newsfirstkannada.com

ಕೆ.ಎಲ್​​ ರಾಹುಲ್​ ನಿವೃತ್ತಿ ಘೋಷಿಸಲು ರೋಹಿತ್​​ ಕಾರಣವೇನು? ಮತ್ತೊಂದು ಪೋಸ್ಟ್​ ವೈರಲ್​!

Share :

Published August 23, 2024 at 4:52pm

    ಕೆ.ಎಲ್​​ ರಾಹುಲ್​​​ ಇನ್​ಸ್ಟಾಗ್ರಾಮ್​​ ಪೋಸ್ಟ್​ನಲ್ಲಿ ನಿವೃತ್ತಿ ಘೋಷಿಸಿದ್ದೇಕೆ?

    ಕನ್ನಡಿಗ ಕೆ.ಎಲ್​ ರಾಹುಲ್​​​ ನಿವೃತ್ತಿ ಘೋಷಣೆಗೆ ರೋಹಿತ್​ ಕಾರಣವೇ?

    ನಿವೃತ್ತಿ ಪೋಸ್ಟ್​ ಹಾಕಿದ್ದ ಕೆ.ಎಲ್​ ರಾಹುಲ್​ ಮತ್ತೆ ಡಿಲೀಟ್​ ಮಾಡಿದ್ದೇಕೆ?

ಟೀಮ್​ ಇಂಡಿಯಾದ ಸ್ಟಾರ್​ ವಿಕೆಟ್​ ಕೀಪರ್​​ ಕೆ.ಎಲ್​​ ರಾಹುಲ್​ ಕ್ರಿಕೆಟ್​ ನಿವೃತ್ತಿ ಘೋಷಿಸಿದ್ದಾರೆ ಎನ್ನಲಾದ ಸುದ್ದಿ ಒಂದು ಹರಿದಾಡುತ್ತಿದೆ. ಇಂದು ಕೆ.ಎಲ್​​ ರಾಹುಲ್​​ ತನ್​ ಇನ್​ಸ್ಟಾಗ್ರಾಮ್​ನಲ್ಲಿ ನಿವೃತ್ತಿ ಪೋಸ್ಟ್​ ಹಾಕಿ ಡಿಲೀಟ್​ ಮಾಡಿದ್ದಾರೆ ಎಂದು ವರದಿಯಾಗಿದೆ. ಇದಕ್ಕೆ ಕಾರಣ ಕ್ಯಾಪ್ಟನ್​ ರೋಹಿತ್​ ಶರ್ಮಾ ಎಂದು ಫ್ಯಾನ್ಸ್​ ಟ್ವಿಟರ್​ನಲ್ಲಿ ಆಕ್ರೋಶ ಹೊರಹಾಕಿದ್ದಾರೆ.

ಈ ಸಂಬಂಧ ಟ್ವಿಟರ್​​ನಲ್ಲಿ ಪೋಸ್ಟ್​ ಮಾಡಿರೋ ಅಭಿಮಾನಿ ಓರ್ವ, ಕೆ.ಎಲ್​ ರಾಹುಲ್​​​ ನಿವೃತ್ತಿ ಘೋಷಿಸಿದ ಕುರಿತು ಹಲವು ಸ್ಕ್ರೀನ್​ ಶಾಟ್​ಗಳು ಹರಿದಾಡುತ್ತಿವೆ. ಎಲ್ಲಾ ಪೋಸ್ಟ್​ಗಳನ್ನು ನಿರ್ಲಕ್ಷಿಸಿ. ಕೆ.ಎಲ್​ ರಾಹುಲ್​ ನಿಜವಾದ ಪೋಸ್ಟ್​ನಲ್ಲಿ ಕ್ಯಾಪ್ಟನ್​ ರೋಹಿತ್​ ಶರ್ಮಾ ರಾಜಕೀಯದ ಬಗ್ಗೆ ಮಾತಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ.

ವೈರಲ್​ ಆದ ಪೋಸ್ಟ್​ನಲ್ಲೇನಿದೆ?

