ್ಷಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ.

ಸುಧಾರಾಣಿಯಂತಹ ಹಿರಿಯ ನಟಿ ಇಂತಹ ಮುಜುಗರದ ಸನ್ನಿವೇಶದಲ್ಲಿ ಅಭಿನಯಿಸಬಾರದಿತ್ತು. ಈ ವಯಸ್ಸಿನಲ್ಲಿ ಗರ್ಭಿಣಿನಾ? ಇದನ್ನು ನೋಡಲು ಮುಜುಗರವಾಗುತ್ತಿದೆ ಎಂದು ಕೆಲವರು ಸೋಷಿಯಲ್ ಮೀಡಿಯಾದಲ್ಲಿ ಕಾಮೆಂಟ್ ಮಾಡಿದ್ದಾರೆ. ಹಿರಿಯ ವಯಸ್ಸಿನಲ್ಲಿ ಅಮ್ಮನಾಗುವ ಮುಜುಗರದ ಸಂದರ್ಭ, ಅದನ್ನು ಮನೆಯವರು ಹೇಗೆ ಸ್ವೀಕರಿಸುತ್ತಾರೆ, ಸೀರಿಯಲ್​ ನೋಡೋದನ್ನೇ ಬಿಡುತ್ತೇವೆ ಅಂತೆಲ್ಲಾ ಕಾಮೆಂಟ್ಸ್​ ಹಾಕಿದ್ದಾರೆ. ಸದ್ಯ ಮುಂದಿನ ಎಪಿಸೋಡ್​ಗಳಲ್ಲಿ ಯಾವ ರೀತಿ ತಿರುವನ್ನು ಪಡೆದುಕೊಳ್ಳಲಿದೆ ಅಂತ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಯ್ಯೋ ಇದೇನಾಯ್ತು.. ಶ್ರೀರಸ್ತು ಶುಭಮಸ್ತು ಸೀರಿಯಲ್​ ನೋಡೋದನ್ನೇ ಬಿಡ್ತೀವಿ ಅನ್ನುತ್ತಿರೋ ವೀಕ್ಷಕರು; ಕಾರಣವೇನು?

https://newsfirstlive.com/wp-content/uploads/2024/09/SrirasthuShubhamasthu.jpg

Load More