newsfirstkannada.com

ಒಂದೇ ವಾರದಲ್ಲಿ ವೀಕ್ಷಕರಿಂದ ಮೆಚ್ಚುಗೆಯ ಮಾತು.. ಭರತ್​​ ನಾಯ್ಕ ಫೈಟ್​ಗೆ ಫ್ಯಾನ್ಸ್​ ಶಾಕ್​; ಯಾರು ಇವರು?

Share :

Published July 6, 2024 at 6:26am

  10 ಗಂಟೆ ಸ್ಲಾಟ್​ನಲ್ಲಿ ಉತ್ತಮ ಸ್ಕೋರ್ ಮಾಡಿದ ಬ್ರಹ್ಮಗಂಟು ಧಾರಾವಾಹಿ​

  ಮುದ್ದಾದ ರೂಪಾಳ ಅಣ್ಣನ ಪಾತ್ರದಲ್ಲಿ ಬಣ್ಣ ಹಚ್ಚಿರೋ ಕಿರುತೆರೆ ನಟ ಭರತ್​

  ಈ ವಾರದ ಟಿಆರ್​ಪಿ ಲೆಕ್ಕಾಚಾರ ಬಂದಾಗ ಆ ಸ್ಕೋರ್ ಡಬಲ್​ ಆಗುತ್ತಾ?

ಕಳೆದ ವಾರ ಲಾಂಚ್ ಆಗಿರುವ ಬ್ರಹ್ಮಗಂಟು ಧಾರಾವಾಹಿ ನಿಧಾನವಾಗಿ ವೀಕ್ಷಕರಿಗೆ ಹತ್ತಿರವಾಗುತ್ತಿದೆ. ಪಾರು ಸೀರಿಯಲ್​ನಲ್ಲಿ ಕೆಲಸ ಮಾಡಿದ ತಂಡವೇ ಬ್ರಹ್ಮಗಂಟು ಧಾರಾವಾಹಿನಲ್ಲಿ ಕೆಲಸ ಮಾಡುತ್ತಿದೆ. ನಟ, ನಿರ್ಮಾಪಕ ಹಾಗೂ ನಿರ್ದೇಶಕ ದಿಲೀಪ್​ ರಾಜ್ ನಿರ್ದೇಶನದಲ್ಲಿ ಮೂಡಿ ಬರ್ತಿರೋ ಸ್ಟೋರಿಯಲ್ಲಿ ವಿಶೇಷ ದೃಶ್ಯಗಳನ್ನು ಸಂಯೋಜನೆ ಮಾಡಲಾಗಿದೆ.​

ಇದನ್ನೂ ಓದಿ: ಮಣ್ಣಿನಡಿ ಬಚ್ಚಿಟ್ಟ ಸೂಟ್​​ಕೇಸ್​ ಹೊರ ತೆಗೆದ ರಶ್ಮಿಕಾ ಮಂದಣ್ಣ! ಕಂತೆ ಕಂತೆ ನೋಟು! ಇದು ಎಲ್ಲಿಂದ ಬಂತು?

ಈಗಾಗಲೇ ಸ್ಟೋರಿ ಹೇಗೆ ಸಾಗುತ್ತೆ ಅನ್ನೋದನ್ನು ಪ್ರೊಮೋದಲ್ಲೇ ಬಿಟ್ಟುಕೊಟ್ಟಿರೋ ತಂಡ ದೃಶ್ಯ ವೈಭವ ಸೃಷ್ಟಿಸುವುದರ ಮೂಲಕ ವೀಕ್ಷಕರನ್ನ ಸೇಳೆಯುತ್ತಿದೆ. ಅದಕ್ಕೆ ಸಾಕ್ಷಿ ಎನ್ನುವಂತೆ ಫೈಟ್​ ಸೀನ್​ ಒಂದು ಸಂಯೋಜನೆ ಆಗಿರೋದು. ನಾಯಕ ಚಿರಾಗ್​ ಮೇಲೆ ಅಟ್ಯಾಕ್​ ಆಗುತ್ತದೆ. ಆಗ ಅಲ್ಲಿಯೇ ಇದ್ದ ಬಾಮೈದ ನರಸಿಂಹ ಬಾವನನ್ನ ಕಾಡುತ್ತಾನೆ. ಸಿನಿಮಾ ರೀತಿಯಲ್ಲೇ ಅದ್ಭುತವಾದ ಫೈಟ್​ ಸೀನ್​ ತಂದಿದ್ದಾರೆ.

ಈ ಸೀರಿಯಲ್​ನಲ್ಲಿ ಭುವನ್​ ಹಾಗೂ ನರಸಿಂಹನ ಪಾತ್ರ ಮಾಡ್ತಿರೋ ಭರತ್​ ಎಸ್​ ನಾಯ್ಕ ಸಖತ್​ ಸ್ಟಂಟ್ಸ್​ ಮಾಡಿದ್ದಾರೆ. ಇಬ್ಬರ ‘ಜುಗಲ್ ಬಂದಿ’ಗೆ ಶಿಳ್ಳೆ ಚಪ್ಪಾಳೆ ನೀಡುತ್ತಿದ್ದಾರೆ ಅಭಿಮಾನಿಗಳು. ಈ ಹಿಂದೆ ಎಲ್ಲೂ ಕಾಣಿಸಿಕೊಳ್ಳದ ಭರತ್​ ಅವರು ರಂಗಭೂಮಿ ಕಲಾವಿದ. ಜೊತೆಗೆ ಅದ್ಭುತವಾದ ಗಾಯಕ ಕೂಡ ಹೌದು.

ಇದನ್ನೂ ಓದಿ: ಧ್ರುವ ಸರ್ಜಾ ಅವರ ಜಿಮ್ ಟ್ರೈನರ್ ಮೇಲಿನ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್.. ಅಸಲಿ ವಿಚಾರ ಬಯಲು..!

ಇದೇ ಮೊದಲ ಬಾರಿಗೆ ಧಾರಾವಾಹಿಗೆ ಬಣ್ಣ ಹಚ್ಚಿದ್ದಾರೆ ಭರತ್​. ಸದ್ಯ ರೂಪ ಅವರ ಅಣ್ಣನ ಪಾತ್ರದಲ್ಲಿ ಭರತ್​ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಭರತ್​ ಅವರ ನಟನೆಗೆ ವೀಕ್ಷಕರು ಫಿದಾ ಆಗಿದ್ದಾರೆ. 10 ಗಂಟೆ ಸ್ಲಾಟ್​ನಲ್ಲಿ ಬ್ರಹ್ಮಗಂಟು ಉತ್ತಮ ಸ್ಕೋರ್​ ಮಾಡ್ತಿದೆ. ಈ ವಾರದ ಟಿಆರ್​ಪಿ ಲೆಕ್ಕಾಚಾರ ಬಂದಾಗ ಆ ಸ್ಕೋರ್ ಡಬಲ್​ ಆಗುತ್ತಾ ಕಾದು ನೋಡಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಒಂದೇ ವಾರದಲ್ಲಿ ವೀಕ್ಷಕರಿಂದ ಮೆಚ್ಚುಗೆಯ ಮಾತು.. ಭರತ್​​ ನಾಯ್ಕ ಫೈಟ್​ಗೆ ಫ್ಯಾನ್ಸ್​ ಶಾಕ್​; ಯಾರು ಇವರು?

https://newsfirstlive.com/wp-content/uploads/2024/07/Brahmagantu.jpg

Load More