ನಾನು ಕ್ರಿಕೆಟ್​​ಗೆ ನಿವೃತ್ತಿ ಘೋಷಿಸಿದ್ದೇನೆ. ಇದಕ್ಕೆ ಕಾರಣ ಕ್ಯಾಪ್ಟನ್​ ರೋಹಿತ್​ ಶರ್ಮಾ. ನಾನು ಕ್ರಿಕೆಟ್​ನಲ್ಲಿ ಮುಂದುವರಿಯಬೇಕು ಎಂದಿದ್ದೇನೆ. ಆದರೆ, ರೋಹಿತ್​ ರಾಜಕೀಯಕ್ಕೆ ನನ್ನ ಕರಿಯರ್​ ಬಲಿಯಾಗಿದೆ ಎಂದು ರಾಹುಲ್​ ಬರೆದುಕೊಂಡಿದ್ದಾರೆ ಎನ್ನಲಾದ ಪೋಸ್ಟ್​ ಒಂದು ವೈರಲ್​ ಆಗಿದೆ.

ಟೀಮ್​​ ಇಂಡಿಯಾದ ಸ್ಟಾರ್​ ವಿಕೆಟ್​ ಕೀಪರ್​ ಬ್ಯಾಟರ್​​ ಕೆ.ಎಲ್​​ ರಾಹುಲ್​​. ಇವರು ಎಷ್ಟೋ ಪಂದ್ಯಗಳಲ್ಲಿ ಮ್ಯಾಚ್​​ ವಿನ್ನಿಂಗ್​​​​ ನಾಕ್​ ಆಡಿದ್ದಾರೆ. ಈ ಮೂಲಕವೇ ಕೆ.ಎಲ್​ ರಾಹುಲ್​ ಅಪಾರ ಅಭಿಮಾನಿಗಳನ್ನು ಸಂಪಾದಿಸಿದ್ದಾರೆ. ಟಿ20 ಆಗಲಿ, ಏಕದಿನವಾಗಲಿ, ಟೆಸ್ಟ್​​ ಆಗಲಿ ರಾಹುಲ್​​​ ಬ್ಯಾಟ್​ ಬೀಸುವುದನ್ನು ನೋಡುವುದೇ ಚೆಂದ. ಹಲವು ದಿನಗಳ ಬಳಿಕ ಟೀಮ್​ ಇಂಡಿಯಾಗೆ ಭರ್ಜರಿ ಕಮ್​ಬ್ಯಾಕ್​​ ಮಾಡಿರೋ ಕೆ.ಎಲ್​ ರಾಹುಲ್​​​ ಪರ್ಮನೆಂಟ್​ ಸ್ಥಾನ ಪಡೆಯಲು ಸಜ್ಜಾಗಿದ್ದಾರೆ. ಈ ಮಧ್ಯೆ ಕೆ.ಎಲ್​ ರಾಹುಲ್​​ ನಿವೃತ್ತಿ ಘೋಷಿಸಿದ್ದಾರೆ ಎನ್ನಲಾದ ವಿಚಾರ ಭಾರೀ ಸದ್ದು ಮಾಡುತ್ತಿದೆ.

ಇದನ್ನೂ ಓದಿ: ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿ ಬಿಗ್​ ಶಾಕ್​​ ಕೊಟ್ಟ KL ರಾಹುಲ್​​; ಕನ್ನಡಿಗನ ಇನ್​ಸ್ಟಾ ಪೋಸ್ಟ್​ ಹಿಂದಿನ ಅಸಲಿಯತ್ತೇನು?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕೆ.ಎಲ್​​ ರಾಹುಲ್​ ನಿವೃತ್ತಿ ಘೋಷಿಸಲು ರೋಹಿತ್​​ ಕಾರಣವೇನು? ಮತ್ತೊಂದು ಪೋಸ್ಟ್​ ವೈರಲ್​!

https://newsfirstlive.com/wp-content/uploads/2024/08/Rohit-Sharma_KL-Rahul.jpg

Load More